ಬೆಂಗಳೂರು: ಜೆಡಿಎಸ್ ಪರಿಷತ್ ಸದಸ್ಯ ಶರವಣ (Sharavana) ಮಾಲೀಕತ್ವದ ಸಾಯಿ ಗೋಲ್ಡ್ ಪ್ಯಾಲೇಸ್‌ನಿಂದ (Sai Gold Palace) ಚಿನ್ನ ಕದ್ದಿದ್ದ ಆರೋಪಿಗಳನ್ನು ಹಲಸೂರು ಗೇಟ್ (Halasuru Gate) ಪೊಲೀಸರು ಬಂಧಿಸಿ 63 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.
Advertisement
ಮೌನೇಶ್, ಮಹಾವೀರ್ ಬಂಧಿತ ಆರೋಪಿಗಳು. ಮೌನೇಶ್ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಕಳೆದ 15 ದಿನಗಳ ಹಿಂದೆ ಒಂದೂವರೆ ಕೆ.ಜಿ. ಚಿನ್ನ ಕೊಟ್ಟು ಹಾಲ್‌ಮಾರ್ಕ್ ಹಾಕಿಸಿಕೊಂಡು ಬರಲು ಕಳಿಸಿದ್ದಾರೆ. ಮೌನೇಶ್ ಚಿನ್ನ ತೆಗೆದುಕೊಂಡು ರಾಜಸ್ಥಾನಕ್ಕೆ ಪರಾರಿಯಾಗಿದ್ದ. ಈ ಘಟನೆ ಸಂಬಂಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದನ್ನೂ ಓದಿ: ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಿಗೆ ಅನುಮತಿ, ಅನುದಾನ ನೀಡಿ: ಕೇಂದ್ರಕ್ಕೆ ಡಿಕೆಶಿ ಮನವಿ
Advertisement
ಕದ್ದ ಚಿನ್ನ ಮಾರಾಟ ಮಾಡಲು ಬಾರದೇ ಇದ್ದ ಕಾರಣ ಮೌನೇಶ್, ಮಹಾವೀರ್ ಎಂಬುವನ ಮನೆಯಲ್ಲಿ ಇಟ್ಟಿದ್ದ. ಎರಡು ದಿನ ಬಿಟ್ಟು ಸ್ನೇಹಿತ ಮಹಾವೀರ್ ಮನೆ ಮೇಲೆ ಪೊಲೀಸರು ರೇಡ್ ಮಾಡಿ ಚಿನ್ನ ತಗೆದುಕೊಂಡು ಹೋಗಿದ್ದಾರೆ ಎಂದು ಮೌನೇಶ್ ಬಳಿ ಕಥೆ ಕಟ್ಟಿದ್ದಾನೆ.
Advertisement
Advertisement
ಹಲಸೂರು ಗೇಟ್ ಪೊಲೀಸರು ರಾಜಸ್ಥಾನದಲ್ಲಿ ಆರೋಪಿ ಮೌನೇಶ್‌ನನ್ನ ಬಂಧಿಸಿ ತನಿಖೆಗೆ ಒಳಪಡಿಸಿದಾಗ ಕದ್ದ ಚಿನ್ನ ಮಹಾವೀರ್‌ಗೆ ಕೊಟ್ಟಿರೋದಾಗಿ ಹೇಳಿದ್ದ. ಮಹಾವೀರ್‌ನನ್ನ ಬಂಧನ ಮಾಡಿ ವಿಚಾರಣೆ ಮಾಡಿದಾಗ ಮೌನೇಶ್‌ಗೆ ಗೊತ್ತಾಗದೆ ಬೇರೆ ಕಡೆ ಚಿನ್ನ ಮಾರಾಟ ಮಾಡಿ ಜಮೀನಿನ ಮೇಲೆ ಹಣ ಹಾಕಿರುವುದು ಬೆಳಕಿಗೆ ಬಂದಿದೆ. ಬಂಧಿತರಿಂದ 63 ಲಕ್ಷ ರೂ. ಮೌಲ್ಯದ 750 ಗ್ರಾಂ ಚಿನ್ನಾಭರಣವನ್ನ ವಶಕ್ಕೆ ಪಡೆಯಲಾಗಿದೆ. ಇದನ್ನೂ ಓದಿ: ಕೋರ್ಟ್ ಹಾಲ್‌ನಲ್ಲಿ ಪವಿತ್ರಾ, ದರ್ಶನ್ ದೂರ ದೂರಾ – ಕಣ್ಣೀರಿಡುತ್ತ ತೆರಳಿದ ಗೆಳತಿ!
ಮನೆಗಳ್ಳತನ ಮಾಡುತ್ತಿದ್ದ ಕಳ್ಳರು ಅಂದರ್
ಕದ್ದ ಬೈಕ್‌ನಲ್ಲಿ ಮನೆಗಳ್ಳತನ ಮಾಡುತ್ತಿದ್ದ ಆರೋಪಿಗಳನ್ನ ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ.
ಅಂಧ್ರಹಳ್ಳಿ ನಿವಾಸಿಗಳಾಗಿರುವ ಗೋಲ್ಡ್ ವೆಂಕಿ ಅಲಿಯಾಸ್ ವೆಂಕಟೇಶ್, ಶ್ರೀನಿವಾಸ ಅಲಿಯಾಸ್ ಕರಾಟೆ ಸೀನ, ಸಾಗರ್ ಬಂಧಿತ ಆರೋಪಿಗಳು. ಕರಾಟೆ ಸೀನನ ಮೇಲೆ 44 ಕೇಸ್, ವೆಂಕಟೇಶ್ ಮೇಲೆ 8 ಕೇಸ್‌ಗಳು ದಾಖಲಾಗಿವೆ. ಇದನ್ನೂ ಓದಿ: ಪಂಜಾಬ್‌ನ ಆಪ್ ಸರ್ಕಾರದಿಂದ ಬುಲ್ಡೋಜರ್ ಅಸ್ತ್ರ – ಡ್ರಗ್ ಮಾಫಿಯಾ ಕಿಂಗ್‌ಗಳ ಮನೆ ನೆಲಸಮ
ಸಾಗರ್, ವೆಂಕಟೇಶ್‌ನ ಸ್ನೇಹಿತನಾಗಿದ್ದ. ಜೈಲಿಗೆ ಹೋದಾಗ ವೆಂಕಟೇಶ್ ಮತ್ತು ಕರಾಟೆ ಸೀನ ಪರಿಚಯ ಆಗಿತ್ತು. ಬಳಿಕ ಸಾಗರ್ ಮಾತು ಕೇಳಿ ಮೂವರು ಬೈಕ್ ಕಳ್ಳತನ ಮಾಡುತ್ತಿದ್ದರು. ಕದ್ದ ಬೈಕ್‌ಗಳಲ್ಲಿ ಮನೆಗಳ್ಳತನ ಮಾಡುತ್ತಿದ್ದ ಆರೋಪಿಗಳಿಂದ 76 ಗ್ರಾಂ. ಚಿನ್ನಾಭರಣ, 16 ಬೈಕ್‌ಗಳು ವಶಕ್ಕೆ ಪಡೆಯಲಾಗಿದೆ.
ಮೊಬೈಲ್ ಕಳ್ಳನ ಬಂಧನ
ಖತರ್ನಾಕ್ ಮೊಬೈಲ್ ಕಳ್ಳ ಪೂಜಾರಿ ವನ್ನೂರುಸ್ವಾಮಿಯನ್ನು ಹೆಣ್ಣೂರು ಪೊಲೀಸರು ಬಂಧಿಸಿದ್ದಾರೆ. ಗಾರೆ ಕೆಲಸ ಮಾಡುತ್ತಿದ್ದ ಆರೋಪಿ ಶೋರೂಂಗಳಿಗೆ ನುಗ್ಗಿ 14 ಮೊಬೈಲ್ ಕಳ್ಳತನ ಮಾಡಿದ್ದಾನೆ. ವನ್ನೂರುಸ್ವಾಮಿ ಗಾರೆ ಕೆಲಸಕ್ಕೆ ಹೋಗುವಾಗ ಶೋರೂಂಗಳನ್ನು ಗುರುತಿಸಿ ಕಳ್ಳತನ ಮಾಡುತ್ತಿದ್ದನು. ಇದನ್ನೂ ಓದಿ: ಹಣ್ಣು ಹಂಚಿಕೆ ನೆಪದಲ್ಲಿ ಬಾಗಿಲು ಬಡಿದ ಕಳ್ಳರು – ವೃದ್ಧ ದಂಪತಿ ಕೈಕಾಲು ಕಟ್ಟಿ ದರೋಡೆ