ಬೀಜಿಂಗ್: ಚೀನಾದ 39 ವರ್ಷದ ಹಳೆಯ ಸೇತುವೆಯನ್ನು ಕೇವಲ 3.5 ಸೆಕೆಂಡ್ ನಲ್ಲಿ ನೆಲಸಮಗೊಳಿಸಲಾಗಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಭಾನುವಾರ ಬೆಳಗ್ಗೆ 150 ಮೀಟರ್ ಉದ್ದ ಮತ್ತು 25 ಮೀಟರ್ ಅಗಲ ಹೊಂದಿದ್ದ ನನ್ಹು ಸೇತುವೆಯನ್ನು 700 ಕಿಲೋ ಗ್ರಾಂ ಸ್ಫೋಟಕವನ್ನು ಬಳಸಿ ಕೆಡವಲಾಗಿದೆ. ಹಳೆಯ ಸೇತುವೆಯಲ್ಲಿ ಸಂಚರಿಸುವುದು ಅಪಾಯಕಾರಿಯಾಗಿದ್ದು, ಹೀಗಾಗಿ ಹೊಸ ಸೇತುವೆಯ ನಿರ್ಮಾಣ ಮಾಡುವ ಉದ್ದೇಶದಿಂದ 1978 ರಲ್ಲಿ ನಿರ್ಮಿಸಿದ್ದ ಸೇತುವೆಯನ್ನು ನೆಲಸಮಗೊಳಿಸಲಾಗಿದೆ.
Advertisement
ಹೊಸ ಸೇತುವೆಯು ಅಗಲವಾಗಿದ್ದು, ಸೇತುವೆಯ ಎರಡು ಬದಿಯಲ್ಲಿ ಪಾದಚಾರಿಗಳಿಗೆ ಓಡಾಡಲು ಅವಕಾಶ ನೀಡಲಾಗಿದೆ. ಸೆಪ್ಟೆಂಬರ್ ಅಂತ್ಯದ ವೇಳೆಗೆ ಹೊಸ ಸೇತುವೆ ಸಂಚಾರಕ್ಕೆ ಮುಕ್ತವಾಗಿರುತ್ತದೆ ಡೈಲಿ ಚೀನಾ ವರದಿ ಮಾಡಿದೆ.
Advertisement
Advertisement
Advertisement