ದಾವಣಗೆರೆ: ಚನ್ನಗಿರಿಯಲ್ಲಿ (Channagiri) ಚಿಂದಿ ಆಯುವ ನೆಪದಲ್ಲಿ ಬಂದು ಕಳ್ಳತನಕ್ಕೆ ಯತ್ನಿಸಿದ ಮೂವರು ಮಹಿಳೆಯರನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಸಿಕ್ಕಿಬಿದ್ದ ಕಳ್ಳಿಯರನ್ನು ಕಾವ್ಯ, ರಂಜಿತಾ ಮತ್ತು ಗಿರಿಯಮ್ಮ ಎಂದು ಗುರುತಿಸಲಾಗಿದೆ. ಈ ಮೂವರು ಸೇರಿ ವೆಂಕಟೇಶ್ವರ ಕ್ಯಾಂಪ್‍ನ ವಿಶ್ವನಾಥ್ ಎಂಬವರ ಮನೆ ಬೀಗ ಒಡೆದಿದ್ದರು. ಬಳಿಕ ಪದ್ಮಾವತಿ ಎಂಬವರ ಮನೆಯ ಬೀಗ ಒಡೆಯುವಾಗ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾರೆ. ಕೂಡಲೇ ಗ್ರಾಮಸ್ಥರು ಮಹಿಳೆಯರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಇದನ್ನೂ ಓದಿ:ದಾವಣಗೆರೆ | ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ – ಮೂವರು ಅಂತರರಾಜ್ಯ ಕಳ್ಳರು ಅರೆಸ್ಟ್
ಸ್ಥಳಕ್ಕೆ ಸಂತೆಬೆನ್ನೂರು (Santhebennur) ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ದಾವಣಗೆರೆ | ವೃದ್ಧ ದಂಪತಿಯ ಕೈಕಾಲು ಕಟ್ಟಿ 8 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ಗ್ಯಾಂಗ್
 


 
		
 
		 
		 
		 
		