ವಾಷಿಂಗ್ಟನ್: ನೀರು ಅಂದ್ರೆ ಯಾರಿಗಾದ್ರೂ ಉತ್ಸಾಹ ಉಕ್ಕಿ ಬರೋದು ಸಹಜ. ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರ ತನಕ ನೀರು ಅಂದ್ರೆ ತುಂಬಾನೇ ಇಷ್ಟ ಪಡುತ್ತಾರೆ. ಈಗ ಗೋರಿಲ್ಲಾ ಒಂದು ನೀರಿನಲ್ಲಿ ನೃತ್ಯ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.
ಅಮೆರಿಕಾದ ಡಲ್ಲಾಸ್ ಮೃಗಾಲಯದಲ್ಲಿ ಗೋರಿಲ್ಲಾವೊಂದು ನೀರಿನ ತೊಟ್ಟಿಯಲ್ಲಿ ನಿಂತು ಡ್ಯಾನ್ಸ್ ಮಾಡಿದೆ. ಹೌದು, ಈ 14 ವರ್ಷದ ಗಂಡು ಗೊರಿಲ್ಲ ಬಕೆಟ್ ನೀರಿನಲ್ಲಿ ನಿಂತು ಸಖತ್ ಡ್ಯಾನ್ಸ್ ಮಾಡಿದೆ. ಇದನ್ನು ಪ್ರವಾಸಿಗರೊಬ್ಬರು ಚಿತ್ರೀಕರಿಸಿದ್ದು, ವಿಡಿಯೋವನ್ನು ಯುಟ್ಯೂಬ್‍ಗೆ ಅಪ್ಲೋಡ್ ಮಾಡಲಾಗಿದೆ.
Advertisement
ಈ ವಿಡಿಯೋವನ್ನು ಇದೂವರೆಗೆ 19 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.
Advertisement
Advertisement
Advertisement