ಈ ವರ್ಷ ಭಾರತದಲ್ಲಿ ಆಗಸ್ಟ್ ತಿಂಗಳಲ್ಲಿ ಬಿದ್ದ ಸರಾಸರಿ ಮಳೆಯು 1901ರ ನಂತರ ದಾಖಲಾಗಿರುವ ಮಳೆಯ ಪ್ರಮಾಣಕ್ಕಿಂತ ಅತೀ ಕಡಿಮೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಅಂಕಿ-ಸಂಖ್ಯೆಗಳು ತೋರಿಸಿವೆ.
ಹೌದು. 2023ರ ಆಗಸ್ಟ್ ತಿಂಗಳಲ್ಲಿ ಭಾರತದಲ್ಲಿ 16.27 ಸೆಂ.ಮೀಟರ್ ಮಳೆ ಸುರಿದಿದೆ. ಇದು ಸರಾಸರಿಗಿಂತ 36%ದಷ್ಟು ಕಡಿಮೆಯಾಗಿದೆ. ಈ ತಿಂಗಳಿನಲ್ಲಿ ಸರಾಸರಿ 25.4 ಸೆಂಟಿಮೀಟರ್ ಮಳೆ ಸುರಿಯುತ್ತದೆ. ಇದಕ್ಕಿಂತ ಮೊದಲು ಅಂದರೆ 2005ರಲ್ಲಿ ಇಡೀ ದೇಶದಲ್ಲಿಯೇ ಆಗಸ್ಟ್ ತಿಂಗಳಿನಲ್ಲಿ ಅತ್ಯಂತ ಕಡಿಮೆ ಮಳೆಯಾಗಿದೆ. ಈ ವರ್ಷ ದೇಶಾದ್ಯಂತ ಸರಾಸರಿ 19.12 ಮೀಟರ್ ಮಳೆ ಸುರಿದಿತ್ತು. ದೇಶದಲ್ಲಿ ಸುಮಾರು 36% ರಷ್ಟು ಜಿಲ್ಲೆಗಳು ಅಂದರೆ 263 ಜಿಲ್ಲೆಗಳಲ್ಲಿ ಸರಾಸರಿಗಿಂತ 20% ಅಥವಾ ಅದಕ್ಕಿಂತ ಹೆಚ್ಚಿನ ಮಳೆ ಕೊರತೆ ಕಾಣಿಸಿಕೊಂಡಿದೆ ಎಂಬುದಾಗಿ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ರೈತರು ಕಂಗಾಲಾಗಿದ್ದಾರೆ. ಮಳೆ ಕೊರತೆಯಿಂದಾಗಿ ತಾಪಮಾನ ಏರಿಕೆ ಕಂಡಿದೆ.
Advertisement
Advertisement
ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಮಳೆ ಕೊರತೆಯಾಗಿದೆ. ಆಗಸ್ಟ್ ನಲ್ಲಿ ಬೀದರ್ ಜಿಲ್ಲೆಯಲ್ಲಿ ಗರಿಷ್ಠ (89%) ಮಳೆ ಕೊರತೆಯಾಗಿದೆ. ಆರು ಜಿಲ್ಲೆಗಳಲ್ಲಿ ವಾಡಿಕೆಗಿಂತ 80% ಹಾಗೂ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆ ಅಭಾವವಾಗಿದೆ. ಕರಾವಳಿ ಭಾಗದಲ್ಲಿ 72% ರಷ್ಟು, ಮಲೆನಾಡಿನಲ್ಲಿ 80% ರಷ್ಟು, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ 71% ರಷ್ಟು ಮಳೆ ಕೊರತೆಯಾಗಿದೆ. ಇದನ್ನೂ ಓದಿ: ದೇಶಕ್ಕೆ ಭಾರತ ಎಂಬ ಹೆಸರೇಕೆ ಬಂತು? ಇಂಡಿಯಾ ಹೆಸರು ಹೇಗೆ ಬಂತು?
Advertisement
ಇತ್ತ ಬಿಹಾರ, ಪೂರ್ವ ಉತ್ತರಪ್ರದೇಶ, ಜಾರ್ಖಂಡ್, ಛತ್ತೀಸ್‍ಗಢ, ಗಂಗಾ ನದಿ ತೀರದ ಪಶ್ಚಿಮ ಬಂಗಾಳ, ಕೇರಳ, ಕರ್ನಾಟಕದ ಕೆಲವು ಭಾಗಗಳು ಮತ್ತು ಮಹಾರಾಷ್ಟ್ರದಲ್ಲಿ ಕಡಿಮೆ ಮಳೆಯಾಗಿದೆ. ಅದೇ ವೇಳೆ, ಹಿಮಾಚಲಪ್ರದೇಶ ಮತ್ತು ಉತ್ತರಾಖಂಡದಲ್ಲಿ ಮಳೆ ಸಾಮಾನ್ಯ ಪ್ರಮಾಣದಲ್ಲಿತ್ತು. ಭಾರತದಲ್ಲಿ ಆಗಸ್ಟ್ ತಿಂಗಳಲ್ಲಿ ದಾಖಲಾದ ಸರಾಸರಿ 32.09 ಡಿಗ್ರಿ ಸೆಲ್ಸಿಯಸ್ ಉಷ್ಣತೆಯೂ 1901 ರ ಬಳಿಕದ ಗರಿಷ್ಠವಾಗಿದೆ. ಇದು ಸರಾಸರಿ 31.09 ಡಿಗ್ರಿ ಸೆಲ್ಸಿಯಸ್‍ಗಿಂತ ಒಂದು ಡಿಗ್ರಿಯಷ್ಟು ಹೆಚ್ಚಾಗಿದೆ.
Advertisement
ಆಗಸ್ಟ್ ನಲ್ಲಿ ಕಡಿಮೆ ಮಳೆಗೆ ಕಾರಣಗಳೇನು?: ಆಗಸ್ಟ್ ನಲ್ಲಿ ಕಡಿಮೆ ಮಳೆಯಾಗಲು ಹವಾಮಾನಶಾಸ್ತ್ರಜ್ಞರು ಕೆಲವು ತಕ್ಷಣದ ಕಾರಣಗಳನ್ನು ನೀಡಿದ್ದಾರೆ. ಎಲ್ ನಿನೊ ಹವಾಮಾನ ಪರಿಸ್ಥಿತಿ ಹಾಗೂ ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿಯಲ್ಲಿ ನಿರ್ಮಾಣಗೊಂಡಿರುವ ಪ್ರತಿಕೂಲ ಸ್ಥಿತಿಗತಿಗಳು ಕಾರಣ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಪೂರ್ವ ಮತ್ತು ಮಧ್ಯ ಶಾಂತ ಸಾಗರದ ಮೇಲ್ಮೈ ಬಿಸಿಯಾಗುವುದನ್ನು ಎಲ್ ನಿನೊ ಎಂದು ಕರೆಯಲಾಗುತ್ತದೆ. ಅದು ಮಳೆ ಕೊರತೆ, ಬೆಳೆ ಹಾನಿ, ಬೆಂಕಿ ಮತ್ತು ದಿಢೀರ್ ಪ್ರವಾಹಗಳಿಗೆ ಕಾರಣವಾಗುತ್ತದೆ. ಎಲ್ ನಿನೋ ಸಕ್ರಿಯವಾಗಿದ್ದಾಗ, ಭಾರತದಲ್ಲಿ ಮಾನ್ಸೂನ್ ದುರ್ಬಲಗೊಳ್ಳುತ್ತದೆ. ಇದರಿಂದಾಗಿ ದೇಶದ ಹಲವು ರಾಜ್ಯಗಳಲ್ಲಿ ಬರಗಾಲ ಎದುರಾಗಿದೆ. ಎಲ್ ನಿನೊ ಕಳೆದ 65 ವರ್ಷಗಳಲ್ಲಿ 14 ಬಾರಿ ಪೆಸಿಫಿಕ್ ಸಾಗರದಲ್ಲಿ ಸಕ್ರಿಯವಾಗಿದೆ. ಈ ಬಾರಿ ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಬರಗಾಲವಿತ್ತು. ಇದೇ ವೇಳೆ 5 ಬಾರಿ ಬರ ಬಂದರೂ ಅದರ ಪ್ರಭಾವ ಅಲ್ಪ ಪ್ರಮಾಣದಲ್ಲಿತ್ತು ಎಂದು ಮಾಪನಶಾಸ್ತ್ರ ಮತ್ತು ಹವಾಮಾನ ಬದಲಾವಣೆ ಸ್ಕೈಮೆಟ್ ಅಧ್ಯಕ್ಷ ಜಿ.ಪಂ. ಶರ್ಮಾ ಅವರು 1991 ರಂತಹ ಪರಿಸ್ಥಿತಿ 2023 ರಲ್ಲಿ ಉದ್ಭವಿಸುವ ಸಾಧ್ಯತೆಯನ್ನು ವ್ಯಕ್ತಪಡಿಸಿದ್ದಾರೆ. ವಾಸ್ತವವಾಗಿ, ಸಾಮಾನ್ಯಕ್ಕಿಂತ 10 ಪ್ರತಿಶತ ಕಡಿಮೆ ಮಳೆಯಾಗಿದ್ದರೆ, ಹವಾಮಾನಶಾಸ್ತ್ರದ ವ್ಯಾಖ್ಯಾನದಲ್ಲಿ ಅದನ್ನು ಸೌಮ್ಯ ಬರ ಅಥವಾ ಮಧ್ಯಮ ಬರಗಾಲ ಎಂದು ಕರೆಯಲಾಗುತ್ತದೆ.
ಆಗಸ್ಟ್ ನಲ್ಲಿ ಮಳೆ ಕಡಿಮೆಯಾಗಿ ಜನಸಾಮಾನ್ಯರ ಮೇಲೆ ಯಾವ ಪರಿಣಾಮ ಬೀರಲಿದೆ?: ಭಾರತದಲ್ಲಿ, ಹೊಲಗಳು, ಕೊಳಗಳು ಮತ್ತು ನೀರಿನ ಮೂಲಗಳನ್ನು ತುಂಬಲು 70% ನೀರು ಮಳೆಯಿಂದ ಪೂರೈಸುತ್ತದೆ. ದಕ್ಷಿಣ, ಪಶ್ಚಿಮ ಮತ್ತು ಮಧ್ಯ ಭಾರತದಲ್ಲಿ ಆಗಸ್ಟ್‍ನಲ್ಲಿ ಅಲ್ಪ ಪ್ರಮಾಣದ ಮಳೆಯಾಗಿದೆ. ಮುಂಗಾರು ಆರಂಭವಾದ ನಂತರ ರೈತರು ಭತ್ತ, ಜೋಳ, ಸೋಯಾಬೀನ್, ಕಬ್ಬು, ಶೇಂಗಾ ಇತ್ಯಾದಿ ಬಿತ್ತನೆ ಮಾಡುತ್ತಾರೆ. ದೀರ್ಘಕಾಲದ ಬರದಿಂದಾಗಿ, ಇದು ಮಣ್ಣಿನಲ್ಲಿ ಉಳಿಯಲಿಲ್ಲ, ಇದು ಬೆಳೆಗಳ ಬೆಳವಣಿಗೆಯ ಮೇಲೆ ಪರಿಣಾಮ ಬೀರಿತು. ಬೆಳೆಗಳು ಮಳೆಗಾಗಿ ಹತಾಶವಾಗಿವೆ, ಯಾವುದೇ ವಿಳಂಬವು ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಇದರ ಫಲಿತಾಂಶವು ಆಹಾರ ಧಾನ್ಯಗಳ ಹಣದುಬ್ಬರದ ರೂಪದಲ್ಲಿ ಕಂಡುಬರುತ್ತದೆ.
ಸೆಪ್ಟಂಬರ್ ನಲ್ಲಿ ಪರಿಸ್ಥಿತಿ ಸುಧಾರಣೆ?: ಮಳೆ ಪರಿಸ್ಥಿತಿಯು ಸೆಪ್ಟೆಂಬರ್ ತಿಂಗಳಲ್ಲಿ ಸುಧಾರಿಸುವ ಸಾಧ್ಯತೆಯಿದೆ. ಮಳೆಗಾಲದಲ್ಲಿ ಮಳೆರಹಿತ ಅವಧಿ ಹೆಚ್ಚುತ್ತಿದೆ. ಆದರೆ ಸೆಪ್ಟಂಬರ್ 2ರ ಬಳಿಕ ಪರಿಸ್ಥಿತಿಯಲ್ಲಿ ಸುಧಾರಣೆಯಾಗಲಿದೆ. ದೇಶದ ಪೂರ್ವದ ಭಾಗಗಳು ಮತ್ತು ಸಮುದ್ರ ಆವರಿತ ದಕ್ಷಿಣದಲ್ಲಿ ಮಳೆ ಪುನರಾರಂಭಗೊಳ್ಳಲಿದೆ. ಬಳಿಕ ಅದು ನಿಧಾನವಾಗಿ ದೇಶದ ಇತರ ಭಾಗಗಳನ್ನು ವ್ಯಾಪಿಸುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆಯ ಮಹಾ ನಿರ್ದೇಶಕರು ತಿಳಿಸಿದ್ದಾರೆ.
Web Stories