ಜೈಪುರ: ಸಾಮಾನ್ಯವಾಗಿ ಕಳ್ಳರು ಎಟಿಎಂಗೆ ಹೋಗಿ ಹಣವನ್ನು ಕದ್ದು ಪರಾರಿಯಾಗುತ್ತಾರೆ. ಆದರೆ ಇಲ್ಲಿ ಕಳ್ಳತನ ಮಾಡಲು ಬಂದು ಎಟಿಎಂ ಮೆಷಿನನ್ನೇ ಕದ್ದಿದ್ದಲ್ಲದೇ ಕಳ್ಳತನ ಮಾಡಿದ್ದ ಕಾರಿನಲ್ಲೇ ಅದನ್ನ ಇಟ್ಟುಕೊಂಡು ಪರಾರಿಯಾಗಿದ್ದಾರೆ. ಈ ಘಟನೆ ರಾಜಸ್ಥಾನದ ಜೈಪುರ ಸಮೀಪದ ಬಂಡಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಪೊಲೀಸರ ಪ್ರಕಾರ, ಮಾಸ್ಕ್ ಧರಿಸಿದ್ದ ಐವರು ಯುವಕರು ನೈನ್ವಾ ರಸ್ತೆಯ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಎಟಿಮ್ ಗೆ ಹೋಗಿದ್ದಾರೆ. ಮೊದಲು ಕರೆಂಟ್ ವೈರ್‍ಗಳನ್ನು ಕಟ್ ಮಾಡಿದ್ದಾರೆ. ನಂತರ ಎಟಿಎಂ ಮಷಿನ್ ಬೇರ್ಪಡಿಸಿ ಹೊರಗಡೆ ನಿಲ್ಲಿಸಿದ್ದ ವಾಹನದಲ್ಲಿ ಇಟ್ಟಿದ್ದಾರೆ. ಈ ವಾಹನವನ್ನ ಕೂಡ ಅದೇ ಪ್ರದೇಶದಲ್ಲಿ ಕಳ್ಳತನ ಮಾಡಿ ತಂದಿದ್ದರು. ನಂತರ ಎಟಿಎಂ ಮೆಷಿನ್ ಇಟ್ಟುಕೊಂಡು ವಾಹನದಲ್ಲಿ ಪರಾರಿಯಾಗಿದ್ದಾರೆ. ಈ ಎಲ್ಲಾ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Advertisement
Advertisement
ಕಳ್ಳರು ಮುಖಕ್ಕೆ ಮಾಸ್ಕ್ ಧರಿಸಿ ಬಂದಿದ್ದರಿಂದ ಯಾರೊಬ್ಬರ ಗುರುತು ಕೂಡ ಪತ್ತೆಯಾಗಲಿಲ್ಲ. ನೈನ್ವಾ ರಸ್ತೆಯ ಎಟಿಎಂನಲ್ಲಿ ಸೆಕ್ಯೂರಿಟಿ ಗಾರ್ಡ್ ನಿಯೋಜಿಸಿರಲಿಲ್ಲ. ಆದ ಕಾರಣ ಕಳ್ಳರು ಇದೇ ಎಟಿಎಂ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಬ್ಯಾಂಕ್ ಉದ್ಯಮಿಯೊಬ್ಬರು ಮುಂಜಾನೆ ವಾಕ್ ಮಾಡಲು ಬಂದಾಗ ಕಳ್ಳತನವಾಗಿರೋದು ಬೆಳಕಿಗೆ ಬಂದಿದೆ. ತಕ್ಷಣ ಅವರು ಬ್ಯಾಂಕ್ ಅಧಿಕಾರಿಗಳಿಗೆ ಮತ್ತು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
Advertisement
ಎಟಿಎಂನಲ್ಲಿ ಸುಮಾರು 5 ಲಕ್ಷ ರೂ. ಹಣವಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.
Thieves Take Away ATM In A Stolen Carhttps://t.co/5YexS5iOHh pic.twitter.com/11axdbkmlE
— Sakshi Post (@SakshiPost) November 16, 2017