ಚಿಕ್ಕಬಳ್ಳಾಪುರ: ಪೊಲೀಸ್ ಠಾಣೆ ಬಳಿ ನಿಲ್ಲಿಸಿದ್ದ ಬೈಕನ್ನೇ ಕಳ್ಳರು ಕಳವು ಮಾಡಿರುವ ಘಟನೆ ತಾಲೂಕಿನ ಪೇರೆಸಂದ್ರ ಹೊರ ಪೊಲೀಸ್ ಠಾಣೆ ಬಳಿ ನಡೆದಿದೆ.
ಗುಡಿಬಂಡೆ ಪೊಲೀಸ್ ಠಾಣಾ ವ್ಯಾಪಿ ಪೇರೇಸಂದ್ರ ಹೊರ ಠಾಣೆ ಬಳಿ ನವೆಂಬರ್ 11 ರಂದು ಪ್ರಕರಣವೊಂದರಲ್ಲಿ ವಶಕ್ಕೆ ಪಡೆಯಲಾಗಿದ್ದ ಬೈಕನ್ನು ನಿಲ್ಲಿಸಿಲಾಗಿತ್ತು. ಇಷ್ಟು ದಿನ ಠಾಣೆ ಬಳಿಯೇ ಇದ್ದ ಬೈಕ್ ಡಿಸೆಂಬರ್ 29ರ ನಂತರ ಕಾಣೆಯಾಗಿದೆ.
Advertisement
ಬೈಕನ್ನು ಕಳ್ಳರು ಕಳವು ಮಾಡಿದ್ದಾರೆ. ಈ ಸಂಬಂಧ ಹೊರ ಠಾಣೆಯ ಎಎಸ್‍ಐ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಬೈಕ್ ಕಳವು ಪ್ರಕರಣ ದಾಖಲಿಸಿದ್ದಾರೆ. ಕೆಎ-02 ಎಸ್ 9731 ನೊಂದಣಿಯ ಬೈಕ್ ಕಳವಾಗಿದ್ದು, ಬೈಕ್ ಪತ್ತೆ ಮಾಡಿಕೊಡುವಂತೆ ದೂರು ದಾಖಲಾಗಿದೆ.
Advertisement
ಇತ್ತೀಚೆಗೆ ಚಿಕ್ಕಬಳ್ಳಾಪುರ ನಂದಿಗಿರಿಧಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ ಪೇದೆಯ ಬೈಕನ್ನು ಕಳ್ಳರು ಕಳವು ಮಾಡಿದ್ದರು. ನಂದಿಗಿರಿಧಾಮ ಪೊಲೀಸ್ ಠಾಣೆಯ ಪೊಲೀಸ್ ಪೇದೆ ಮಧುಸೂದನ್ ಅವರ ಬೈಕ್ ಕಳವು ಮಾಡಲಾಗಿತ್ತು. ಇವರು ನಂದಿ ಕ್ರಾಸ್ ಸರ್ವೀಸ್ ರಸ್ತೆ ಪಕ್ಕದ ಕೆಂಪಣ್ಣನವರ ಬಿಲ್ಡಿಂಗ್ ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಬಾಡಿಗೆ ಮನೆ ಬಳಿ ನಿಲ್ಲಿಸಲಾಗಿದ್ದ ಬೈಕ್ ನ್ನು ಕಳವು ಮಾಡಲಾಗಿತ್ತು.