ಮುಂಬೈ: ಇದೇ ತಿಂಗಳ ಜೂನ್ 9 ರಿಂದ 19ರ ವರೆಗೆ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಟಿ20 5 ಪಂದ್ಯಗಳ ಸರಣಿ ನಡೆಯಲಿದೆ. ಈ ಸರಣಿಗೆ ವೇಗಿಯ ಬೌಲರ್ ಅವೇಶ್ ಖಾನ್ ಟೀಂ ಇಂಡಿಯಾಕ್ಕೆ ಆಯ್ಕೆಯಾಗಿದ್ದು, ದಕ್ಷಿಣ ಆಫ್ರಿಕಾಗೆ ಕಂಟಕವಾಗಿ ಕಾಡಲಿದ್ದಾರೆ.
ಅವೇಶ್ ಖಾನ್ ಟೀಂ ಇಂಡಿಯಾದ ಅಪಾಯಕಾರಿ ಬೌಲರ್‌ಗಳಲ್ಲಿ ಒಬ್ಬರು. ಡೆತ್ ಓವರ್‌ಗಳಲ್ಲಿ ಮಾರಕ ಯಾರ್ಕರ್‌ಗಳನ್ನು ಎಸೆಯುವುದರಲ್ಲಿ ಅವೇಶ್ ಖಾನ್ ನಿಪುಣರಾಗಿದ್ದಾರೆ. ಇದನ್ನೂ ಓದಿ: ಭಾರತ, ದಕ್ಷಿಣ ಆಫ್ರಿಕಾ T20 ಪಂದ್ಯ ರದ್ದುಗೊಳಿಸುವಂತೆ ಹೈಕೋರ್ಟ್‌ಗೆ ಅರ್ಜಿ
Advertisement
Advertisement
ಈಚೆಗಷ್ಟೇ ಮುಗಿದ 15ನೇ ಆವೃತ್ತಿಯ ಐಪಿಎಲ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿದ್ದ ಅವೇಶ್ ಖಾನ್ ಬೌಲಿಂಗ್‌ಗೆ ಎದುರಾಳಿ ತಂಡದ ಬ್ಯಾಟ್ಸ್‌ಮನ್‌ಗಳು ಸಿಕ್ಸ್ ಹೊಡೆಯಲು ಹೆಣಗಾಡಿದ್ದಾರೆ. ಅದಕ್ಕಾಗಿಯೇ ಟೀಂ ಇಂಡಿಯಾದ T20 ಸರಣಿಯಲ್ಲಿ ಅವೇಶ್‌ಖಾನ್‌ಗೆ ಅವಕಾಶ ನೀಡಲಾಗಿದೆ. ಇದನ್ನೂ ಓದಿ: ಎಂ.ಎಸ್ ಧೋನಿ ಸೇರಿ 8 ಮಂದಿ ವಿರುದ್ಧ FIR
Advertisement
Advertisement
ಯಾರ್ಕರ್ ಮಾಸ್ಟರ್ ಖಾನ್: ಟೀಂ ಇಂಡಿಯಾದಲ್ಲಿ ಡೆತ್ ಓವರ್ ಸ್ಪೆಷಲಿಸ್ಟ್ ಎಂದೇ ಖ್ಯಾತಿಯಾಗಿರುವ ಅವೇಶ್ ಖಾನ್ ನನ್ನ ಆಯ್ಕೆಗಾರರು ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಆಯ್ಕೆ ಮಾಡಿದ್ದಾರೆ. ಅವೇಶ್ ಖಾನ್ ಐಪಿಎಲ್ 2022ರ 13 ಪಂದ್ಯಗಳಲ್ಲಿ 18 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವೇಶ್ ಖಾನ್ ಎಕಾನಮಿ ರೇಟ್ 8.72 ಇದೆ. ಐಪಿಎಲ್‌ನಲ್ಲಿ ಅವರ ಅತ್ಯುತ್ತಮ ಪ್ರದರ್ಶನವು ಟೀಂ ಇಂಡಿಯಾದಲ್ಲಿ ಅವಕಾಶ ಕಲ್ಪಿಸಿಕೊಟ್ಟಿದೆ. ಇದನ್ನೂ ಓದಿ: ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಗಂಗೂಲಿ ರಾಜೀನಾಮೆ ನೀಡಿಲ್ಲ: ಜಯ್ ಶಾ ಸ್ಪಷ್ಟನೆ
ಅಲ್ಲದೆ ಖಾನ್ ಎಂತಹ ಒತ್ತಡದ ಪರಿಸ್ಥಿತಿಯಲ್ಲೂ ಉತ್ತಮ ಬೌಲಿಂಗ್ ಪ್ರದರ್ಶನ ನೀಡುತ್ತಾರೆ, ಶಾಂತವಾಗಿ ವರ್ತಿಸುತ್ತಾರೆ. ಇದರಿಂದ ಟೀಂ ಇಂಡಿಯಾದಲ್ಲಿ ಅವಕಾಶ ಸಿಕ್ಕಿದ್ದು, ಮುಂದೆ ಉತ್ತಮ ಆಟಗಾರರಾಗಿ ಬೆಳೆಯುವ ವಿಶ್ವಾಸ ಹೊಂದಿದ್ದಾರೆ.