ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯ ಉನ್ನತಾಧಿಕಾರಿಗೆ ಖದೀಮರು ವಂಚಿಸಿರುವ ಘಟನೆ ನಗರದಲ್ಲಿ ನಡೆದಿದೆ.
ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಎಎಂ ಪ್ರಸಾದ್ ಅವರಿಗೆ ಆನ್‍ಲೈನ್ ವಂಚನೆ ಮಾಡಲಾಗಿದೆ. ಎರಡು ಪ್ರತ್ಯೇಕ ಖಾತೆಗಳಿಗೆ ತಲಾ ಒಂದೊಂದು ಲಕ್ಷ ಅಂದರೆ ಒಟ್ಟು ಬರೋಬ್ಬರಿ ಎರಡು ಲಕ್ಷ ರೂ. ಕನ್ನ ಹಾಕಿದ್ದಾರೆ. ಸೋಮವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಕೆಲಸದಲ್ಲಿದ್ದಾಗಲೇ ಕರೆ ಮಾಡಿದ್ದ ಅಪರಿಚಿತರು ನಿಮ್ಮ ಡೆಬಿಟ್ ಕಾರ್ಡ್ ಅವಧಿ ಮುಗಿದಿದೆ. ರಿಯಾಕ್ಟಿವ್ ಮಾಡಬೇಕು ಎಂದು ಬ್ಯಾಂಕ್ ಖಾತೆಯ ಸಂಪೂರ್ಣ ಮಾಹಿತಿ ಸಂಗ್ರಹವನ್ನು ಪಡೆದಿದ್ದಾರೆ.
Advertisement
Advertisement
ಬಳಿಕ ಕೆಲವೇ ಕ್ಷಣಗಳಲ್ಲಿ ಮತ್ತೊಮ್ಮೆ ಕರೆ ಮಾಡಿ ಪ್ರಸಾದ್ ರ ಇನ್ನೊಂದು ಬ್ಯಾಂಕ್ ಅಕೌಂಟ್‍ನ ಮಾಹಿತಿಯನ್ನೂ ಪಡೆದ ಅಪರಿಚಿತರು ಇದಾಗಿ ಒಂದು ಗಂಟೆಗಳಲ್ಲೇ ಎರಡೂ ಬ್ಯಾಂಕ್ ಖಾತೆಯಿಂದ ತಲಾ ಒಂದೊಂದು ಲಕ್ಷ ರೂ. ಹಣ ಡೆಬಿಟ್ ಆಗಿರೋ ಮೆಸೆಜ್ ಬಂದಿದೆ. ಡಿಜಿಪಿ ಅವರು ಯೋಚಿಸದೇ ಖಾತೆಯ ಮಾಹಿತಿ ಶೇರ್ ಮಾಡಿ ಹಣ ಕಳೆದುಕೊಂಡಿದ್ದಾರೆ. ಆನ್‍ಲೈನ್ ವಂಚಕರ ಬಲೆಗೆ ಬಿದ್ದ ಎಎಂ ಅವರು ಎರಡನೇ ಉನ್ನತಾಧಿಕಾರಿಯಾಗಿದ್ದಾರೆ.
Advertisement
ಇದೇ ಮೊದಲಲ್ಲ 2015 ರಲ್ಲಿ ಆನ್‍ಲೈನ್ ಅಲ್ಲಿ ಡಿಜಿಪಿ ಓಂ ಪ್ರಕಾಶ್ ಅವರು ಕೂಡ ವಂಚಕರಿಂದ 10 ಸಾವಿರ ಕಳೆದುಕೊಂಡಿದ್ದರು. ಪ್ರಕಾಶ್ ಅವರು ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ನೆಡೆಸಿ ದೆಹಲಿ ಮೂಲದ ಅಶ್ರಫ್ ಅಲಿ ಎಂಬಾತನನ್ನು ಬಂಧಿಸಿದ್ದರು. ಚೆನ್ನೈನಲ್ಲೇ ಕುಳಿತು ಅಶ್ರಫ್ ಅಲಿ ಡಿಜಿಪಿ ಓಂ ಪ್ರಕಾಶ್‍ಗೆ ವಂಚಿಸಿದ್ದ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv