ಬೆಂಗಳೂರು: ಕರ್ನಾಟಕ ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ನೀತಿಯಲ್ಲಿ ಸ್ಥಳೀಯ ಉತ್ಪಾದಕರನ್ನು ಭವಿಷ್ಯದ ಸವಾಲುಗಳಿಗೆ ಸಜ್ಜುಗೊಳಿಸುವ ನಿಟ್ಟಿನಲ್ಲಿ ಎಂಎಸ್ಎಂಇಗಳಿಗಾಗಿ (MSME) ನಿರ್ದಿಷ್ಟ ಎಐ (AI) ಮತ್ತು ಡಿಜಿಟಲ್ ಮಾರ್ಗಸೂಚಿಯನ್ನು ಅಳವಡಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ ಎಂದು ಎಂಎಸ್ಎಂಇ, ಸಕ್ಕರೆ ಹಾಗೂ ಜವಳಿ ಇಲಾಖೆ ಸರ್ಕಾರದ ಕಾರ್ಯದರ್ಶಿ ರೋಹಿಣಿ ಸಿಂಧೂರಿ (Rohini Sindhuri) ತಿಳಿಸಿದರು.
ಕಾಸಿಯಾ ಭವನದಲ್ಲಿ ರಾಜ್ಯ ಮಟ್ಟದ ಪಾಲುದಾರರ ಪೂರ್ವಭಾವಿ ಸಮಾಲೋಚನಾ ಕಾರ್ಯಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ರಾಜ್ಯದ ಒಟ್ಟು ಕೈಗಾರಿಕಾ ಘಟಕಗಳ ಪೈಕಿ ಶೇ.97ರಷ್ಟು ಎಂಎಸ್ಎಂಇಗಳಿವೆ. ರಾಜ್ಯದಲ್ಲಿ ಅತಿಹೆಚ್ಚು ಉದ್ಯೋಗಾವಕಾಶಗಳನ್ನು ಒದಗಿಸಿರುವ ಕ್ಷೇತ್ರ ಇವುಗಳದ್ದಾಗಿದೆ. ನಮ್ಮ ಸರ್ಕಾರ ಇವುಗಳ ಮಹತ್ವವನ್ನು ಅರಿತು ಪ್ರತ್ಯೇಕ ನೀತಿಯನ್ನು ರಚಿಸುವ ಕಾರ್ಯಕ್ಕೆ ಚಾಲನೆ ನೀಡಿದೆ. ಇದರ ಮೊದಲ ಹಂತವಾಗಿ ಇಂದು ರಾಜ್ಯ ಮಟ್ಟದ ಪಾಲುದಾರರ ಪೂರ್ವಭಾವಿ ಸಮಾಲೋಚನಾ ಕಾರ್ಯಗಾರ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ವಿವಿಧ ಜಿಲ್ಲೆಗಳಲ್ಲಿ ವಿಭಾಗೀಯ ಮಟ್ಟದ ಕಾರ್ಯಾಗಾರವನ್ನು ಆಯೋಜಿಸಲಾಗುವುದು. ಈ ಮೂಲಕ ಎಂಎಸ್ಎಂಇ ವಲಯ ಸಮಗ್ರ ಅಭಿವೃದ್ಧಿಗೆ ಅನುವು ಮಾಡಿಕೊಡುವಂತಹ ನೀತಿಯನ್ನು ರೂಪಿಸುವ ಉದ್ದೇಶವನ್ನು ನಮ್ಮ ಇಲಾಖೆ ಹೊಂದಿದೆ ಎಂದರು. ಇದನ್ನೂ ಓದಿ: ವಿಧಾನಸಭೆಯಲ್ಲಿ ಗ್ಯಾಸ್ ಸಮರ; ಬಿಜೆಪಿ, ಕಾಂಗ್ರೆಸ್ ಗದ್ದಲ – ಕೇಂದ್ರ ಕಾರಣ ಎಂದು ಸಿಎಂ ಕಿಡಿ

ಸ್ಥಳೀಯ ಉತ್ಪಾದಕರನ್ನು ಭವಿಷ್ಯದ ಸವಾಲುಗಳಿಗೆ ಸಜ್ಜುಗೊಳಿಸುವ ನಿಟ್ಟಿನಲ್ಲಿ ಹೊಸ ನೀತಿ ತಂತ್ರಜ್ಞಾನವನ್ನು ಕೇಂದ್ರಬಿಂದುವನ್ನಾಗಿಸಿಕೊಂಡು ಜಾಗತಿಕ ಮಟ್ಟದಲ್ಲಿ ರಾಜ್ಯವನ್ನು ಮುಂಚೂಣಿಯಲ್ಲಿ ನಿಲ್ಲಿಸಲಿದೆ. ಈ ನಿಟ್ಟಿನಲ್ಲಿ ಎಂಎಸ್ಎಂಇಗಳಿಗಾಗಿ ನಿರ್ದಿಷ್ಟ ಎಐ ಮತ್ತು ಡಿಜಿಟಲ್ ಮಾರ್ಗಸೂಚಿಯನ್ನು ಅಳವಡಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಕೇವಲ ಮಧುರೈ ಏಕೆ? ಹುಬ್ಬಳ್ಳಿ, ಬೆಳಗಾವಿ ವಿಮಾನ ನಿಲ್ದಾಣವನ್ನೂ ಅಂತಾರಾಷ್ಟ್ರೀಯ ನಿಲ್ದಾಣವಾಗಿ ಘೋಷಿಸಿ: ಎಂ.ಬಿ ಪಾಟೀಲ್
ರಾಜ್ಯ ಸರ್ಕಾರ ಈ ನೀತಿಯನ್ನು ರೂಪಿಸುವ ಮೂಲಕ ಕರ್ನಾಟಕ ರಾಜ್ಯದ ಕೈಗಾರಿಕೆಗಳ ಬೆನ್ನೆಲುಬಾಗಿರುವಂತಹ ಎಂಎಸ್ಎಂಇಗಳ ಅಭಿವೃದ್ಧಿಗೆ ಅನುವು ಮಾಡಿಕೊಡಲಿದೆ. ಈ ನೀತಿಯನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಎಲ್ಲಾ ಉದ್ಯಮಿಗಳ ಸಲಹೆಗಳ ಅಗತ್ಯವಿದೆ. ನಮ್ಮ ಇಲಾಖೆ ಸಲಹೆಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಲಿದೆ. ಉದ್ಯಮಿಗಳೂ ಹಾಗೂ ಉದ್ಯಮ ಸಂಸ್ಥೆಗಳು ಉತ್ತಮ ನೀತಿಯನ್ನು ಹೊರತರುವಲ್ಲಿ ಅಗತ್ಯ ಸಹಕಾರ ನೀಡಲಿ ಎಂದು ಕರೆ ನೀಡಿದರು. ಇದನ್ನೂ ಓದಿ: ಲ್ಯಾಂಡಿಂಗ್ ವೇಳೆ ಏರ್ ಇಂಡಿಯಾ ಎಕ್ಸ್ಪ್ರೆಸ್ ನೋಸ್ ವೀಲ್ನಲ್ಲಿ ದೋಷ – ತಪ್ಪಿದ ಭಾರೀ ದುರಂತ

ಕಾರ್ಯಾಗಾರದಲ್ಲಿ ಕಾಸಿಯಾ ಅಧ್ಯಕ್ಷರಾದ ಬಿ.ಆರ್ ಗಣೇಶ್ ರಾವ್, ಎಂಎಸ್ಎಂಇ ಇಲಾಖೆ ನಿರ್ದೇಶಕರಾದ ಡಾ ಸತೀಶ ಬಿ.ಸಿ, ಪೀಣ್ಯ ಕೈಗಾರಿಕಾ ಪ್ರದೇಶದ ಅಧ್ಯಕ್ಷರಾದ ಡಿ.ಪಿ ದಾನಪ್ಪ, ಅವೇಕ್ ಅಧ್ಯಕ್ಷೆ ಭುವನೇಶ್ವರಿ ಸೇರಿದಂತೆ ನೂರಾರು ಉದ್ಯಮಿಗಳೂ ಪಾಲ್ಗೊಂಡಿದ್ದರು. ಇದನ್ನೂ ಓದಿ: ಕಮರ್ಷಿಯಲ್ ಗ್ಯಾಸ್ ಬಂದ್ – ಸಂಪೂರ್ಣವಾಗಿ ಸೌದೆ ಒಲೆ ಮೊರೆಹೋದ ಹೋಟೆಲ್ ಮಾಲೀಕರು

