ಕಾರವಾರ: ರಸ್ತೆ ಬದಿಯ ಸೋಲಾರ್ ಲೈಟಿನ ಬ್ಯಾಟರಿಗಳನ್ನು ಇಬ್ಬರು ಖದೀಮರು ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನಡೆದಿದೆ.
ಕಳೆದ ಕೆಲವು ದಿನಗಳಿಂದ ವಿವಿಧ ಗ್ರಾಮಗಳಲ್ಲಿ ಬ್ಯಾಟರಿ ಕಳ್ಳತನ ಮಾಡಿ ಈ ಕಳ್ಳರು ಎಸ್ಕೇಪ್ ಆಗುತ್ತಿದ್ದರು. ಇದರಿಂದಾಗಿ ಹಲವು ಗ್ರಾಮದಲ್ಲಿ ಬೀದಿ ದೀಪಗಳಿಲ್ಲದೇ ಕಳ್ಳರಿಗೆ ಜನರು ಹಿಡಿ ಶಾಪ ಹಾಕುತ್ತಿದ್ದರು. ಆದ್ರೆ ಒಂದಲ್ಲ ಒಂದು ದಿನ ಸಿಕ್ಕಿಹಾಕಿಕೊಳ್ಳಲೇ ಬೇಕು ಎನ್ನುವ ಹಾಗೆ ಶಿರಾಲಿ ಗ್ರಾಮದಲ್ಲಿ ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೌದು ಬುಧವಾರ ರಾತ್ರಿ ಶಿರಾಲಿ ಗ್ರಾಮದ ಕಂಚಿನಬಾಗಿಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಸಮೀಪದಲ್ಲಿ ಇಬ್ಬರು ಯುವಕರು ಕಳ್ಳತನ ಮಾಡಿ ಪರಾರಿಯಾದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
Advertisement
Advertisement
ಸ್ಕೂಟಿ ಮೇಲೆ ಬಂದ ಇಬ್ಬರು ಕಳ್ಳರು, ಮೊದಲು ರಸ್ತೆ ಬದಿ ಇದ್ದ ಸೋಲಾರ್ ಬ್ಯಾಟರಿಯ ಮೇಲಿನ ಕವಚವನ್ನು ಬಿಚ್ಚಿದ್ದಾರೆ. ನಂತರ ಒಬ್ಬ ಕಳ್ಳ ಲೈಟ್ ಕಂಬವನ್ನು ಹತ್ತಿ ಬ್ಯಾಟರಿ ಕೆಳಗೆ ಇಳಿಸಿ ಕೊಟ್ಟಿದ್ದಾನೆ. ಬಳಿಕ ಇಬ್ಬರು ಸೇರಿ ಅದನ್ನು ಎತ್ತಿಕೊಂಡು ಸ್ಕೂಟಿ ಮೇಲೆ ಇಟ್ಟುಕೊಂಡು ಪರಾರಿಯಾದ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
Advertisement
ಈ ಹಿಂದೆ ತಾಲೂಕಿನ ಮಾರುಕೇರಿ, ಮುರ್ಡೇಶ್ವರದಲ್ಲಿ ಕೂಡ ಬ್ಯಾಟರಿ ಕದಿಯಲಾಗಿತ್ತು. ಈಗ ಬ್ಯಾಟರಿ ಕದ್ದ ಚಾಲಾಕಿ ಕಳ್ಳರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದು, ಘಟನೆ ಸಂಬಂಧ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement
https://www.youtube.com/watch?v=fXfRuDKZ3K8
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv