ಬೆಂಗಳೂರು: ಕಳ್ಳರು ಹಣ್ಣು ಹಂಚಿಕೆಯ ನೆಪವೊಡ್ಡಿ, ಬಾಗಿಲು ತೆಗೆದ ವೃದ್ಧ ದಂಪತಿಯ ಕೈಕಾಲು ಕಟ್ಟಿ ದರೋಡೆ (Robbery) ಮಾಡಿರುವ ಘಟನೆ ಕೊಡಿಗೆಹಳ್ಳಿಯ (Kodigehalli) ತಿಂಡ್ಲು ರಸ್ತೆಯ ಬಿ.ಕೆ ಲೇಔಟ್‌ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಚಂದ್ರಶೇಖರ್ (67)ರಿಗೆ ಮೂವರು ಹೆಣ್ಣು ಮಕ್ಕಳಿದ್ದು, ಎಲ್ಲರನ್ನೂ ಮದುವೆ ಮಾಡಿಕೊಟ್ಟ ನಂತರ ವಯಸ್ಸಾದ ದಂಪತಿಗಳಿಬ್ಬರೇ ಮನೆಯಲ್ಲಿ ವಾಸವಿದ್ದರು. ಇದನ್ನೂ ಓದಿ: ಮಹಾಶಿವರಾತ್ರಿಯ ಮಹತ್ವ ಏನು? ಆಚರಣೆ ಹೇಗಿರಬೇಕು?
ಫೆ.15 ರಂದು ಸಂಜೆ 6 ಗಂಟೆ ಸುಮಾರಿಗೆ ಮನೆಯ ಬಳಿ ಬಂದ ಮೂವರು ಅಪರಿಚಿತರು, ನಾವು ಇದೇ ಏರಿಯಾದವರು ವಯಸ್ಸಾದವರಿಗೆ ಹಣ್ಣು ಹಂಚುತ್ತಿದ್ದೇವೆ ಬಾಗಿಲು ತೆಗೆಯಿರಿ ಎಂದು ಬಾಗಿಲು ತಟ್ಟಿದ್ದರು. ಹಣ್ಣಿನ ತಟ್ಟೆ ನೋಡಿದ ದಂಪತಿ ಬಾಗಿಲು ತೆರೆದಿದ್ದು, ಈ ವೇಳೆ ಮೂವರು ದರೋಡೆಕೋರರು ಏಕಾಏಕಿ ಒಳನುಗ್ಗಿದ್ದಾರೆ. ಇದನ್ನೂ ಓದಿ: ಲಾಡ್ಲೇ ಮಶಾಕ್ ದರ್ಗಾದ ಶಿವಲಿಂಗ ಪೂಜೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್ – ಆಂದೋಲಾ ಶ್ರೀಗಿಲ್ಲ ಪೂಜೆ ಭಾಗ್ಯ
ಮನೆಯಲ್ಲಿದ್ದ ಚಂದ್ರಶೇಖರ್ ಮತ್ತು ಅವರ ಪತ್ನಿಯ ಮೇಲೆ ಹಲ್ಲೆ ಮಾಡಿ ಕೈ ಕಾಲು ಕಟ್ಟಿ, ಇಬ್ಬರನ್ನೂ ಟಾಯ್ಲೆಟ್ ರೂಮ್ ಒಳಗೆ ತಳ್ಳಿದ್ದಾರೆ. ಬಳಿಕ ದರೋಡೆಕೋರರು ಮನೆಯಲ್ಲಿದ್ದ ಚಿನ್ನಾಭರಣ, ನಗದು, ಬೆಲೆ ಬಾಳುವ ವಸ್ತುಗಳನ್ನೆಲ್ಲಾ ದೋಚಿ ಪರಾರಿಯಾಗಿದ್ದಾರೆ. ಇದನ್ನೂ ಓದಿ: Haveri | ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಬಸ್ ಡಿಕ್ಕಿ – ಪ್ರಯಾಣಿಕರು ಪಾರು