ಬೀಜಿಂಗ್: ಪರಿಸರ ಸಂರಕ್ಷಣೆಗಾಗಿ, ಸ್ವಚ್ಛತೆಗಾಗಿ ದುಡಿಯುವ ಅನೇಕ ಪರಿಸರಪ್ರೇಮಿಗಳ ಬಗ್ಗೆ ಕೇಳಿರ್ತೀರ. ಹಾಗೇ ಇಲ್ಲೊಬ್ಬ ಪರಿಸರಪ್ರೇಮಿ ಬಗ್ಗೆ ನೀವು ಕೇಳಲೇಬೇಕು. ಅದು ಬೇರೆ ಯಾರೂ ಅಲ್ಲ, ಕಳೆದ 10 ವರ್ಷಗಳಿಂದ ನದಿಯೊಂದರ ತ್ಯಾಜ್ಯವನ್ನು ಸ್ವಚ್ಛ ಮಾಡ್ತಿರೋ ಈ ಗೋಲ್ಡನ್ ರಿಟ್ರೀವರ್ ನಾಯಿ.
Advertisement
ಚೀನಾದ ಜಿಯಾಂಗ್ಸು ಪ್ರಾಂತ್ಯದ ಸುಝೌನಲ್ಲಿರುವ ನದಿಯಲ್ಲಿ ಪ್ಲಾಸ್ಟಿಕ್ ಬಾಟಲಿಗಳನ್ನ ಹೆಕ್ಕಿ ತಂದು ಸ್ವಚ್ಛತೆ ಕಾಪಾಡುತ್ತಿದೆ ಈ ನಾಯಿ. ಈ ಬಗ್ಗೆ ಇಲ್ಲಿನ ಪತ್ರಿಕೆಯೊಂದು ವರದಿ ಮಾಡಿದ್ದು, ಈ ನಾಯಿ ಕಳೆದ 10 ವರ್ಷಗಳಲ್ಲಿ ನದಿಯಿಂದ ಸುಮಾರು 2 ಸಾವಿರಕ್ಕೂ ಹೆಚ್ಚು ಪ್ಲಾಸ್ಟಿಕ್ ಬಾಟಲಿಗಳನ್ನ ಹೊರತೆಗೆದಿದೆ ಎಂದು ಹೇಳಿದೆ. ಕೆಲವೊಮ್ಮೆ ದಿನಕ್ಕೆ 20 ರಿಂದ 30 ಬಾಟಲಿಗಳನ್ನ ಹೊರತೆಗೆದಿದೆ. ಇದಕ್ಕಾಗಿ ಈ ನಾಯಿಗೆ ಇದರ ಮಾಲೀಕ ತರಬೇತಿ ನೀಡಿದ್ದಾರೆ.
Advertisement
Advertisement
ತನ್ನ ನಿಸ್ವಾರ್ಥ ಸೇವೆಯಿಂದ ಈ ನಾಯಿ ಸ್ಥಳೀಯರಿಗೆ ಸೆಲೆಬ್ರಿಟಿಯಾಗಿದೆ. ಟ್ವಿಟ್ಟರ್‍ನಲ್ಲಿ ಅನೇಕ ಮಂದಿ ಈ ನಾಯಿಯ ಸೇವೆಯನ್ನ ಶ್ಲಾಘಿಸಿದ್ದಾರೆ.
Advertisement
Selfless dog in Suzhou clears over 2,000 plastic bottles from river in 10 years https://t.co/lZVw9QNWMd pic.twitter.com/pSybPd7W7F
— People's Daily, China (@PDChina) July 7, 2017