ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಗೆ (Lok Sabha Election) ಬಿಜೆಪಿ ರಾಮ’ಮಂತ್ರ’ ಪಠಿಸುತ್ತಿದೆ. ಲೋಕಸಮರದಲ್ಲಿ ಮತ ಗಳಿಸಲು ಬಿಜೆಪಿಯಿಂದ (BJP) ಮಂದಿರ ರಾಜಕೀಯ ಶುರುವಾಗಿದೆ. ಆದರೆ ರಾಮಮಂದಿರ (Ram Mandir) ಉದ್ಘಾಟನೆ ವಿಚಾರದಲ್ಲಿ ಎಡವದಿರಲು ಕಾಂಗ್ರೆಸ್ (Congress) ಪ್ಲಾನ್ ಮಾಡಿದೆ.
ರಾಜ್ಯದಲ್ಲಿ ಕೆಲ ಸಚಿವರು, ಶಾಸಕರ ಡ್ಯಾಮೇಜಿಂಗ್ ಹೇಳಿಕೆಗಳಿಂದ ಎಐಸಿಸಿ (AICC) ಎಚ್ಚೆತ್ತಿದೆ. ವಿವಾದಕ್ಕೆ ಎಡೆ ಮಾಡದೇ ನಡೆ ನುಡಿಯಲ್ಲಿ ಎಚ್ಚರಿಕೆ ಕಾಯ್ದುಕೊಳ್ಳಲು ಪಕ್ಷದಿಂದ ಸಂದೇಶ ರವಾನೆ ಆಗಿದೆ. ಇದನ್ನೂ ಓದಿ: ಬಾಲರಾಮನ ಮೂರ್ತಿಯ ವಿಶೇಷ ಏನು? ಆಯ್ಕೆಗೆ ಮಾನದಂಡ ಏನು? ಶಿಲಾ ವಿಶೇಷತೆ ಏನು?
Advertisement
Advertisement
ರಾಮಮಂದಿರ ವಿಚಾರದಲ್ಲಿ ಅಸಂಬದ್ಧ ಮಾತನಾಡದೇ ಯೋಚಿಸಿ ಮಾತಾಡಿ, ಯೋಚಿಸಿ ನಡೆಯಿರಿ. ಹೀಗಂತ ದೆಹಲಿ ನಾಯಕರಿಂದ ರಾಜ್ಯ ಕಾಂಗ್ರೆಸ್ ನಾಯಕರಿಗೆ ಖಡಕ್ ವಾರ್ನಿಂಗ್ ನೀಡಲಾಗಿದೆ.
Advertisement
ಹೈಕಮಾಂಡ್ ಎಚ್ಚರಿಕೆ ಸಂದೇಶವನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಮುಂಚೂಣಿ ನಾಯಕರು ಸಾಫ್ಟ್ ನಿರ್ಧಾರ ತಾಳಿದ್ದಾರೆ.
Advertisement