ಮುಂಬೈ: ನಗರದ ವೀರ ದೇಸಾಯಿ ರಸ್ತೆಯಲ್ಲಿರುವ ಅನುಪಮ್ ಖೇರ್ (Anupam Kher) ಅವರ ಕಚೇರಿಗೆ ಇಬ್ಬರು ಕಳ್ಳರು ನುಗ್ಗಿದ್ದಾರೆ.
ಬೀಗ ಮುರಿದಿರುವ ಕಚೇರಿಯ ಮುಖ್ಯ ದ್ವಾರದ ವೀಡಿಯೋವನ್ನು ನಟ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಬುಧವಾರ ರಾತ್ರಿ ವೀರ ದೇಸಾಯಿ ರಸ್ತೆಯಲ್ಲಿರುವ ನನ್ನ ಕಚೇರಿಗೆ ಇಬ್ಬರು ಕಳ್ಳರು ನುಗ್ಗಿದ್ದಾರೆ. ಅಲ್ಲದೇ ಕೆಲವೊಂದು ದಾಖಲೆಗಳನ್ನು ಕದ್ದಿದ್ದಾರೆ ಎಂದಿದ್ದಾರೆ.
View this post on Instagram
ಇಬ್ಬರು ಕಳ್ಳರು ಆಟೋದಲ್ಲಿ ಕುಳಿತಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವೀಡಿಯೋವನ್ನು ಪೊಲೀಸರಿಗೆ ನೀಡಲಾಗಿದೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಎಫ್‌ಐಆರ್ ದಾಖಲಾಗಿದೆ. ಇದನ್ನೂ ಓದಿ: ಸಮುದ್ರದ ಮಧ್ಯೆ ಚೀನಾ-ಫಿಲಿಪ್ಪೈನ್ಸ್ ಸೇನೆಗಳ ನಡುವೆ ಜಟಾಪಟಿ
ಅನುಪಮ್ ಖೇರ್ ಹಲವಾರು ಯೋಜನೆಗಳನ್ನು ಹೊಂದಿದ್ದಾರೆ. ಮುಂದಿನ ಅನುರಾಗ್ ಬಸು ಅವರ ಮುಂಬರುವ ಸಂಕಲನ ಚಿತ್ರ ‘ಮೆಟ್ರೋ…ಇನ್ ಡಿನೋ’ದಲ್ಲಿ ಆದಿತ್ಯ ರಾಯ್ ಕಪೂರ್, ಸಾರಾ ಅಲಿ ಖಾನ್, ಕೊಂಕಣ ಸೇನ್ ಶರ್ಮಾ, ಪಂಕಜ್ ತ್ರಿಪಾಠಿ, ಫಾತಿಮಾ ಸನಾ ಶೇಖ್, ಅಲಿ ಫಜಲ್ ಮತ್ತು ನೀನಾ ಗುಪ್ತಾ ಸೇರಿದಂತೆ ಪ್ರತಿಭಾವಂತ ಪಾತ್ರವರ್ಗದೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಅವರು ಕೊನೆಯದಾಗಿ ‘IB71’, ‘ದಿ ವ್ಯಾಕ್ಸಿನ್ ವಾರ್’, ‘ಕುಚ್ ಖಟ್ಟಾ ಹೋ ಜಯ್’ ಮತ್ತು ‘ಕಾಗಜ್ 2’ ನಲ್ಲಿ ಕಾಣಿಸಿಕೊಂಡಿದ್ದರು.