ಇಂದು ದೇಶದಲ್ಲಿ ಮೂರನೇ ಹಂತದ ಚುನಾವಣೆ – 11 ರಾಜ್ಯಗಳ 92 ಕ್ಷೇತ್ರಗಳಲ್ಲಿ ಮತದಾನ

Public TV
2 Min Read
Vote

ನವದೆಹಲಿ: ದೇಶದ ಸಾರ್ವತ್ರಿಕ ಚುನಾವಣೆಯ (Lok Sabha Election 2024) ಮೂರನೇ ಹಂತದಲ್ಲಿ ಇಂದು 11 ರಾಜ್ಯಗಳ 92 ಕ್ಷೇತ್ರಗಳಿಗೆ ಮತದಾನ (Voting) ನಡೆಯಲಿದೆ.

ಕರ್ನಾಟಕದ (Karnataka) 14 ಕ್ಷೇತ್ರ ಸೇರಿದಂತೆ ಒಟ್ಟು 92 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಮೂರನೇ ಹಂತದ ಮತದಾನಕ್ಕೆ ಕೇಂದ್ರ ಚುನಾವಣಾ ಆಯೋಗ (Election Commission) ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಒಟ್ಟು 1,300 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. 1.85 ಲಕ್ಷ ಮತದಾನ ಕೇಂದ್ರಗಳನ್ನು ಸ್ಥಾಪಿಸಿದ್ದು, 18.5 ಲಕ್ಷ ಚುನಾವಣಾ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.

8.85 ಕೋಟಿ ಪುರುಷರು, 8.39 ಕೋಟಿ ಮಹಿಳೆಯರು ಸೇರಿ 17.24 ಕೋಟಿ ಜನರು ಮತದಾನಕ್ಕೆ ಅರ್ಹರಾಗಿದ್ದಾರೆ. 85 ವರ್ಷ ಮೇಲ್ಪಟ್ಟ 14.04 ಲಕ್ಷ ಹಿರಿಯ ಮತದಾರರು, 100 ವರ್ಷ ಮೇಲ್ಪಟ್ಟ 39,599 ಮತದಾರರು ಮತದಾನ ಮಾಡಲಿದ್ದಾರೆ. ಚುನಾವಣೆ ಹಿನ್ನೆಲೆ 264 ಚುನಾವಣೆ ವೀಕ್ಷಕರು, 4,303 ಫ್ಲೈಯಿಂಗ್ ಸ್ಕ್ವ್ಯಾಡ್ ನೇಮಕ ಮಾಡಲಾಗಿದೆ. ಚುನಾವಣಾ ಅಕ್ರಮ ತಡೆಯಲು 1,041 ಚೆಕ್‌ಪೋಸ್ಟ್ ನಿಯೋಜಿಸಲಾಗಿದೆ.

kolkata vote

ಬಿಎಸ್‌ಪಿ ಅಭ್ಯರ್ಥಿ ನಿಧನದ ಹಿನ್ನೆಲೆ ಮಧ್ಯಪ್ರದೇಶದ ಬೇತುಲ್ ಕ್ಷೇತ್ರದ ಚುನಾವಣೆ 2ನೇ ಹಂತದಿಂದ 3ನೇ ಹಂತಕ್ಕೆ ಬದಲಾಗಿದೆ. 3ನೇ ಹಂತದಲ್ಲಿ ನಡೆಯಬೇಕಿದ್ದ ಅನಂತ್ ನಾಗ್ – ರಜೋರಿ ಕ್ಷೇತ್ರದ ಚುನಾವಣೆ 6ನೇ ಹಂತದಲ್ಲಿ ನಡೆಯಲಿದೆ.

ಯಾವ ರಾಜ್ಯದಲ್ಲಿ ಎಷ್ಟು ಕ್ಷೇತ್ರಗಳಲ್ಲಿ ಮತದಾನ?
ಅಸ್ಸಾಂ – 4
ಬಿಹಾರ – 5
ಛತ್ತೀಸ್‌ಗಢ – 7
ಗೋವಾ – 2
ಗುಜರಾತ್ – 26
ಕರ್ನಾಟಕ – 14
ಮಧ್ಯಪ್ರದೇಶ – 8+1
ಮಹಾರಾಷ್ಟ್ರ -11
ಉತ್ತರ ಪ್ರದೇಶ – 10
ಪಶ್ಚಿಮ ಬಂಗಾಳ – 4
ದಾದ್ರಾ ಮತ್ತು ಹವೇಲಿ ಹಾಗೂ ದಮನ್ ಮತ್ತು ದಿಯು 2 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.

ಮೂರನೇ ಹಂತದ ಚುನಾವಣೆಯ ಪ್ರಮುಖ ಕ್ಷೇತ್ರ ಹಾಗೂ ಅಭ್ಯರ್ಥಿಗಳು:
ಅಮಿತ್ ಶಾ – ಗಾಂಧಿನಗರ, ಗುಜರಾತ್
ಡಿಂಪಲ್ ಯಾದವ್ – ಮೈನ್‌ಪುರಿ, ಉತ್ತರ ಪ್ರದೇಶ
ಜ್ಯೋತಿರಾದಿತ್ಯ ಸಿಂಧಿಯಾ – ಗುಣಾ, ಮಧ್ಯಪ್ರದೇಶ
ಶಿವರಾಜ್ ಸಿಂಗ್ ಚೌಹಾಣ್ – ವಿದಿಶಾ, ಮಧ್ಯಪ್ರದೇಶ
ದಿಗ್ವಿಜಯ ಸಿಂಗ್ – ರಾಜಗಢ, ಮಧ್ಯಪ್ರದೇಶ
ಸುಪ್ರಿಯಾ ಸುಳೆ – ಬಾರಾಮತಿ, ಮಹಾರಾಷ್ಟ್ರ
ಸುನೇತ್ರಾ ಪವಾರ್ – ಬಾರಾಮತಿ, ಮಹಾರಾಷ್ಟ್ರ
ಪಲ್ಲವಿ ಡೆಂಪೋ – ದಕ್ಷಿಣ ಗೋವಾ, ಗೋವಾ
ಬದ್ರುದ್ದೀನ್ ಅಜ್ಮಲ್ – ಧುಬ್ರಿ, ಅಸ್ಸಾಂ
ಮನ್ಸುಕ್ ಮಾಂಡವಿಯ – ಪೋರಬಂದರ್, ಗುಜರಾತ್
ಪುರುಷೋತ್ತಮ್ ರೂಪಾಲ – ರಾಜ್‌ಕೋಟ್, ಗುಜರಾತ್

Share This Article