– ಠಾಣೆಯಲ್ಲೇ ವಿಷಪೂರಿತ ಚಾಕೊಲೆಟ್ ತಿಂದು ಆತ್ಮಹತ್ಯೆಗೆ ಯತ್ನ
ಬೆಂಗಳೂರು: ಒಂಟಿ ಪ್ರಯಾಣಿಕರನ್ನೇ (Passengers) ಟಾರ್ಗೆಟ್ ಮಾಡಿ, ಜ್ಯೂಸ್ ಕುಡಿಸಿ ಮೊಬೈಲ್, ಪರ್ಸ್, ಚಿನ್ನಾಭರಣ ದೋಚುತ್ತಿದ್ದ ಖತರ್ನಾಕ್ ಕಳ್ಳಿಯೊಬ್ಬಳನ್ನು ಬ್ಯಾಟರಾಯನಪುರ ಪೊಲೀಸರು (Byatarayanapura Police) ಬಂಧಿಸಿದ್ದಾರೆ.
ಆಂಧ್ರಪ್ರದೇಶ ಮೂಲದ ಲತಾ ಬಂಧಿತ ಮಹಿಳೆ. ಬಿಎಂಟಿಸಿ ಬಸ್‌ನಲ್ಲಿ (BMTC Bus) ಒಂಟಿ ಪ್ರಯಾಣಿಕರನ್ನೇ ಟಾರ್ಗೆಟ್ ಮಾಡುತ್ತಿದ್ದ ಈ ಕಳ್ಳಿ, ಪರಿಚಯ ಮಾಡಿಕೊಂಡು ಜ್ಯೂಸ್ ಕುಡಿಯಲು ಕರೆದುಕೊಂಡು ಹೋಗ್ತಿದ್ದಳು. ಜ್ಯೂಸ್ ಕುಡಿದು ಪ್ರಜ್ಞೆ ಕಳೆದುಕೊಂಡ ತಕ್ಷಣ ಮೊಬೈಲ್, ಪರ್ಸ್, ಚಿನ್ನಾಭರಣ ದೋಚಿ ಎಸ್ಕೇಪ್ ಆಗುತ್ತಿದ್ದಳು. ಇದನ್ನೂ ಓದಿ: ಗಂಡು ಮಗುವಿಗೆ ಜನ್ಮ ನೀಡಿದ ರೇಣುಕಾಸ್ವಾಮಿ ಪತ್ನಿ ಸಹನಾ – ಕುಟುಂಬದಲ್ಲಿ ಹರ್ಷ
ಈ ಬಗ್ಗೆ ಮಾಹಿತಿ ಪಡೆದ ಬ್ಯಾಟರಾಯನಪುರ ಪೊಲೀಸರು ಆಕೆಯನ್ನ ಬಂಧಿಸಿ ಠಾಣೆಗೆ ಕರೆತಂದಿದ್ದಾರೆ. ಠಾಣೆಗೆ ಕರೆತಂದ ಕೆಲವೇ ನಿಮಿಷಗಳಲ್ಲಿ ಹಿಳೆ ವಿಷಪೂರಿತ ಚಾಕೊಲೆಟ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಮಹಿಳೆ ಕುಸಿದುಬಿದ್ದ ನಂತರ ಪೊಲೀಸರು ಆಕೆಯನ್ನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದನ್ನೂ ಓದಿ: ಭಾರೀ ಮಳೆಗೆ ಟ್ರ್ಯಾಕ್‌ಗೆ ಬಿದ್ದ ಮರ: ನೇರಳೆ ಮಾರ್ಗದ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ
ಈ ಸಂಬಂಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಇನ್ನೆರಡು ದಿನ ಕಾಡಲಿದ್ದಾನೆ ವರುಣ; ಶಾಲೆಗಳಿಗೆ ರಜೆ ಘೋಷಣೆ