ಬೆಂಗಳೂರು: ಗ್ಯಾಸ್ ಕಟರ್ ಬಳಸಿ ಎಟಿಎಂನಲ್ಲಿದ್ದ (ATM) ಹಣ (Money) ಕದ್ದೋಯ್ದ ಘಟನೆ ಸೂಲಿಬೆಲೆಯ (Sulibele) ದೇವನಹಳ್ಳಿ ಕ್ರಾಸ್‍ನಲ್ಲಿ ನಡೆದಿದೆ.
ಸ್ಟೇಟ್ಸ್ ಬ್ಯಾಂಕ್ ಆಫ್ ಇಂಡಿಯಾಗೆ ಸೇರಿದ ಎಟಿಎಂನಲ್ಲಿ ಕಳ್ಳತನ ನಡೆದಿದೆ. ಎಟಿಎಂನಲ್ಲಿ 30 ಲಕ್ಷ ರೂ.ಗೂ ಹೆಚ್ಚು ಹಣ ಕಳ್ಳತನ ಮಾಡಲಾಗಿದೆ. ಎಟಿಎಂನ ಶೆಟರ್‌ನ್ನು ಗ್ಯಾಸ್ ಕಟರ್ ಬಳಸಿ ಕತ್ತರಿಸಿ, ದುಷ್ಕರ್ಮಿಗಳು ಒಳಗೆ ನುಗ್ಗಿದ್ದಾರೆ.
ಎಟಿಎಂ ಒಳಗೆ ತಮ್ಮ ಮುಖ ಕಾಣದಂತೆ ಸಿಸಿಟಿವಿಗೆ ಸ್ಪ್ರೇ ಬಳಸಿ ಬಣ್ಣ ಹಾಕಿದ್ದಾರೆ. ಬಳಿಕ ಕಾರಿನಿಂದಲೇ ಗ್ಯಾಸ್ ಕಟರ್ ಬಳಸಿ ಶೆಟರ್ ಕತ್ತರಿಸಲಾಗಿದೆ. ಆಂಧ್ರ ಪ್ರದೇಶದ ನೋಂದಣಿ ಸಂಖ್ಯೆಯ ಕಾರಿನಲ್ಲಿ ದುಷ್ಕರ್ಮಿಗಳು ಬಂದಿರುವುದು ತಿಳಿದು ಬಂದಿದೆ. ಎಟಿಎಂ ದರೋಡೆ ನಂತರ ಹೊಸಕೋಟೆ ಮಾರ್ಗದಲ್ಲಿ ದುಷ್ಕರ್ಮಿಗಳು ಭಾಗಿಯಾಗಿದ್ದಾರೆ.
ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್‍ಪಿ ಸಿ.ಕೆ ಬಾಬಾ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಸೂಲಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.