ಬೆಂಗಳೂರು: 2024ರ ಲೋಕಸಭಾ ಚುನಾವಣೆ (Lok Sabha Elections) ಸನಿಹದಲ್ಲಿ ರಾಜ್ಯದಲ್ಲಿ ಮತ್ತೆ ಟಿಪ್ಪು ಸುಲ್ತಾನ್ (Tipu Sultan) ಹೆಸರಲ್ಲಿ ರಾಜಕೀಯ ಕೆಸರೆರಚಾಟ ಶುರುವಾಗಿದೆ.
ಮೈಸೂರು ಮಂಡಕಹಳ್ಳಿ ವಿಮಾನ ನಿಲ್ದಾಣಕ್ಕೆ (Mysuru Airport) ಟಿಪ್ಪು ಸುಲ್ತಾನ್ ಹೆಸರಿಡಬೇಕು ಎಂಬ ಕೂಗು ಕಾಂಗ್ರೆಸ್‌ನಲ್ಲಿ ಎದ್ದಿದೆ. ಇದಕ್ಕೆ ಸಹಜವಾಗಿಯೇ ಬಿಜೆಪಿ ಗರಂ ಆಗಿದೆ. ಬಿಜೆಪಿ ಅವಧಿಯಲ್ಲಿ ಟಿಪ್ಪು ಎಕ್ಸ್‌ಪ್ರೆಸ್ ಹೆಸರನ್ನು ಒಡೆಯರ್ ಎಕ್ಸ್‌ಪ್ರೆಸ್ ಎಂದು ಬದಲಾಯಿಸಲಾಗಿತ್ತು. ಇದಕ್ಕೆ ಕೌಂಟರ್ ಕೊಡಲೆಂದೇ ಇದೀಗ ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡಲು ಕಾಂಗ್ರೆಸ್ ಸರ್ಕಾರ ಚಿಂತನೆ ನಡೆಸಿದ್ಯಾ? ಟಿಪ್ಪು ಹೆಸರಿಡಬೇಕೆಂದು ಕೇಂದ್ರಕ್ಕೆ ಶಿಫಾರಸು ಮಾಡಲು ಮುಂದಾಗಿದ್ಯಾ ಎಂಬ ಪ್ರಶ್ನೆಗಳು ಎದ್ದಿದೆ.
Advertisement
Advertisement
ಟಿಪ್ಪು ಹೆಸರಿಡುವ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಅವರಾಗಲಿ, ಡಿಸಿಎಂ ಆಗಲಿ ಈವರೆಗೂ ಯಾವುದೇ ನಿಲುವನ್ನು ಪ್ರಕಟಿಸಿಲ್ಲ. ಆದ್ರೆ ಬೆಳಗಾವಿ ಅಧಿವೇಶನದ ಕಲಾಪದಲ್ಲಿ ಪ್ರಸಾದ್ ಅಬ್ಬಯ್ಯ ಮಾಡಿದ್ದ ಪ್ರಸ್ತಾಪವನ್ನು ಸಚಿವ ಜಮೀರ್ (Zameer Ahmed Khan) ಸೇರಿ ಹಲವರು ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ಮಲೆನಾಡಿಗರನ್ನೂ ಬಿಟ್ಟೂ ಬಿಡದೇ ಕಾಡ್ತಿದೆ ಮಂಗನ ಕಾಯಿಲೆ – ವರ್ಷದ ಮೊದಲ ಕೇಸ್ ಪತ್ತೆ, ಹೆಚ್ಚಿದ ಆತಂಕ
Advertisement
Advertisement
ಅಷ್ಟೇ ಅಲ್ಲ, ಟಿಪ್ಪು ಜಯಂತಿಗೂ ಒತ್ತಾಯಿಸಿದ್ದಾರೆ. ಇದಕ್ಕೆ ಕೇಸರಿ ಕಲಿಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಟಿಪ್ಪು ಪರ ಮಾತಾಡೋರೆಲ್ಲಾ ಪಾಕಿಸ್ತಾನದಲ್ಲಿ ಹುಟ್ಟಬೇಕಿತ್ತು ಎಂದು ಈಶ್ವರಪ್ಪ ಗುಡುಗಿದ್ದಾರೆ. ರಾಜ್ಯದಲ್ಲಿ ಹಿಂದೂಗಳನ್ನು 2ನೇ ದರ್ಜೆ ಪ್ರಜೆಗಳ ರೀತಿ ನೋಡಲಾಗ್ತಿದೆ ಎಂದು ಅಶೋಕ್ ದೂಷಿಸಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಯತ್ನಾಳ್, ಟಿಪ್ಪು ಹೆಸರನ್ನ ಬೇಕಿದ್ರೆ ಶೌಚಾಲಯಕ್ಕೆ ಇಡಲಿ. ಮೈಸೂರಿನ ವಿಮಾನ ನಿಲ್ದಾಣಕ್ಕೆ ಮಹಾಪ್ರಭುಗಳಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರನ್ನು ಕರ್ನಾಟಕ ಸರ್ಕಾರ ಶಿಫಾರಸ್ಸು ಮಾಡಬೇಕು. ಅವರ ಕೊಡುಗೆ ಕರ್ನಾಟಕ ಹಾಗು ಭಾರತಕ್ಕೆ ಅಪಾರವಾದದ್ದು ಎಂದು ಆಗ್ರಹಿಸಿದ್ದಾರೆ. ವಿಧಾನ ಪರಿಷತ್ ಸದಸ್ಯ ಇದಕ್ಕೆ ಬಿ.ಕೆ ಹರಿಪ್ರಸಾದ್ ಕೌಂಟರ್ ಕೂಡ ನೀಡಿದ್ದಾರೆ.
ಈ ಹಿಂದೆ ರಾಜ್ಯದಲೂ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ರಾಜವಂಶಸ್ಥ ಯಧುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಜಯಚಾಮರಾಜೇಂದ್ರ ಒಡೆಯರ್ ಅವರ ಹೆಸರನ್ನಿಡುವಂತೆ ಸಲಹೆ ನೀಡಿದ್ದರು. ಇದನ್ನೂ ಓದಿ: ಗಂಡ ಹೆಂಡತಿ ಮಧ್ಯೆ ಮಗುವಿಗಾಗಿ ಜಗಳ – ಸಮಸ್ಯೆ ಬಗೆಹರಿಸಲು ಬಂದ ಪೊಲೀಸರನ್ನೇ ಕೂಡಿ ಹಾಕಿದ ಗ್ರಾಮಸ್ಥರು