ಬೆಂಗಳೂರು: ಸಾಕು ನಾಯಿಯನ್ನು ವಾಕಿಂಗ್‌ಗೆ ಕರೆದೊಯ್ದ ವೇಳೆ ಕಳ್ಳರು ನಾಯಿಯನ್ನು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಜಯನಗರದ (Jayanagara) 9ನೇ ಬ್ಲಾಕ್‌ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ತಿಂಗಳು ಮಾ. 12ರ ರಾತ್ರಿ ಮಧುರಾ ಎಂಬುವವರು ರೀಚಿ ಎಂಬ ಹೆಸರಿನ ನಾಯಿಯನ್ನು ವಾಕಿಂಗ್‌ಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಹೆಲ್ಮೆಟ್ ಹಾಕಿ ಬೈಕ್‌ನಲ್ಲಿ ಬಂದ ಅಪರಿಚಿತರು ಕೈಯಲ್ಲಿ ಹಿಡಿದಿದ್ದ ನಾಯಿಯನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಇದನ್ನೂ ಓದಿ: ಬೆಲೆ ಏರಿಕೆ ಬಗ್ಗೆ ಮುಂಚೆ ಹೇಳಿದ್ರೆ ಕಾಂಗ್ರೆಸ್ 50 ಸೀಟು ಗೆಲುತ್ತಿರಲಿಲ್ಲ: ಸಿ.ಟಿ.ರವಿ ಕಿಡಿ
- Advertisement -
- Advertisement -
ಸಿಸಿಟಿವಿಯಲ್ಲಿ ನಾಯಿ ಕಿತ್ತುಕೊಂಡು ಹೋಗಿರುವ ದೃಶ್ಯ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಾಯಿಯ ಮಾಲೀಕರು ತಿಲಕನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ದೂರಿನಲ್ಲಿ 10,000 ಸಾವಿರ ರೂ. ಬೆಲೆ ಬಾಳುವ ನಾಯಿ ಎಂದು ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಗುಜರಾತ್‌ನ ಬನಸ್ಕಾಂತದಲ್ಲಿ ಪಟಾಕಿ ಫ್ಯಾಕ್ಟರಿಯಲ್ಲಿ ಸ್ಫೋಟ – 13 ಮಂದಿ ದುರ್ಮರಣ