ಪ್ರೀ ವೆಡ್ಡಿಂಗ್ ಶೂಟ್‌ಗೆ ತೆರಳಿದ್ದವರ ಕಾರಿನ ಗಾಜು ಒಡೆದು 4 ಲಕ್ಷದ ಕ್ಯಾಮೆರಾ, ಲೆನ್ಸ್ ದೋಚಿದ ಕಳ್ಳರು

Public TV
1 Min Read
Ballari Camera Theft

ಬಳ್ಳಾರಿ: ಪ್ರೀ ವೆಡ್ಡಿಂಗ್(Pre-Wedding) ಫೋಟೋಶೂಟ್ ಮಾಡಲು ಹೋಗಿದ್ದಾಗ ಕಾರಿನ ಗಾಜು ಒಡೆದು 4 ಲಕ್ಷ ರೂ. ಮೌಲ್ಯದ ಕ್ಯಾಮೆರಾ(Camera) ಹಾಗೂ ಲೆನ್ಸ್(Lense) ಕಳ್ಳತನ ಮಾಡಿರುವ ಘಟನೆ ವಿಜಯನಗರ(Vijayanagara) ಜಿಲ್ಲೆಯ ಹೊಸಪೇಟೆಯ ತುಂಗಭದ್ರಾ ಜಲಾಶಯದ ಹಿನ್ನೀರಿನ ಗುಂಡಾ ಫಾರೆಸ್ಟ್ ಬಳಿ ನಡೆದಿದೆ.

ರಾಯಚೂರಿನ ಮಾನ್ವಿ ಮೂಲದ ಫೋಟೋಗ್ರಾಫರ್ ಹುಮಾಯುನ್ ಅವರಿಗೆ ಸೇರಿದ್ದ ಕಾರಿನಲ್ಲಿ ಕಳ್ಳತನವಾಗಿದೆ. ಕಾರಿನಲ್ಲಿ ಕ್ಯಾಮೆರಾ ಹಾಗೂ ಲೆನ್ಸ್ ಇಟ್ಟಿದ್ದ ಹುಮಾಯುನ್ ಬ್ಯಾಕ್ ವಾಟರ್ ಫೋಟೋಶೂಟ್‌ಗೆ ತೆರಳಿದ್ದರು. ಇದನ್ನೂ ಓದಿ: ದಿಢೀರ್‌ ರಬಕವಿ-ಬನಹಟ್ಟಿಯಲ್ಲಿ ಜಿಲ್ಲಾ ಪಂಚಾಯತ್‌ ಕಾಮಗಾರಿ ವೀಕ್ಷಿಸಿದ ಸಿಇಒ ಶಶಿಧರ ಕುರೇರ

ಕಳ್ಳರು ಕಾರಿನ ಸುತ್ತಲೂ ಯಾರೂ ಇಲ್ಲದ್ದನ್ನ ಗಮನಿಸಿ ಗಾಜು ಒಡೆದು ಕೆನಾನ್ ಖ೫ ಕ್ಯಾಮೆರಾ ಹಾಗೂ 4 ಲಕ್ಷ ರೂ. ಲೆನ್ಸ್ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ : ಕೆಎನ್ ರಾಜಣ್ಣ ಬಾಯಿ ಚಪಲಕ್ಕೆ ಮಾತನಾಡಬಾರದು: ಹೆಚ್.ಸಿ ಬಾಲಕೃಷ್ಣ

Share This Article