ಚಿಕ್ಕಬಳ್ಳಾಪುರ | ಮುಜರಾಯಿ ಇಲಾಖೆ ದೇವಾಲಯದ ಹುಂಡಿಗಳನ್ನೇ ದೋಚಿದ ಕಳ್ಳರು

Public TV
2 Min Read
chikkaballapura Temple

ಚಿಕ್ಕಬಳ್ಳಾಪುರ: ಜಿಲ್ಲೆಯ ಬಾಗೇಪಲ್ಲಿ (Bagepalli) ಪಟ್ಟಣದ ಹೃದಯ ಭಾಗದಲ್ಲಿರುವ ಮುಜರಾಯಿ ಇಲಾಖೆಗೆ ಸೇರಿದ ಇತಿಹಾಸ ಪ್ರಸಿದ್ಧ ಶ್ರೀ ಬೈಲಾಂಜನೇಯಸ್ವಾಮಿ ದೇವಾಲಯ (Balanjaneya Temple) ಮತ್ತು ಶ್ರೀ ಅಯ್ಯಪ್ಪ ದೇವಾಲಯದಲ್ಲಿ ಕಳ್ಳರು ಹುಂಡಿ ಒಡೆದು ಹಣ ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.

chikkaballapura Temple 3

ಬಾಗೇಪಲ್ಲಿ ಪಟ್ಟಣದಲ್ಲಿ ಎಸ್‌ಬಿ.ಎಂ.ರಸ್ತೆಗೆ ಹೊಂದಿಕೊಂಡಿರುವ ಬೈಲಾಂಜನೇಯಸ್ವಾಮಿ ದೇವಾಲಯದಲ್ಲಿ ಮಧ್ಯರಾತ್ರಿ ವೇಳೆ ಕಳ್ಳರು ದೇವಾಲಯದ ಆವರಣದ ಹಿಂಭಾಗದಿಂದ ಪ್ರವೇಶಿಸಿದ್ದಾರೆ. ಕಬ್ಬಿಣದ ಗೇಟ್‌ ಬೀಗ ಒಡೆದು ಹುಂಡಿಯಲ್ಲಿದ್ದ (Temple Treasury) ಲಕ್ಷಾಂತರ ರೂಪಾಯಿ ಹಣ ದೋಚಿ ಪರಾರಿಯಾಗಿದ್ದಾರೆ. ಇದನ್ನೂ ಓದಿ: ತೆಲಂಗಾಣದ ಶ್ರೀಶೈಲಂ ಎಡದಂಡೆ ಕಾಲುವೆ ಮೇಲ್ಛಾವಣಿ ಕುಸಿತ – 8 ಮಂದಿ ಸಿಲುಕಿರುವ ಶಂಕೆ, 48 ಕಾರ್ಮಿಕರ ರಕ್ಷಣೆ

chikkaballapura Temple 2

ಇಂದು (ಶನಿವಾರ) ಮುಂಜಾನೆ ಎಂದಿನಂತೆ ದೇವಾಲಯಕ್ಕೆ ಮಹಿಳೆಯೊಬ್ಬರು ಸ್ವಚ್ಛಗೊಳಿಸಲು ಬಾಗಿಲು ತೆಗೆದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ. ಬಳಿಕ ಈ ವಿಷಯವನ್ನು ದೇವಾಲಯದ ಅರ್ಚಕ ಶೇಷುಸ್ವಾಮಿ ಅವರಿಗೆ ತಿಳಿಸಿದ್ದಾರೆ. ಕೂಡಲೇ ಅರ್ಚಕರು ಪೊಲೀಸರಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದರೆ ಯಾರು ಬೇಕಾದ್ರು ಸ್ಪರ್ಧೆ ಮಾಡಲಿ – ಛಲವಾದಿ ನಾರಾಯಣಸ್ವಾಮಿ

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪ್ರಧಾನ ಅರ್ಚಕ ಶೇಷುಸ್ವಾಮಿ, ಸುಮಾರು ಒಂದೂವರೆ ವರ್ಷಕ್ಕೂ ಹೆಚ್ಚು ದಿನಗಳಿಂದ ಹುಂಡಿಯಲ್ಲಿ ಭಕ್ತರಿಂದ ಸಂಗ್ರಹವಾಗಿದ್ದ ಹಣ ಎಣಿಕೆ ಮಾಡದೇ ಹಾಗೆಯೆ ಇತ್ತು. ಇದರನ್ನು ಗಮನಿಸಿ ಹಲವು ದಿನಗಳಿಂದ ಹೊಂಚು ಹಾಕಿ ಖದೀಮರು ಈ ಕೆಲಸ ಮಾಡಿರಬಹುದು ಎಂದಿದ್ದಾರೆ. ಇದನ್ನೂ ಓದಿ: ಪಂಜಾಬ್‌ನಲ್ಲಿ ಅಸ್ತಿತ್ವದಲ್ಲೇ ಇಲ್ಲದ ಇಲಾಖೆಗೆ 20 ತಿಂಗಳು ಸಚಿವರಾಗಿದ್ದ ಕುಲ್ದೀಪ್‌ ಸಿಂಗ್‌

ವಿಷಯ ತಿಳಿದ ಕೂಡಲೇ ಪೊಲೀಸ್‌ ಇನ್ಸ್‌ಪೆಕ್ಟರ್‌ ಪ್ರಶಾಂತ್ ವರ್ಣಿ ಮತ್ತು ಪಿಎಸ್‌ಐ ಮುನಿರತ್ನಂ ಅವರು ಪೊಲೀಸ್‌ ಸಿಬ್ಬಂದಿ, ಮುಜರಾಯಿ ಇಲಾಖೆ ಅಧಿಕಾರಿ ಕಾವ್ಯ ಮತ್ತು ಬೆರಳಚ್ಚು ತಜ್ಞರು, ಶ್ವಾನದಳದೊಂದಿಗೆ ದೇವಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಳಿಕ ಪ್ರಕರಣ ದಾಖಲಿಸಿಕೊಂಡು ಸುತ್ತ ಮುತ್ತಲು ಇರುವ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿ ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ. ಇದನ್ನೂ ಓದಿ: ಆನ್‌ಲೈನ್ ಬೆಟ್ಟಿಂಗ್ ಆಪ್‌ ನಿಷೇಧಿಸಿ – ಮೋದಿಗೆ ಇಳಕಲ್ ಸೀರೆಯಲ್ಲಿ ನೇಯ್ಗೆ ಮಾಡಿ ನೇಕಾರನ ಮನವಿ

Share This Article