– ಬೆಳ್ಳಿಯ ನಾಗಾಭರಣ ಮೂರ್ತಿ ಪಕ್ಕದಲ್ಲೇ ಇದ್ರೂ ಮುಟ್ಟದೇ ಹೋದರು
ಚಿಕ್ಕಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ (Doddaballapur) ತಾಲೂಕಿನ ಇತಿಹಾಸ ಪ್ರಸಿದ್ಧವಾದ, ಬಾಗಿಲು ಇಲ್ಲದ ದೇವಾಲಯವೆಂದೇ (Temple) ಪ್ರಸಿದ್ಧಿ ಪಡೆದಿರುವ ತೋಪನಯ್ಯ ಸ್ವಾಮಿ ದೇವಾಲಯದಲ್ಲಿ (Topanaiah Swamy Temple) ಭಾನುವಾರ ರಾತ್ರಿ ಕಳ್ಳತನ (Theft) ನಡೆದಿದೆ.
ಭಕ್ತರಹಳ್ಳಿ ಸಮೀಪದ ತೋಪನಯ್ಯ ಸ್ವಾಮಿ ದೇವಾಲಯ ಬಾಗಿಲು ಇಲ್ಲದ ದೇವಾಲಯವಾಗಿದ್ದು, ಪುರಾತನ ದೇವಾಲಯವಾಗಿದೆ. ಭಾನುವಾರ ರಾತ್ರಿ ಈ ದೇವಾಲಯಕ್ಕೆ ನುಗ್ಗಿರುವ ಕಳ್ಳರು, ಸುಮಾರು 30 ಸಾವಿರ ರೂ. ಹುಂಡಿಯಲ್ಲಿದ್ದ ಕಾಣಿಕೆ ಹಣವನ್ನು ದೋಚಿದ್ದಾರೆ. ಅಲ್ಲದೇ ದೇವಾಲಯಕ್ಕೆ ಅಳವಡಿಸಿದ್ದ 100ಕ್ಕೂ ಹೆಚ್ಚು ಘಂಟೆಗಳನ್ನು ಕದ್ದೊಯ್ದಿದ್ದಾರೆ. ಇದನ್ನೂ ಓದಿ: ಗಣಿ ಅಧಿಕಾರಿ ಪ್ರತಿಮಾ ಕೊಲೆ ಕೇಸ್‌ನಲ್ಲಿ ಸುಳಿವು ಸಿಕ್ಕಿದೆ: ಪರಮೇಶ್ವರ್
ಇಷ್ಟೆಲ್ಲಾ ಕಳ್ಳತನ ಮಾಡಿದರೂ ಖದೀಮರು ಹುಂಡಿ ಪಕ್ಕದಲ್ಲಿಯೇ ಇದ್ದ ಬೆಳ್ಳಿಯ ಬೃಹತ್ ನಾಗಾಭರಣವನ್ನು ಮುಟ್ಟದೆ ಇರುವುದು ಭಕ್ತರ ಆಶ್ಚರ್ಯಕ್ಕೆ ಕಾರಣವಾಗಿದೆ. ಸ್ಥಳಕ್ಕೆ ದೊಡ್ಡಬೆಳವಂಗಲ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಜೂಜು ಅಡ್ಡೆ ಮೇಲೆ ಪೊಲೀಸ್ ರೈಡ್ – 70 ಜನ ಅರೆಸ್ಟ್