ʻಸರಿಗಮಪʼ ಖ್ಯಾತಿಯ ಜ್ಞಾನಗೆ ಒಲಿದು ಬಂತು ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಪ್ರಶಸ್ತಿ

Public TV
1 Min Read
jnana

ಕಿರುತೆರೆಯ ಖ್ಯಾತ ರಿಯಾಲಿಟಿ ಶೋ `ಸರಿಗಮಪ’ ಕಾರ್ಯಕ್ರಮದಲ್ಲಿ ತನ್ನ ಚೆಂದದ ಮಾತುಗಳಿಂದಲೇ ಕರ್ನಾಟಕದ ಸಾಕಷ್ಟು ಜನರ ಮೆಚ್ಚುಗೆಗೆ ಪಾತ್ರವಾಗಿದ್ದ ಪುಟಾಣಿ ಜ್ಞಾನ ಗುರುರಾಜ್ ಬೆಂಗಳೂರಿನ ಸಾಲುಮರದ ತಿಮ್ಮಕ್ಕ ಇಂಟರ್‌ನ್ಯಾಶನಲ್ ಫೌಂಡೇಶನ್ ವತಿಯಿಂದ ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

janan

ಚಿಕ್ಕ ವಯಸ್ಸಿನಲ್ಲಿಯೇ ಸಂಗೀತಲೋಕದಲ್ಲಿ ಗುರುತಿಸಿಕೊಂಡಿರುವ ಜ್ಞಾನ, ತಮ್ಮ ಸುಮಧುರ ಕಂಠದಿಂದಲೇ ಹಂಸಲೇಖ ಸೇರಿದಂತೆ ಹಲವಾರು ಗಣ್ಯರ ಸಾರಥ್ಯದಲ್ಲಿ ಮುಂದುವರಿಯುತ್ತಿದ್ದು, ಇದೀಗ ಇಂದು ಬೆಂಗಳೂರಿನ ವಸಂತ ನಗರದ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ನಡೆಯುವ ಸಾಲು ಮರದ ತಿಮ್ಮಕ್ಕ ಅಭಿನಂದನಾ ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕೃತರಿಗೆ ಗೌರವಾರ್ಪಣೆ ಪಡೆಯಲಿದ್ದಾರೆ. ಇದನ್ನೂ ಓದಿ:ಜಸ್ವಂತ್ ಗಿಲ್ ಬಯೋಪಿಕ್‌ನಲ್ಲಿ ಅಕ್ಷಯ್ ಕುಮಾರ್

jnana

ಇನ್ನು ಈ ಪ್ರಶಸ್ತಿಯು ತಲಾ 25 ಸಾವಿರ ರೂ ನಗದು, ಬೆಳ್ಳಿಪದಕ, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ ಒಳಗೊಂಡಿದೆ. ಜ್ಞಾನ ತಾಯಿ ರೇಖಾ ಅವರು ಕಡಬದ ಕೊಂಬಾರು ಗ್ರಾಮದ ಕಟ್ಟೆ ಇಡ್ಯಡ್ಕದವರಾಗಿದ್ದು, ಬೆಂಗಳೂರಿನ ರಾಮನಗರ ಹನುಮಾನ ಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸಂಗೀತ ಶಿಕ್ಷಕಿಯಾಗಿದ್ದಾರೆ. ಜ್ಞಾನ ತಂದೆ ಗುರುರಾಜ್ ಬೆಂಗಳೂರಿನಲ್ಲಿ ಸಂಗೀತ ಗುರುಗಳಾಗಿದ್ದಾರೆ. ಜ್ಞಾನ ನೂರಾರು ವೇದಿಕೆಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿ, ಟಿ.ವಿ. ಶೋಗಳಲ್ಲಿ ಭಾಗವಹಿಸಿ ಖ್ಯಾತ ನಟರಿಂದ, ಸಂಗೀತ ಮಾಂತ್ರಿಕರಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಕಾರ್ಯಕ್ರಮದಲ್ಲಿ ಇನ್ನೂ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಗೈದ ಹಲವಾರಿಗೆ ಪ್ರಶಸ್ತಿ ಪ್ರಧಾನವು ನಡೆಯಲಿದೆ.

Live Tv

Share This Article
Leave a Comment

Leave a Reply

Your email address will not be published. Required fields are marked *