ಅಪಾರ್ಟ್‌ಮೆಂಟ್‌ನಲ್ಲಿ ನಿರಂತರ ಕಳ್ಳತನ – 18 ವರ್ಷದಿಂದ ಸೆಕ್ಯೂರಿಟಿಯಾಗಿದ್ದ ಕಳ್ಳ ಅರೆಸ್ಟ್‌

Public TV
1 Min Read
Thief who had been a security guard for 18 years arrested Hospet Ballari

ಬಳ್ಳಾರಿ: ಅಪಾರ್ಟ್‌ಮೆಂಟ್‌ನಲ್ಲಿ ಕಳೆದ ಎರಡು ವರ್ಷಗಳಿಂದ ನಿರಂತರ ಕಳ್ಳತನ ನಡೆಯುತ್ತಿದ್ದ ಪ್ರಕರಣವನ್ನು ಕೊನೆಗೂ ಪೊಲೀಸರು (Police) ಬೇಧಿಸಿ ಆರೋಪಿ ಸೆಕ್ಯೂರಿಟಿಗಾರ್ಡ್‌ನನ್ನು (Security Guard) ಬಂಧಿಸಿದ್ದಾರೆ.

ಹೊಸಪೇಟೆಯ ಸಾಯಿಸದನ ಅಪಾರ್ಟ್‌ಮೆಂಟ್‌ನಲ್ಲಿ (Apartment) ಕಳೆದ ಎರಡು ವರ್ಷಗಳಿಂದ ಹಲವು ಮನೆಗಳಲ್ಲಿ ಕಳ್ಳತನ ನಡೆಯುತ್ತಿತ್ತು. ನಿರಂತರ ಕಳ್ಳತನದಿಂದ ಹೊಸಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಕುರಿತು ತನಿಖೆ ಕೈಗೊಂಡಿದ್ದ ಪೊಲೀಸರಿಗೆ ಕಳ್ಳರ ಬಗ್ಗೆ ಸರಿಯಾದ ಮಾಹಿತಿ ಸಿಕ್ಕಿರಲಿಲ್ಲ.

 
ಹೊರಗಡೆಯಿಂದ ಈ ಕೃತ್ಯ ನಡೆಯುತ್ತಿಲ್ಲ. ಒಳಗಡೆ ಇದ್ದವರಿಂದಲೇ ಕೃತ್ಯ ನಡೆಯುತ್ತಿದೆ ಎಂಬ ಅನುಮಾನದ ಮೇರೆಗೆ 18 ವರ್ಷಗಳ ಕಾಲ ಸೆಕ್ಯೂರಿಟಿಯಾಗಿ ಕೆಲಸ ಪ್ರವೀಣ್ ವಿಚಾರಣೆ ನಡೆಸಿದ್ದರು. ಅನುಮಾನ ಬಂದು ಮತ್ತಷ್ಟು ವಿಚಾರಣೆ ನಡೆಸಿದಾಗ ಕಳ್ಳತನ ಎಸಗಿದ್ದು ನಾನೇ ಎಂದು ಒಪ್ಪಿಕೊಂಡಿದ್ದಾನೆ.

ಒಂದು ವರ್ಷದಿಂದ ಅಪಾರ್ಟ್‌ಮೆಂಟ್‌ನ ಎರಡು ಮನೆಗಳಲ್ಲಿ ಕಳ್ಳತನ ನಡೆದಿತ್ತು. ಆರೋಪಿ ಪ್ರವೀಣ್ ನನ್ನು ಬಂಧಿಸಿದ ಪೊಲೀಸರು 5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದಾರೆ.

 

Share This Article