ಶಿಮ್ಲಾ: ಭಗವಾನ್ ಹನುಮಂತ (Hanuman) ಮೊದಲ ಬಾಹ್ಯಾಕಾಶ ಯಾನಿ ಎಂದು ಭಾವಿಸುವಂತೆ ವಿದ್ಯಾರ್ಥಿಗಳಿಗೆ ಕೇಂದ್ರ ಮಾಜಿ ಸಚಿವ ಅನುರಾಗ್ ಠಾಕೂರ್ (Anurag Thakur) ಸಲಹೆ ನೀಡಿದ್ದಾರೆ.
ಬಾಹ್ಯಾಕಾಶಕ್ಕೆ ಮೊದಲು ಪ್ರಯಾಣ ಬೆಳೆಸಿದ ವ್ಯಕ್ತಿ ಅಮೆರಿಕದ ಗಗನಯಾತ್ರಿ ನೀಲ್ ಆರ್ಮ್‌ಸ್ಟ್ರಾಂಗ್ ಎಂಬುದು ಸಾರ್ವತ್ರಿಕವಾಗಿ ಒಪ್ಪಿಕೊಂಡ ಸತ್ಯ. ಆದಾಗ್ಯೂ, ಮಾಜಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು, ಭಗವಾನ್ ಹನುಮಂತ ಮೊದಲ ಬಾಹ್ಯಾಕಾಶ ಯಾನಿ ಎಂದು ವಿದ್ಯಾರ್ಥಿಗಳಿಗೆ ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ್ದಾರೆ. ಇದನ್ನೂ ಓದಿ: ಪತ್ನಿಗೆ ಬೆಂಕಿ ಹಚ್ಚಿ ಕೊಂದವನ ಕಾಲಿಗೆ ಗುಂಡೇಟು – ನನಗ್ಯಾವ ಪಶ್ಚಾತ್ತಾಪ ಇಲ್ಲ ಎಂದ ಪಾಪಿ!
ಪಿಎಂ ಶ್ರೀ ಶಾಲೆಯಲ್ಲಿ ಶನಿವಾರ ರಾಷ್ಟ್ರೀಯ ಬಾಹ್ಯಾಕಾಶ ದಿನದ ಸಂದರ್ಭದಲ್ಲಿ ಠಾಕೂರ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ವಿದ್ಯಾರ್ಥಿಗಳ ಜೊತೆ ಬಿಜೆಪಿ ಸಂಸದ ಠಾಕೂರ್ ಸಂವಾದ ನಡೆಸಿದರು.
ಮೊದಲ ಬಾಹ್ಯಾಕಾಶ ಯಾನಿ ಯಾರು ಎಂದು ಠಕೂರ್ ಅವರು ಕೇಳಿದರು. ಆಗ ವಿದ್ಯಾರ್ಥಿಗಳು, ನೀಲ್ ಆರ್ಮ್‌ಸ್ಟ್ರಾಂಗ್ ಎಂದು ಹೇಳುತ್ತಾರೆ. ಮತ್ತೆ ಮಾತನಾಡಿದ ಠಾಕೂರ್, ಅದು ಭಗವಾನ್ ಹನುಮಂತ ಅಂತ ನನಗೆ ಅನಿಸುತ್ತೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ವರ್ಷಾಂತ್ಯದಲ್ಲಿ ಭಾರತಕ್ಕೆ ಪುಟಿನ್, ಝೆಲೆನ್ಸ್ಕಿ ಭೇಟಿ – ಅಮೆರಿಕ ತೈಲ ವಾರ್ ನಡ್ವೆ ಹೆಚ್ಚಾಯ್ತು ಭಾರತದ ಪ್ರಾಬಲ್ಯ
ಏಕೆಂದರೆ ನಾವು ಇನ್ನೂ ನಮ್ಮನ್ನು ನಾವು ಇರುವಂತೆಯೇ ನೋಡುತ್ತೇವೆ. ನಮ್ಮ ಸಾವಿರಾರು ವರ್ಷಗಳ ಹಳೆಯ ಸಂಪ್ರದಾಯ, ಜ್ಞಾನ, ಸಂಸ್ಕೃತಿಯನ್ನು ನಾವು ತಿಳಿಯದೇ ಇರುವವರೆಗೆ, ಬ್ರಿಟಿಷರು ನಮಗೆ ತೋರಿಸಿದಂತೆಯೇ ಇರುತ್ತೇವೆ. ಆದ್ದರಿಂದ, ಪ್ರಾಂಶುಪಾಲರು ಮತ್ತು ನೀವೆಲ್ಲರೂ ಪಠ್ಯಪುಸ್ತಕಗಳಿಂದ ಆಚೆಗೆ ಯೋಚಿಸಿ ನಮ್ಮ ರಾಷ್ಟ್ರ, ನಮ್ಮ ಸಂಪ್ರದಾಯಗಳು, ನಮ್ಮ ಜ್ಞಾನವನ್ನು ನೋಡಬೇಕೆಂದು ವಿನಂತಿಸುತ್ತೇನೆ. ನೀವು ಆ ದಿಕ್ಕಿನಿಂದ ನೋಡಿದರೆ, ಬಹಳಷ್ಟು ವಿಷಯಗಳನ್ನು ಕಾಣಬಹುದು ಎಂದು ತಿಳಿಸಿದ್ದಾರೆ.
ಸುಮಾರು ನಲವತ್ತು ವರ್ಷಗಳ ಹಿಂದೆ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಿದ ಮೊದಲ ಭಾರತೀಯ ರಾಕೇಶ್ ಶರ್ಮಾ. ಈ ವರ್ಷದ ಆರಂಭದಲ್ಲಿ, ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಿದ ಎರಡನೇ ಭಾರತೀಯ ಗಗನಯಾತ್ರಿ ಎನಿಸಿಕೊಂಡರು.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶನಿವಾರ ದೆಹಲಿಯಲ್ಲಿ ಭಾರತೀಯ ಅಂತರಿಕ್ಷ ನಿಲ್ದಾಣದ (ಬಿಎಎಸ್) ಮಾದರಿಯನ್ನು ಅನಾವರಣಗೊಳಿಸಿತು. ತನ್ನದೇ ಆದ ಕಕ್ಷೀಯ ಪ್ರಯೋಗಾಲಯವನ್ನು ಸ್ಥಾಪಿಸುವ ಭಾರತದ ಪ್ರಯಾಣವು ತನ್ನ ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ಒಂದು ಪ್ರಮುಖ ಮುನ್ನಡೆಯನ್ನು ಸೂಚಿಸುತ್ತದೆ. ಬಾಹ್ಯಾಕಾಶ ಪರಿಶೋಧನೆಯಲ್ಲಿ ಜಾಗತಿಕ ನಾಯಕನಾಗಿ ತನ್ನ ಸ್ಥಾನವನ್ನು ಬಲಪಡಿಸುತ್ತದೆ.
2028 ರ ವೇಳೆಗೆ ಯೋಜನೆಯ ಮೊದಲ ಮಾಡ್ಯೂಲ್ ಅನ್ನು ಪ್ರಾರಂಭಿಸಲು ISRO ಗುರಿ ಹೊಂದಿದೆ. ಪೂರ್ಣ ನಿಲ್ದಾಣವು 2035 ರ ವೇಳೆಗೆ ಕಾರ್ಯರೂಪಕ್ಕೆ ಬರುವ ನಿರೀಕ್ಷೆಯಿದೆ. ದೀರ್ಘಾವಧಿಯ ಮಾನವ ಬಾಹ್ಯಾಕಾಶ ಯಾತ್ರೆಗಳಿಗೆ ಸೂಕ್ಷ್ಮ ಗುರುತ್ವಾಕರ್ಷಣೆಯ ಅಧ್ಯಯನಗಳು ಮತ್ತು ಪರೀಕ್ಷಾ ತಂತ್ರಜ್ಞಾನಗಳು ಸೇರಿದಂತೆ ಸ್ಥಳೀಯ ಸಂಶೋಧನೆಗೆ BAS ಮಹತ್ವದ ವೇದಿಕೆಯಾಗಲಿದೆ.