ಬೆಂಗಳೂರು: ಬೆಂಗಳೂರು ಮಳೆಗೆ (Bengaluru Rain) ಪರಿಹಾರ ಕೊಡದ ಈ ಸರ್ಕಾರಕ್ಕೆ ಕಣ್ಣು, ಕಿವಿ ಏನು ಇಲ್ಲ. ಇದಾ ಡಿಕೆ ಶಿವಕುಮಾರ್ (DK Shivakumar) ಅವರ ಬ್ರ‍್ಯಾಂಡ್ ಬೆಂಗಳೂರು (Brand Bengaluru) ಎಂದು ಜೆಡಿಎಸ್ ಶಾಸಕಾಂಗ ನಾಯಕ ಸುರೇಶ್ ಬಾಬು (Suresh Babu) ಸರ್ಕಾರ ಮತ್ತು ಡಿಕೆ ಶಿವಕುಮಾರ್ ವಿರುದ್ಧ ಕಿಡಿಕಾರಿದ್ದಾರೆ.
ಬೆಂಗಳೂರಿನ ಮಳೆ ಅವಾಂತರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಡಿಕೆಶಿವಕುಮಾರ್ ಹಾಗೂ ನನ್ನ ವಿಷನ್ ಬೇರೆ. ಬ್ರ‍್ಯಾಂಡ್ ಬೆಂಗಳೂರು ಮಾಡುತ್ತೇನೆ ಎಂದು ಹೇಳುತ್ತಾರೆ. ಡ್ರೈನೇಜ್ ಸಿಸ್ಟಮ್ ಬೆಂಗಳೂರಿನಲ್ಲಿ ಹಾಳಾಗಿದೆ. ಇವರು ಬಂದು ಒಂದೂವರೆ ವರ್ಷ ಆಗಿದೆ. ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಂಡಿಲ್ಲ. ಅವರಿಗೆ ನೂರೆಂಟು ಸಮಸ್ಯೆಗಳು ಅನ್ನಿಸುತ್ತದೆ. ಇಂತಹ ದೊಡ್ಡ ಸಿಟಿ, ಬೇರೆ ದೇಶ ನಮ್ಮ ಕಡೆ ಇನ್ವೆಸ್ಟ್ ಮಾಡೋಕೆ ನೋಡುತ್ತಿದೆ. ಆದರೆ ಒಂದು ದಿನ ಮಳೆ ಬಂದರೂ ಅದನ್ನು ಸರಿ ಮಾಡಲು ಆಗುತ್ತಿಲ್ಲ. ಸರಿಯಾದ ವ್ಯವಸ್ಥೆ ಮಾಡದ ಇವರು ಯಾವ ರೀತಿ ಬ್ರ‍್ಯಾಂಡ್ ಬೆಂಗಳೂರು ಮಾಡುತ್ತಾರೆ? ಈ ಸರ್ಕಾರಕ್ಕೆ ನಾಚಿಕೆ ಆಗಬೇಕು. ಇಂತಹ ದೊಡ್ಡ ಸಿಟಿಯಲ್ಲಿ ರಸ್ತೆ, ಚರಂಡಿ ಸರಿಯಾಗಿ ಮಾಡದ ಈ ಸರ್ಕಾರ ನಾಲಾಯಕ್ ಸರ್ಕಾರ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ತಾಳೆಗರಿಯಲ್ಲಿ ಗದಾಯುದ್ಧ ಬರೆಯಲು ಮುಂದಾದ ಸಂಗಮೇಶ ಕಲ್ಯಾಣಿ
ಬೆಂಗಳೂರಿನ 7 ಜನ ಮಂತ್ರಿಗಳಿಗೆ ಜನರ ಮುಂದೆ ಹೋಗೋಕೆ ಮುಖವಿಲ್ಲ. ಅನುದಾನ ಕೊಡೋಕೆ ಆಗುತ್ತಿಲ್ಲ. ಕಾರ್ಪೊರೇಷನ್ ಎಲೆಕ್ಷನ್ ಮಾಡೋಕೆ ಯೋಗ್ಯತೆ ಇಲ್ಲ. ಸಂವಿಧಾನ ಉಳಿಸುತ್ತೇನೆ ಎನ್ನುತ್ತಾರೆ. ಆದರೆ ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ, ಕಾರ್ಪೋರೇಷನ್ ಎಲೆಕ್ಷನ್ ಮಾಡುತ್ತಿಲ್ಲ. ಯಾವುದೇ ಅಭಿವೃದ್ಧಿ ಮಾಡುತ್ತಿಲ್ಲ ಎಂದು ಹರಿಹಾಯ್ದರು. ಇದನ್ನೂ ಓದಿ: ಕೆಂಗೇರಿ ಕೆರೆಗೆ ಬಿದ್ದ ಅಣ್ಣ ತಂಗಿ, 3 ಗಂಟೆಗಳಿಂದ ಸತತ ಕಾರ್ಯಾಚರಣೆ – ಅಣ್ಣನ ಮೃತದೇಹ ಪತ್ತೆ
ಕಾಂಗ್ರೆಸ್ ಶಾಸಕರೇ ಅನುದಾನ ಕೊಡಿ ಇಲ್ಲ ಸಾಯುತ್ತೇನೆ ಅಂತ ಹೇಳೋ ಪರಿಸ್ಥಿತಿ ಬಂದಿರಲಿಲ್ಲ. ಬೆಂಗಳೂರು ಬ್ರ‍್ಯಾಂಡ್ ಬೆಂಗಳೂರು ಮಾಡೋಕೆ ಆಗಿಲ್ಲ. ರಾಮನಗರವನ್ನು ಬೆಂಗಳೂರು ದಕ್ಷಿಣ ಅಂತ ಮಾಡಿದ್ದಾರೆ. ಇದು ವ್ಯಾಪಾರ ಮಾಡೋಕೆ ಅಷ್ಟೇ. ಬೆಂಗಳೂರು ದಕ್ಷಿಣ ಮಾಡಲು ಹೊರಟಿರುವುದು ಅಭಿವೃದ್ಧಿ ಮಾಡಲು ಅಲ್ಲ. ಇವರ ಆಸ್ತಿ ಬೆಲೆ ಜಾಸ್ತಿ ಮಾಡಿಕೊಳ್ಳೋಕೆ ಮಾಡಿದ್ದಾರೆ ಅಷ್ಟೇ ಎಂದರು. ಇದನ್ನೂ ಓದಿ: ಪೇಂಟಿಂಗ್ ಮಾಡುವಾಗ 3ನೇ ಮಹಡಿಯಿಂದ ಬಿದ್ದು ಯುವಕ ಸಾವು
ನೀರು ಮನೆಗೆ ನುಗ್ಗಿವೆ. ರಸ್ತೆಯಲ್ಲಿ ವಾಹನಗಳು ಮುಳುಗಿವೆ. ಜನರಿಗೆ ರಕ್ಷಣೆ ಕೊಡೋಕೆ ಆಗುತ್ತಿಲ್ಲ. ಇದು ಕೆಟ್ಟ ಸರ್ಕಾರ. ಕಾಂಗ್ರೆಸ್ ಅವರು ಬೇರೆ ಅವರ ಮೇಲೆ ದೂಷಣೆ ಮಾಡೋಕೆ ಎತ್ತಿದ ಕೈ. ಪರಿಸ್ಥಿತಿ ಸರಿ ಮಾಡೋ ಕೆಲಸ ಮಾಡುತ್ತಿಲ್ಲ. ಈಗಲಾದರೂ ಸರ್ಕಾರ ಗಮನಹರಿಸಲಿ. ಜನರು ನಿಮಗೆ ಒಳ್ಳೆಯ ಸ್ಥಾನವನ್ನ ಕೊಟ್ಟಿದ್ದಾರೆ ಅಂತ ಮನವರಿಕೆ ಇದ್ದರೆ ಸಮಸ್ಯೆ ಪರಿಹಾರ ಮಾಡಿ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ನಾನು ಅರಣ್ಯ ಭೂಮಿ ಒತ್ತುವರಿ ಮಾಡಿಲ್ಲ: ದೂರಿನ ಬೆನ್ನಲ್ಲೇ ಸಚಿವ ಬೋಸರಾಜು ಸ್ಪಷ್ಟನೆ