ಬೀದರ್: ಗಡಿ ಜಿಲ್ಲೆ ಬೀದರ್ ನಲ್ಲಿ ಇತ್ತೀಚೆಗೆ ಸರಣಿ ಕಳ್ಳತನಗಳು ಹೆಚ್ಚಾಗಿದ್ದು, ಇಂದು ಬೆಳಗಿನ ಜಾವ ಗಾಢ ನಿದ್ರೆಯಲ್ಲಿದ್ದಾಗ ವೈದ್ಯರೊಬ್ಬರ ನಿವಾಸಕ್ಕೆ ನುಗ್ಗಿದ ಕಳ್ಳ ತನ್ನ ಕೈಚಳಕ ತೋರಿಸಿದ್ದಾನೆ.
ಬೀದರ್‍ನ ಬಸವ ನಗರದಲ್ಲಿರುವ ಡಾ. ರವೀಂದ್ರ ಪಾಟೀಲ್ ಅವರ ಮನೆಯಲ್ಲಿ ಇಂದು ಬೆಳಗಿನ ಜಾವ ಕಳ್ಳ ತನ್ನ ಕೈಚಳಕ ತೋರಿಸಿದ್ದಾನೆ. ಒಟ್ಟು 20 ಲಕ್ಷ ರೂ. ಬೆಲೆ ಬಾಳುವ 50 ತೋಲೆ ಬಂಗಾರ ಕದ್ದು ಖದೀಮ ಪರಾರಿಯಾಗಿದ್ದಾನೆ. ಮನೆಯವರು ಬೆಳಗ್ಗೆ ಎದ್ದ ತಕ್ಷಣ ವಿಷಯ ಗೊತ್ತಾಗಿ ಸ್ಥಳೀಯ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ತಿವ್ರ ಪರಿಶೀಲನೆ ಮಾಡುತ್ತಿದ್ದಾರೆ.
ಕಳ್ಳ ದರೋಡೆ ಮಾಡಲು ಮನೆ ಒಳಗೆ ಹೋಗುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಗಾಂಧಿಗಂಜ್ ಪೊಲೀಸರು ಕಳ್ಳನಿಗಾಗಿ ಬಲೆ ಬಿಸಿದ್ದಾರೆ.