ಗುರುವಾರ (ಅ.16) ಕೆನಡಾದ ಸರ್ರೆಯಲ್ಲಿರುವ ಕೆಫೆ ಮೇಲೆ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದಾರೆ.ಇದನ್ನೂ ಓದಿ:ಬೆಂಗಳೂರಲ್ಲಿ ಬೀದಿ ನಾಯಿ ಮೇಲೆ ಗ್ಯಾಂಗ್ ರೇಪ್; ನಶೆಯಲ್ಲಿದ್ದ ಕಾಮುಕರಿಂದ ಪೈಶಾಚಿಕ ಕೃತ್ಯ
ಸಾಮಾಜಿಕ ಜಾಲತಾಣದಲ್ಲಿ ಗುಂಡಿನ ದಾಳಿಯ ವಿಡಿಯೋ ವೈರಲ್ ಆಗಿದ್ದು, ವ್ಯಕ್ತಿಯೋರ್ವ ಕಾರಿನ ಕಿಟಕಿಯಿಂದ ಕೈ ಹೊರಗೆ ಹಾಕಿ ಹ್ಯಾಂಡ್‌ಗನ್‌ನಿಂದ ಗುಂಡು ಹಾರಿಸಿರುವುದು ಕಂಡುಬಂದಿದೆ. ಹಾರಿಸಿದ ಗುಂಡುಗಳು ಕೆಫೆಯ ಕಿಟಿಕಿ ಹಾಗೂ ಗೋಡೆಗೆ ತಾಗಿದೆ. ಗುಂಡಿನ ದಾಳಿ ನಡೆದ ಸಮಯದಲ್ಲಿ ಕೆಫೆಯೊಳಗೆ ಸಿಬ್ಬಂದಿಯಿದ್ದರು ಎಂದು ತಿಳಿದುಬಂದಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಸದ್ಯ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನ (Lawrence Bishnoi Gang) ಸಹಚರರಾದ ಕುಲ್ವೀರ್ ಸಿಧು ಮತ್ತು ಗೋಲ್ಡಿ ಧಿಲ್ಲೋನ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡು ದಾಳಿಯ ಹೊಣೆ ಹೊತ್ತಿದ್ದಾರೆ.
ನಮಗೆ ಸಾರ್ವಜನಿಕರ ವಿರುದ್ಧ ಯಾವುದೇ ದ್ವೇಷವಿಲ್ಲ. ಆದರೆ ನಮಗೆ ಮೋಸ ಮಾಡುವವರಿಗೆ ನಾವು ಎಚ್ಚರಿಕೆ ನೀಡುತ್ತೇವೆ. ಗುಂಡು ಎಲ್ಲಿಂದಾದರೂ ಬರಬಹುದು ನಮ್ಮ ಧರ್ಮದ ವಿರುದ್ಧ ಮಾತನಾಡುವ ಬಾಲಿವುಡ್ ವ್ಯಕ್ತಿಗಳು ಕೂಡ ಸಿದ್ಧರಾಗಿರಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.
ಇದಕ್ಕೂ ಮುನ್ನ ಎರಡು ಬಾರೀ ಕಪಿಲ್ ಶರ್ಮಾ ಕೆಫೆ ಮೇಲೆ ಗುಂಡಿನ ದಾಳಿ ನಡೆದಿತ್ತು. ಜು.9ರಂದು ಮೊದಲ ಬಾರೀ ಗುಂಡಿನ ದಾಳಿ ನಡೆದಾಗ ಜರ್ಮನಿ ಮೂಲದ ಬಿಕೆಐ ಉಗ್ರಗಾಮಿ ಹರ್ಜಿತ್ ಸಿಂಗ್ ಹಾಗೂ ಆ.7ಎಂದು ಎರಡನೇ ಬಾರೀ ನಡೆದಾಗ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನ ಹೊಣೆ ಹೊತ್ತುಕೊಂಡಿತ್ತು.ಇದನ್ನೂ ಓದಿ: ವೈದ್ಯೆ ಕೃತಿಕಾ ಹತ್ಯೆ ಕೇಸ್ – 11 ತಿಂಗಳಿಂದ ಪತ್ನಿ ಹತ್ಯೆಗೆ ಸ್ಕೆಚ್ ಹಾಕಿದ್ದ ಕಿಲ್ಲರ್ ಪತಿ