ದಾವಣಗೆರೆ: ನ್ಯಾಮತಿ ಬ್ಯಾಂಕ್ ದರೋಡೆ ಕೇಸ್ ಪತ್ತೆ ಹಚ್ಚಿದ್ದ ದಾವಣಗೆರೆ (Davanagere) ಪೊಲೀಸರಿಗೆ ಅಂತಹದ್ದೇ ಮತ್ತೊಂದು ಪ್ರಕರಣ ಎದುರಾಗಿದೆ. ನಗರದ ಮಂಡಿ ಪೇಟೆಯಲ್ಲಿರುವ ಚಿನ್ನದಂಗಡಿಯಲ್ಲಿ ಕಳ್ಳಿಯರು ಕೈಚಳಕ ತೋರಿಸಿದ್ದು, ಸುಮಾರು 1.13 ಕೋಟಿ ರೂ. ಮೌಲ್ಯದ ಚಿನ್ನಾಭರಣವನ್ನು (Gold) ಕದ್ದು ಪರಾರಿಯಾಗಿದ್ದಾರೆ.
ಬುರ್ಖಾ ಧರಿಸಿ ಬಂದಿದ್ದ ಐವರು ಕಳ್ಳಿಯರು ಅಂಗಡಿಗೆ ಬೆಳ್ಳಿ ಲೋಟ ಖರೀದಿಸುವ ನೆಪದಲ್ಲಿ ಬಂದಿದ್ದರು. ಈ ವೇಳೆ, ಅಂಗಡಿಯ ಕೆಲಸದವರ ಗಮನ ಬೇರೆಡೆ ಸೆಳೆದು, 1 ಕೆಜಿ 400 ಗ್ರಾಂ ಬಂಗಾರದ ಆಭರಣಗಳಿದ್ದ ಬಾಕ್ಸ್‌ನ್ನು ಕದ್ದು ಪರಾರಿಯಾಗಿದ್ದಾರೆ. ಕಳ್ಳಿಯರ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ನ್ಯಾಮತಿ ಬ್ಯಾಂಕ್ ದರೋಡೆ ಪ್ರಕರಣ – ತಮಿಳುನಾಡಿನ ಪಾಳು ಬಾವಿಯಲ್ಲಿ ಚಿನ್ನಾಭರಣ ಇಟ್ಟಿದ್ದ ಗ್ಯಾಂಗ್!
ಬಾಕ್ಸ್‌ನಲ್ಲಿ ಕಿವಿ ಓಲೆ, ಜುಮುಕಿ ಹಾಗೂ ಬೆಲೆಬಾಳುವ ಆಭರಣಗಳಿದ್ದವು. ಈ ಸಂಬಂಧ ಬಸವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳ್ಳಿಯರ ಸೆರೆಗೆ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: ದಾವಣಗೆರೆ| ಬ್ಯಾಂಕ್ ದರೋಡೆಗೆ ಬಂದಿದ್ದ ಯುಪಿ ಗ್ಯಾಂಗ್ ಮೇಲೆ ಪೊಲೀಸರಿಂದ ಫೈರಿಂಗ್ – ನಾಲ್ವರು ಅರೆಸ್ಟ್