ಉಡುಪಿ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿಯನ್ನು ಕೋರ್ಟ್ ತಾಂತ್ರಿಕ ಕಾರಣ ಕೊಟ್ಟು ಬಿಡುಗಡೆ ಮಾಡಿದ್ರೂ ಆಶ್ಚರ್ಯವಿಲ್ಲ ಅಂತ ವಿಮರ್ಷಕ, ಪ್ರಗತಿಪರ ಚಿಂತಕ ಜಿ ರಾಜಶೇಖರ್ ಸಂಶಯ ವ್ಯಕ್ತಗೊಳಿಸಿದರು.
ಶನಿವಾರ ನಗರದಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಸಂಸ್ಮರಣೆ ನಡೆಯಿತು. ಕೋಮು ಸೌಹಾರ್ದ ವೇದಿಕೆ ಮತ್ತು ದಲಿತ ಸಂಘಟನೆ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ವೇಳೆ ಮಾತನಾಡಿದ ವಿಚಾರವಾದಿ ಜಿ.ರಾಜಶೇಖರ್, ಗಾಂಧಿಯನ್ನು ಕೊಂದವರು ಗೌರಿಯನ್ನು ಕೊಂದಿದ್ದಾರೆ. ಆರೋಪಿ ಪರಶುರಾಮ ವಾಗ್ಮೋರೆ ಓರ್ವ ಗಲಭೆಕೋರ. ಸಿಂಧಗಿಯಲ್ಲಿ ಪಾಕ್ ಧ್ವಜದ ವಿಚಾರದಲ್ಲಿ ಘರ್ಷಣೆಗೆ ಕಾರಣವಾಗಿದ್ದವ ಎಂದರು.
ಧ್ವಜದ ಪ್ರಕರಣದಿಂದ ವಾಗ್ಮೋರೆ ಖುಲಾಸೆಯಾಗಿದ್ದಾನೆ. ಮುಂದಿನ ದಿನಗಳಲ್ಲಿ ಗೌರಿ ಕೊಲೆಯ ಆರೋಪಿಗಳು ಬಿಡುಗಡೆಯಾಗಬಹುದು. ತಾಂತ್ರಿಕ ಕಾರಣ ಕೊಟ್ಟು ಕೋರ್ಟ್ ಬಿಡುಗಡೆ ಮಾಡಿದ್ರೂ ಆಶ್ಚರ್ಯವಿಲ್ಲ ಎಂದು ಸಂಶಯ ವ್ಯಕ್ತಪಡಿಸಿ, ಆ ಪ್ರಕರಣ ಕೂಡ ಹೀಗೆಯೇ ಬಿದ್ದೋಯ್ತು ಎಂದರು.
ಮಹಾತ್ಮಾ ಗಾಂಧಿಯನ್ನು ಕೊಂದವರೇ ದಾಬೋಲ್ಕರ್, ಪನ್ಸಾರೆ, ಕಲ್ಬುರ್ಗಿ ಮುಂತಾದ ವಿಚಾರವಾದಿಗಳನ್ನು ಕೊಂದಿದ್ದಾರೆ ಎಂದು ಅಭಿಪ್ರಾಯಪಟ್ಟರು. ಆರ್ ಎಸ್ ಎಸ್ ಸಿದ್ಧಾಂತ ದೇಶದಲ್ಲಿ ಮುಸ್ಲಿಮರ ಹತ್ಯೆಗೆ ಕಾರಣವಾಗಿದೆ. ಗೌರಿ ಸೇರಿದಂತೆ ಎಲ್ಲಾ ಹತ್ಯೆಗಳು ಆರ್‍ಎಸ್‍ಎಸ್‍ನ ಸರಣಿ ಹತ್ಯೆಯೆಂದು ನಾವು ಭಾವಿಸುತ್ತೇವೆ ಎಂದು ಗಂಭೀರ ಆರೋಪ ಮಾಡಿದರು.
ಹಿಂದುತ್ವದ ಅಮಲು ದೇಶವನ್ನು ಹಾಳುಗೆಡವುತ್ತಿದೆ. ಆರ್ ಎಸ್ ಎಸ್ ಎಸ್ ಒಂದು ದೇಶದ್ರೋಹಿ ಸಂಘಟನೆ ಅದನ್ನು ನಿಷೇಧ ಮಾಡಬೇಕಹ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv