ಹುಬ್ಬಳ್ಳಿ: ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ವ್ಯಕ್ತಿ ತನ್ನ ಮನೆತನದ ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಘಟಗಿ ಪಟ್ಟಣದ ಮಂಗೇಶ ಕೆರೆ ದಂಡೆಯ ಬಳಿ ನಡೆದಿದೆ.
ಹನುಮಂತ ಈಶ್ವರಪ್ಪ ಧಾರವಾಡ ಮೃತನಾಗಿದ್ದಾನೆ. ಈತ ಕಲಘಟಗಿ ಪಟ್ಟಣದ ನಿವಾಸಿಯಾಗಿದ್ದಾನೆ. ಹನುಮಂತ ಹಾಗೂ ಆತನ ಗೆಳೆಯ ಮಲ್ಲಯ್ಯ ಹೆಬ್ಬಳ್ಳಿಮಠ ಜೊತೆಗೆ ಸೇರಿ ಅಂದಾಜು 2500 ಖಾಲಿ ಗೋಣಿ ಚೀಲಗಳನ್ನು ಆಗಸ್ಟ್ 28 ರಂದು ಕಳ್ಳತನ ಮಾಡಿ ಹುಬ್ಬಳ್ಳಿ ಎಪಿಎಂಸಿಯಲ್ಲಿ ಮಾರಿದ್ದರು. ಇದನ್ನೂ ಓದಿ: ಬೀದಿ ನಾಯಿಗಳ ಬಾಯಿಗೆ ಆ್ಯಸಿಡ್ ಹಾಕಿ ಕೊಲೆಗೈದರು
Advertisement
Advertisement
ಈ ಕುರಿತು ಪ್ರಕರಣ ದಾಖಲಾದ ಕೆಲ ದಿನಗಳಲ್ಲೇ ಪೊಲೀಸರು ಮಲ್ಲಯ್ಯನನ್ನು ಬಂಧಿಸಿ, ಹನುಮಂತನ ಬಂಧನಕ್ಕೆ ಜಾಲ ಬೀಸಿದ್ದರು. ಈ ವಿಚಾರವಾಗಿ ಆತನ ಮನೆಗೆ ತೆರಳಿ ಪರಿಶೀಲನೆ ಸಹ ನಡೆಸಿದ್ದರು. ಈ ವಿಚಾರ ಅರಿತ ಹನುಮಂತ ಬಂಧನವಾದರೆ ತನ್ನ ಹಾಗೂ ಪಾಲಕರ ಮರ್ಯಾದೆ ಹೋಗುತ್ತದೆ ಎಂದು ಹೆದರಿ ಕೆರೆ ದಂಡೆ ಮೇಲಿನ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಷರತ್ತುಬದ್ಧ ನಿಯಮಗಳೊಂದಿಗೆ ಗಣೇಶೋತ್ಸವಕ್ಕೆ ಅನುಮತಿ
Advertisement
Advertisement
ಈ ಕುರಿತು ಹನುಮಂತನ ತಂದೆ ಈಶ್ವರಪ್ಪ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.