BollywoodCinemaLatestNational

‘ದಿ ಗ್ರೇಟ್ ಖಲಿ’ ಆಗಲು ಹೊರಟ್ಟಿದ್ದಾರೆ ಸುಶಾಂತ್ ಸಿಂಗ್ ರಜಪೂತ್

ಮುಂಬೈ: ಬಾಲಿವುಡ್‍ನಲ್ಲಿ ಕ್ರೀಡಾತಾರೆಗಳ ಆತ್ಮಚರಿತ್ರೆಗಳನ್ನು ಸಿನಿಮಾವನ್ನಾಗಿ ಮಾಡೋದು ಟ್ರೆಂಡ್ ಆಗಿದೆ. ಎಂ.ಎಸ್ ಧೋನಿ ಅವರ ಆತ್ಮಚರಿತ್ರೆಯಲ್ಲಿ ನಟಿಸಿದ ನಂತರ ಸುಶಾಂತ್ ಸಿಂಗ್ ರಾಜ್‍ಪುತ್ ‘ದಿ ಗ್ರೇಟ್ ಖಲಿ’ಯಾಗಿ ಕಾಣಿಸಿಕೊಳ್ಳಲಿದ್ದಾರೆ.

ವರದಿಗಳ ಪ್ರಕಾರ ಸುಶಾಂತ್ ಸಿಂಗ್ ಈ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಕುಸ್ತಿಪಟು ಆದ ದಲೀಪ್ ಸಿಂಗ್ ರಾಣಾ (ದಿ ಗ್ರೇಟ್ ಖಲಿ) ಅವರು ತಮ್ಮ ಆತ್ಮಚರಿತ್ರೆಯನ್ನು ಸಿನಿಮಾವನ್ನಾಗಿ ಮಾಡಲು ಒಪ್ಪಿಗೆ ಕೊಟ್ಟಿದ್ದಾರೆ. ಖಲಿ 7.1 ಅಡಿ ಉದ್ದವಿದ್ದು 157 ಕೆ.ಜಿ ತೂಕವನ್ನು ಹೊಂದಿದ್ದಾರೆ. ಸುಶಾಂತ್‍ಗೆ ಹೇಗೆ ಅವರನ್ನು ಹೋಲುತ್ತಾರೆ ಎಂದು ಎಲ್ಲರಿಗೂ ಅನುಮಾನ ಶುರುವಾಗಿದೆ.

Khali Sushanth Singh Rajput

ಎಂ.ಎಸ್ ಧೋನಿ ಚಿತ್ರದಲ್ಲಿ ಸುಶಾಂತ್ ಲುಕ್, ವಾಕಿಂಗ್ ಸ್ಟೈಲ್ ಎಲ್ಲಾ ಧೋನಿ ರೀತಿಯಲ್ಲೇ ಮಾಡಿದ್ದರು. ಸುಶಾಂತ್ ಮತ್ತು ಖಲಿ ನಡುವೆ ಯಾವುದೇ ವ್ಯತ್ಯಾಸ ಇಲ್ಲ. ಖಲಿ ಅವರ ಹಾಗೆ ಉದ್ದ ಹಾಗೂ ದಪ್ಪ ಕಾಣಲು ವಿಎಫ್‍ಎಕ್ಸ್ ಬಳಸಲು ಚಿತ್ರ ತಂಡ ಮುಂದಾಗಿದೆ. ಸುಶಾಂತ್ ರಜಪುತ್ ಬಿಟ್ಟರೆ ಖಲಿ ಪಾತ್ರವನ್ನು ಬೇರೆ ಯಾರಿಂದಲೂ ಮಾಡಲು ಸಾಧ್ಯವಿಲ್ಲ ಎಂದು ಸಿನಿ ಮಾರುಕಟ್ಟೆಯ ತಜ್ಞರೊಬ್ಬರು ಹೇಳಿದ್ದಾರೆ ಎಂದು ವರದಿಯಾಗಿದೆ.

KHALI SSR

ಸುಶಾಂತ್ ಈ ಚಿತ್ರ ಒಪ್ಪಿಕೊಂಡ ನಂತರ ಇದು ಅವರ ಮೂರನೇ ಆತ್ಮಚರಿತ್ರೆಯ ಚಿತ್ರವಾಗುತ್ತದೆ. ಮೊದಲು ಧೋನಿ ಚಿತ್ರ ಬಿಡುಗಡೆ ಆಗಿತ್ತು. ಈಗ ಪ್ಯಾರಾ ಒಲಿಂಪಿಕ್‍ನಲ್ಲಿ ಚಿನ್ನದ ಪದಕ ಗೆದ್ದ ಮುರಳಿಕಾಂತ್ ಪೇಟ್‍ಕರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ನಂತರ ಖಲಿ ಚಿತ್ರ ಅವರ ಮೂರನೇ ಆತ್ಮಚರಿತ್ರೆಯ ಸಿನಿಮಾವಾಗಿರುತ್ತದೆ.

SUSHANTH SINGH RAJPUT

ಈ ಮೊದಲು ಬಾಗ್ ಮಿಲ್ಕಾ ಬಾಗ್, ಮೇರಿ ಕೋಮ್, ಎಂ.ಎಸ್ ಧೋನಿ: ದಿ ಅನ್‍ಟೋಲ್ಡ್ ಸ್ಟೋರಿ, ದಂಗಲ್ ಮತ್ತು ಸಚಿನ್-ಎ ಬಿಲಿಯನ್ ಡ್ರೀಮ್ಸ್ ಚಿತ್ರದಲ್ಲಿ ಕ್ರೀಡಾಪಟುಗಳ ಆತ್ಮಚರಿತ್ರೆ ಸಿನಿಮಾವಾಗಿ ಹೊರ ಬಂದಿತ್ತು.

Related Articles

Leave a Reply

Your email address will not be published. Required fields are marked *