ಇಸ್ಲಾಮಾಬಾದ್: ಸಾಮಾನ್ಯವಾಗಿ ನಾವು ತಲೆಯನ್ನ ಎಡಕ್ಕೆ, ಬಲಕ್ಕೆ, ಮೇಲೆ, ಕೆಳಗೆ ಆರಾಮಾಗಿ ತಿರುಗಿಸಬಹುದು. ಆದ್ರೆ ಹಿಂದೆ ಇರೋ ವ್ಯಕ್ತಿಯನ್ನ ನೋಡೋಕೆ ಸಂಪೂರ್ಣವಾಗಿ ತಲೆಯನ್ನ ತಿರುಗಿಸಲು ಆಗೋದಿಲ್ಲ. ಇಡೀ ದೇಹವನ್ನೇ ಅವರ ಕಡೆಗೆ ತಿರುಗಿಸಿ ನಿಲ್ಲಬೇಕು. ಹಾಗೂ ಒಂದು ವೇಳೆ ತಿರುಗಿಸಲು ಪ್ರಯತ್ನಿಸಿದ್ರೆ ಕತ್ತು ಉಳುಕೋದು ಗ್ಯಾರಂಟಿ. ಆದ್ರೆ ಇಲ್ಲೊಬ್ಬ 14 ವರ್ಷದ ಬಾಲಕ ತಲೆಯನ್ನ 180 ಡಿಗ್ರಿಗೆ ತಿರುಗಿಸಿ ನೋಡುಗರಲ್ಲಿ ಅಚ್ಚರಿ ಮೂಡಿಸಿದ್ದಾನೆ.
ಪಾಕಿಸ್ತಾನ ಮೂಲದ ಮೊಹಮ್ಮದ್ ಸಮೀರ್ ತನ್ನ ತಲೆಯನ್ನ 180 ಡಿಗ್ರಿಗೆ ತಿರುಗಿಸುತ್ತಾನೆ. ಈತ ಡ್ಯಾನ್ಸರ್ ಆಗಿದ್ದು, ಡೇಂಜರಸ್ ಬಾಯ್ಸ್ ಎಂಬ ನೃತ್ಯ ತಂಡದ ಭಾಗವಾಗಿದ್ದಾನೆ. ಈ ತಂಡ ಕರಾಚಿಯಾದ್ಯಂತ ಪ್ರದರ್ಶನ ನೀಡಿದ್ದು, ಪ್ರಶಂಸೆ ಗಳಿಸಿದ್ದಾರೆ.
ಸಮೀರ್ ತಂದೆ ಪಾಶ್ವವಾರ್ಯುವಿಗೆ ಒಳಗಾಗಿ ಕೆಲಸ ಬಿಡಬೇಕಾಯ್ತು. ಆದ ಕಾರಣ ಸಮೀರ್ ತನ್ನ ಶಾಲೆ ಬಿಟ್ಟು ಹಣ ಸಂಪಾದಿಸಲು ನಿರ್ಧರಿಸಿದ್ದ. ನಂತರ ಡ್ಯಾನ್ಸ್ ತಂಡಕ್ಕೆ ಸೇರ್ಪಡೆಗೊಂಡು ಹಣ ಸಂಪಾದಿಸುತ್ತಾ ಕುಟುಂಬಕ್ಕೆ ನೆರವಾಗಿದ್ದಾನೆ.
ನೃತ್ಯ ತಂಡದ ಪ್ರದರ್ಶನಗಳಲ್ಲಿ ಈತನ ವಿಶಿಷ್ಟ ಕೌಶಲ್ಯವೇ ಪ್ರಮುಖ ಆಕರ್ಷಣೆ. ಬೊಂಬೆಯ ಕತ್ತನ್ನ ಬೇಕಾದಂತೆಲ್ಲಾ ತಿರುಗಿಸುವಂತೆ ಈತ ತನ್ನ ತಲೆಯನ್ನ 180 ಡಿಗ್ರಿ ತಿರುಗಿಸೋದನ್ನ ನೋಡಿದ್ರೆ ಮೈ ಜುಮ್ಮೆನುತ್ತೆ. ಖಂಡಿತ ನೀವು ಇದನ್ನ ಮನೆಯಲ್ಲಿ ಟ್ರೈ ಮಾಡಬೇಡಿ.
https://www.youtube.com/watch?v=FdMcxgwPh8Q