ಚಿಕ್ಕಬಳ್ಳಾಪುರ: ಸ್ಯಾಂಡಲ್‍ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಭೌತಿಕವಾಗಿ ನಮ್ಮನ್ನೆಲ್ಲಾ ಅಗಲಿದರೂ, ಮಾನಸಿಕವಾಗಿ ಎಲ್ಲರ ಹೃದಯದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಪುನೀತ್ ರಾಜ್ ಕುಮಾರ್ ನಮ್ಮ ಜೊತೆಯಲ್ಲಿ ಇಲ್ಲದಿದ್ದರೂ ಒಂದಲ್ಲ ಒಂದು ರೂಪದಲ್ಲಿ ಪ್ರತಿ ದಿನ ಪುನೀತ್ ಎಂಟ್ರಿ ಕೊಡ್ತಾನೆ ಇದ್ದಾರೆ. ಅದೇ ರೀತಿ ಈ ಬಾರಿ ನಮ್ಮ ಪ್ರೀತಿಯ ಅಪ್ಪು ಪರಮಾತ್ಮನ ರೂಪದಲ್ಲಿ ನಮ್ಮ ಮುಂದೆ ಬರೋಕೆ ಭರ್ಜರಿಯಾಗಿ ರೆಡಿ ಆಗ್ತಿದ್ದಾರೆ.
Advertisement
ಹೌದು. ಈ ಬಾರಿಯ ಗೌರಿ-ಗಣೇಶ ಹಬ್ಬಕ್ಕೆ ನಮ್ಮ ಪ್ರೀತಿಯ ಅಪ್ಪುನೇ ವಿಶೇಷ. ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇದೆ. ಗೌರಿ ಗಣೇಶ ಹಬ್ಬಕ್ಕೆ ಮಾರುಕಟ್ಟೆಗೆ ತರಹೇವಾರಿ ಗಣೇಶನ ಮೂರ್ತಿಗಳು ಅದಾಗಲೇ ಆಗಮಿಸಿವೆ. ಈ ಬಾರಿ ಪುನೀತ್ ರಾಜ್ ಕುಮಾರ್ ಗಣೇಶ ಮೂರ್ತಿಗಳದ್ದೇ ವಿಶೇಷ ಎನ್ನಬಹುದಾಗಿದೆ. ಪುನೀತ್ ರಾಜ್ ಕುಮಾರ್ ಗಣೇಶನಿಗಾಗಿ ಈಗ ಎಲ್ಲೆಲ್ಲೂ ಡಿಮ್ಯಾಂಡ್ ಶುರುವಾಗಿದೆ.
Advertisement
Advertisement
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರದ ರಾಜಗೋಪಾಲ್ ಎಂಬವರು ತಮ್ಮ ಮಕ್ಕಳ ಜೊತೆ ಸೇರಿ ಮಣ್ಣಿನ ಗಣಪ ತಯಾರಿಯಲ್ಲಿ ನಿರತರಾಗಿದ್ದಾರೆ. ಈ ಬಾರಿಯೂ ಮಣ್ಣಿನ ಗಣಪಗಳ ತಯಾರಿ ಕಾರ್ಯ ಭರದಿಂದ ಸಾಗುತ್ತಿದೆ. ಈ ಬಾರಿ ಪುನೀತ್ ರಾಜ್ ಕುಮಾರ್ ಗಣೇಶ ಮೂರ್ತಿಗಳನ್ನ ತಯಾರಿ ಮಾಡಿದ್ದು ನೋಡುಗರ ಕಣ್ಮನ ಸೆಳೆಯುತ್ತಿದೆ.
Advertisement
ಕಳೆದ 1 ತಿಂಗಳಿನಿಂದಲೇ ಗಣೇಶ ಮೂರ್ತಿಗಳ ತಯಾರಿ ಕಾಯಕ ಆರಂಭಿಸಿರುವ ರಾಜಗೋಪಾಲ್ ಕುಟುಂಬ, ಇದುವರೆಗೂ 30 ಕ್ಕೂ ಹೆಚ್ಚು ಪುನೀತ್ ರಾಜ್ ಕುಮಾರ್ ಗಣಪನ ಮೂರ್ತಿಗಳನ್ನ ತಯಾರಿ ಮಾಡಿದ್ದಾರೆ. ಇನ್ನೂ ಈಗಾಗಲೇ ಬಹುತೇಕ ಗಣಪಗಳನ್ನ ಸೇಲ್ ಮಾಡಿದ್ದು ಮತ್ತಷ್ಟು ಗಣಪನ ಮೂರ್ತಿಗಳಿಗಾಗಿ ಡಿಮ್ಯಾಂಡ್ ಶುರುವಾಗಿದೆ ಎಂದು ಹೇಳುತ್ತಿದೆ. ಇದನ್ನೂ ಒದಿ: ಹಿಂದಿ ಸಿನಿಮಾ ಬಾಯ್ಕಾಟ್: ಪ್ರೇಕ್ಷಕರನ್ನು ಬೆದರಿಸುತ್ತಿದ್ದಾರಂತೆ ನಟ ಅರ್ಜುನ್ ಕಪೂರ್
ಅಂದಹಾಗೆ ಪ್ರೀತಿಯ ಅಪ್ಪು ಪುನೀತ್ ರಾಜ್ ಕುಮಾರ್‍ರನ್ನ ಅಪ್ಪಿ ಹಿಡಿದಿರುವ ಗಣೇಶ, ಅಪ್ಪುವನ್ನ ಪಕ್ಕದಲ್ಲೇ ಕೂರಿಸಿಕೊಂಡಿರುವ ಗಣೇಶ, ಕೈಯಲ್ಲಿ ಅಪ್ಪು ಎತ್ತಿ ಹಿಡಿದಿರುವ ಗಣೇಶ ಸೇರಿದಂತೆ ನಾನಾ ರೀತಿಯ ಗಣೇಶ ಮೂರ್ತಿಗಳನ್ನ ತಯಾರು ಮಾಡಿದ್ದಾರೆ. ಇನ್ನೂ ಪುನೀತ್ ರಾಜ್ ಕುಮಾರ್ ರೂಪ ಸಹ ಚೆನ್ನಾಗಿ ಮೂಡಿ ಬಂದಿದ್ದು ಎಲ್ಲರ ಆಕರ್ಷಿಸುತ್ತಿದೆ. ಗಣೇಶ ಮೂರ್ತಿಗಳ ಖರೀದಿಗೆ ಬಂದವರೆಲ್ಲಾ ಪುನೀತ್ ಗಣೇಶನನ್ನ ಕೊಡಿ ಅಂತಿದ್ದಾರೆ ಎಂದು ರಾಜಗೋಪಲ್ ಮಗ ಗಗನ್ ಹೇಳಿದ್ದಾರೆ.
ಪುಟಾಣಿ ಪುನೀತ್ ಗಣೇಶ್ ಮೂರ್ತಿಯಿಂದ ಹಿಡಿದು ಐದಾರು ಅಡಿ ಎತ್ತರದ ಪುನೀತ್ ರಾಜ್ ಕುಮಾರ್ ಗಣೇಶನ ಮೂರ್ತಿಗಳನ್ನ ತಯಾರಿ ಮಾಡಲಾಗಿದ್ದು 300 ರೂಪಾಯಿಯಿಂದ ಹಿಡಿದು-3000 ರೂಪಾಯಿವರೆಗೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಒಟ್ಟಾರೆ ಪುನೀತ್ ರಾಜ್ ಕುಮಾರ್ ಈ ಬಾರಿ ಗಣೇಶನ ಜೊತೆ ಆಗಮಿಸಲಿದ್ದು, ಪ್ರೀತಿಯಿಂದ ಎಲ್ಲರೂ ಬರ ಮಾಡಿಕೊಳ್ಳೋಣ.