ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ (Mysuru) ಕಳ್ಳರ ಹಾವಳಿ ಹೆಚ್ಚಾಗಿದೆ. ಹೀಗಾಗಿ ಮನೆ ಮುಂದೆ ಕಾರು (Car) ನಿಲ್ಲಿಸಿದ್ದರೆ ಸೇಫ್ ಅಂದುಕೊಳ್ಳೋ ಮಾಲೀಕರು ಎಚ್ಚೆತ್ತುಕೊಳ್ಳಬೇಕಿದೆ.
ಮನೆ ಮುಂದೆ ಕಾರು ಇದ್ದಮಾತ್ರಕ್ಕೆ ಸೇಫ್ ಅಂದುಕೊಳ್ಳೋಹಾಗೇ ಇಲ್ಲ. ಕಾರು ನಿಂತಲ್ಲೇ ಇರುತ್ತೆ. ಆದ್ರೆ ಕಾರೊಳಗಿನ ಬೆಲೆಬಾಳುವ ಸಾಮಗ್ರಿಗಳು ಮಂಗಮಾಯವಾಗಿರುತ್ತೆ. ಮೈಸೂರಿನ ಘಟನೆಗಳೇ ಇದಕ್ಕೆ ಸಾಕ್ಷಿಯಾಗಿದೆ. ಇದನ್ನೂ ಓದಿ: ಮುಂದೆ ಭಾರತ್ ಜೋಡೋ, ಹಿಂದೆ ಎಲೆಕ್ಷನ್ ಸರ್ವೆ – ಮಳೆಯಲ್ಲೂ ನಿಲ್ಲದ ರಾಹುಲ್ ಜೋಶ್
Advertisement
Advertisement
ಹೌದು. ಮೈಸೂರಿನ ಒಂಟಿಕೊಪ್ಪಲಿನಲ್ಲಿ ಕಳ್ಳರ (Thieves) ಕೈಚಳಕ ಜೋರಾಗಿದ್ದು, ನಕಲಿ ಕೀಲಿ ಬಳಸಿ ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಸಾಮಗ್ರಿಗಳನ್ನ ಕದ್ದೊಯ್ದಿದ್ದಾರೆ.
Advertisement
ಖದೀಮರ ಕೈಚಳಕ ಸಿಸಿಟಿವಿಯಲ್ಲಿ (CCTV) ಸೆರೆಯಾಗಿದೆ. ಒಂಟಿಕೊಪ್ಪಲಿನ ಗೋವಿಂದಪ್ಪ ಕಾಂಪ್ಲೆಕ್ಸ್ ಬಳಿ ನಿಲ್ಲಿಸಿದ್ದ ದೀಪಕ್ ಎಂಬುವರಿಗೆ ಸೇರಿದ ಕಾರಿನಲ್ಲಿ ಕಳ್ಳತನವಾಗಿದೆ. ಕಾರಿನಲ್ಲಿದ್ದ ಎಲ್‌ಇಡಿ ಟಿವಿ (LED TV), ಸ್ಪೀಕರ್‌ಗಳನ್ನ ಕದ್ದೊಯ್ದಿದ್ದಾರೆ. ಮತ್ತೊಂದೆಡೆ ಜಯಲಕ್ಷ್ಮೀಪುರಂನಲ್ಲಿ ಬೈಕ್ ಕಳ್ಳತನ ನಡೆದಿದೆ. ಸಂಜೆ ವೇಳೆ ರಸ್ತೆ ಬದಿ ಪಾರ್ಕ್ ಮಾಡಿದ್ದ ಬೈಕ್ (Bike) ಕಳ್ಳತನವಾಗಿದ್ದು, ಈ ದೃಶ್ಯವೂ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ದೇಶದ ತುರ್ತು ಪರಿಸ್ಥಿತಿಯ ಸಂದರ್ಭ ಯಾದವ್ ಜೀ ಸೈನಿಕರಾಗಿದ್ದರು: ಮೋದಿ ಸಂತಾಪ
Advertisement
ಜಯಲಕ್ಷ್ಮೀಪುರಂ ಪೊಲೀಸ್ ಠಾಣೆ (Police Station) ಮತ್ತು ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.