ಮುಂಬೈ: ಎಲ್ಲ ಕಳ್ಳರು ದುಡ್ಡು ಸಿಕ್ಕರೆ ಸಾಕು ಮೊದಲು ಅಲ್ಲಿಂದ ಹೊರಟು ಹೋಗಬೇಕು ಎನ್ನುವಾಗ ಇಲ್ಲೊಬ್ಬ ಕಳ್ಳ ದೇವರ ಪಾದಕ್ಕೆ ನಮಸ್ಕರಿಸಿದ ವಿಲಕ್ಷಣ ಘಟನೆಯೊಂದು ಮಹಾರಾಷ್ಟ್ರದ ಥಾಣೆ ನಗರದ ದೇವಸ್ಥಾನದಲ್ಲಿ ನಡೆದಿದೆ.
ಮಹಾರಾಷ್ಟ್ರದ ಥಾಣೆ ನಗರದ ಖೋಪಾಟ್ ಪ್ರದೇಶದ ಹನುಮಂತ ದೇವಸ್ಥಾನಕ್ಕೆ ನುಗ್ಗಿದ ಕಳ್ಳನೊಬ್ಬ ಹುಂಡಿಯನ್ನು ಕದಿಯಲು ಬಂದಿದ್ದಾನೆ. ಆದರೆ ಇಲ್ಲಿರುವ ವಿಶೇಷವೆಂದರೆ ಆತ ಹಣ ಕದಿಯುವ ಮುನ್ನ ಹನುಮಾನ್ ದೇವರ ಕಾಲಿಗೆ ಬಿದ್ದು, ಪ್ರಾರ್ಥನೆ ಮಾಡಿದ್ದಾನೆ. ನಂತರ ವಿಗ್ರಹದ ಮುಂದೆ ಇದ್ದ ಹುಂಡಿಯನ್ನು ಕದ್ದು ಪರಾರಿಯಾಗಿದ್ದಾನೆ. ಪ್ರಸ್ತುತ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ: ತಮಿಳು ಚಿತ್ರತಂಡದ ನಂತರ ಮತ್ತೆ ಸಕ್ಕರೆ ನಾಡಿನಲ್ಲಿ ತೆಲುಗು ಸಿನಿಮಾದವರಿಂದ ಅವಾಂತರ
ದೇವಸ್ಥಾನಕ್ಕೆ ಬೆಳಗ್ಗೆ ಬಂದು ನೋಡಿದ ನಂತರ ಕಳ್ಳತನವಾಗಿರುವುದು ತಿಳಿದುಬಂದಿದೆ. ನಂತರ ಪೊಲೀಸರಿಗೆ ಈ ಮಾಹಿತಿ ತಿಳಿಸಿದ್ದು, ಅವರು ಸಿಸಿಟಿವಿಯನ್ನು ಪರಿಶೀಲಿಸಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ.
ಪ್ರಸ್ತುತ ನೌಪದ ಪೊಲೀಸರು ಶನಿವಾರ ಆರೋಪಿಯನ್ನು ಬಂಧಿಸಿದ್ದು, ಆತ ಕದ್ದ ಹಣವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ