ಗಾಂಧಿನಗರ: 75 ವಯಸ್ಸಿನ ಅಜ್ಜಿಯೊಬ್ಬರು ತಿಮ್ರು ಎಲೆ ಕೊಯ್ಯುವ ಮೂಲಕ 14 ದಿನಗಳಲ್ಲಿ ಬರೋಬ್ಬರಿ 97 ಸಾವಿರ ಹಣವನ್ನು ಗಳಿಸಿದ್ದಾರೆ.
ಗುಜರಾತ್ ಮತ್ತು ರಾಜಸ್ಥಾನ ಗಡಿಯಲ್ಲಿರುವ ಪರೊಸ್ದ ಗ್ರಾಮದ ನಿವಾಸಿ ಗೊಬ್ರಿಬೆನ್ ವದೆರಾ ಹಣ ಗಳಿಸಿದ ಅಜ್ಜಿ. ಇವರು ಬಂದಂತಹ ಹಣದಿಂದ ಮನೆಯೊಂದನ್ನು ಪಡೆದುಕೊಳ್ಳಬೇಕು ಎಂಬ ಭರವಸೆಯನ್ನು ಇಟ್ಟುಕೊಂಡಿದ್ದಾರೆ.
Advertisement
ಗೊಬ್ರಿಬೆನ್ ವದೆರಾ ಅವರ ಕುಟುಂಬದಲ್ಲಿ ಎಂಟು ಮಂದಿ ಇದ್ದಾರೆ. ಸಬರ್ ಕಾಂತ್ ಜಿಲ್ಲೆಯ ವಿಜಯ್ ನಗರ ತಾಲೂಕಿನ ಅರಣ್ಯಪ್ರದೇಶದಲ್ಲಿ ಗುಡಿಸಲಿನಲ್ಲಿ ವಾಸವಿದ್ದಾರೆ. ಇವರು ತಿಮ್ರು ಎಲೆ ಬಿಡಿಸುವ ಕೆಲಸ ಮಾಡುತ್ತಿದ್ದು, ಗುಜರಾತ್ ಅರಣ್ಯ ಅಭಿವೃದ್ಧಿ ಇಲಾಖೆಗೆ ಬಿಡಿಸಿದ ಎಲೆಗಳನ್ನು ಮಾರಾಟ ಮಾಡಿದ್ದಾರೆ. ಈ ಎಲೆಗಳ ಮಾರಾಟದಿಂದ ಇವರಿಗೆ 96,728 ರೂ. ಲಾಭ ಬಂದಿದೆ.
Advertisement
ಸಬರ್ ಕಾಂತ್ ನಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಈ ವೇಳೆ ಸ್ವತಃ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಅವರು ವದೆರಾ ಅವರ ಮೊಮ್ಮಗ ದೀಪಕ್ ಅವರಿಗೆ ಈ ಚೆಕ್ ನೀಡಿದ್ದಾರೆ. ಈ ಹಣವನ್ನು ನಾನು ಮನೆಯ ನವೀಕರಣಕ್ಕೆ ಬಳಸಿಕೊಳ್ಳುತ್ತೇನೆ. ನಾನು ಇದೇ ಮೊದಲ ಬಾರಿಗೆ ನನ್ನ ಜೀವನದಲ್ಲಿ ಇಷ್ಟು ದೊಡ್ಡ ಮೊತ್ತದ ಹಣವನ್ನು ನೋಡಿರುವುದಾಗಿ ವದೆರಾ ಅವರು ಹೇಳಿದ್ದಾರೆ.
Advertisement
Advertisement
ಇವರ ಕುಟುಂಬದವರಲ್ಲಿ ಮೊಮ್ಮಗ ಮಾತ್ರ ಒಂದು ಫೋನ್ ಇಟ್ಟುಕೊಂಡಿದ್ದಾರೆ. ವದೆರಾ ಮಗ ಮತ್ತು ಮೊಮ್ಮಕ್ಕಳು ವರ್ಷ ಪೂರ್ತಿ ಮೆಕ್ಕೆ ಜೋಳದ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ಬೆಟ್ಟ ಗುಡ್ಡ, ಅರಣ್ಯ ಪ್ರದೇಶದಲ್ಲಿ ಈ ತಿಮ್ರು ಎಲೆಗಳು ಸ್ವಾಭಾವಿಕವಾಗಿ ಬೆಳೆಯುತ್ತದೆ. ಆದರೆ ಇದು ವರ್ಷದಲ್ಲಿ 15-20 ದಿನ ಮಾತ್ರ ಬೆಳೆಯುತ್ತದೆ. ಈ ಎಲೆಯ ಸೀಸನ್ ಕೇವಲ ಒಂದು ತಿಂಗಳು ಮಾತ್ರವಾಗಿರುತ್ತದೆ.
ಈ ಬೆಳೆಗೆ ಅರಣ್ಯ ಇಲಾಖೆ ಸರಿಯಾದ ಬೆಲೆ ನಿಗದಿ ಪಡಿಸಿದ್ದರು. ಮಧ್ಯವರ್ತಿಗಳ ಹಾವಳಿನಿಂದ ಬೆಳೆಗಾರರಿಗೆ ಸರಿಯಾದ ಲಾಭ ಸಿಗುತ್ತಿಲಿಲ್ಲ. ಆದರೆ ಈಗ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಅರಣ್ಯ ಇಲಾಖೆಯು ನೇರವಾಗಿ ಲಾಭವನ್ನು ತಲುಪಬೇಕಾದವರಿಗೆ ತಲುಪಿಸುತ್ತಿದೆ. ಈ ತಿಮ್ರು ಎಲೆಗಳಿಂದ 34 ಸಾವಿರ ಬುಡಕಟ್ಟು ಜನಾಂಗದ ಜನರ ಜೀವನ ಬದಲಾಗುತ್ತದೆ.
ಕದನ ತಾಲೂಕಿನ ಅನಿಲ್ ಕಾಂತ್ ಅವರಿಗೂ 81,080 ಲಭಿಸಿದೆ. ಅವರು ಕೂಡ ಇಷ್ಟು ಮೊತ್ತ ಸಿಕ್ಕಿರುವುದು ಇದೇ ಮೊದಲ ಬಾರಿಗೆ ಎಂದು ಹೇಳಿ ಸಂತಸ ವ್ಯಕ್ತಪಡಿಸಿದ್ದಾರೆ. ಈ ಎಲೆಗಳಿಂದ ಸರ್ಕಾರಕ್ಕೆ ಸುಮಾರು 25-30 ಕೋಟಿ ಆದಾಯ ಬರುತ್ತದೆ. ಬಳಿಕ ಖರ್ಚು ಕಳೆದು ಉಳಿದ ಲಾಭವನ್ನು 14 ಜಿಲ್ಲೆಗಳ ಬುಡಕಟ್ಟು ಸಮುದಾಯದ 33,000 ಕುಟುಂಬಗಳಿಗೆ ಹಂಚಿಕೆ ಮಾಡಲಾಗುತ್ತಿದೆ ಎಂಬುದಾಗಿ ವರದಿಯಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews