ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ (Bengaluru) ರಸ್ತೆ ಬದಿಯ ಗಿಡಗಳಿಗೆ ಹಾಕಿದ್ದ ಟ್ರೀ ಗಾರ್ಡ್ (Tree Guard) ಕದಿಯುವ ಕಳ್ಳರಿದ್ದಾರೆ.
ಹೌದು. ಹಸಿರಿನ ಪ್ರಕೃತಿಗಾಗಿ ಗಿಡ ನೆಟ್ಟು, ಪ್ರಾಣಿಗಳಿಂದ ಗಿಡಗಳ ರಕ್ಷಣೆಗಾಗಿ ಹಾಕುವ ಟ್ರೀ ಗಾರ್ಡ್ ಅನ್ನು ಕಳ್ಳನೊಬ್ಬ (Thief) ಕದ್ದು ಪರಾರಿಯಾಗಿದ್ದಾನೆ. ಇದನ್ನೂ ಓದಿ: ರಾಹುಲ್ ವಿರುದ್ಧ ಹೇಳಿಕೆ – ಭರತ್ ಶೆಟ್ಟಿ ವಿರುದ್ಧ ಎಫ್‌ಐಆರ್, ವಿಚಾರಣೆಗೆ ಬರುವಂತೆ ನೋಟಿಸ್
ಬನಶಂಕರಿಯ ರಸ್ತೆ ಬಳಿ ದನಗಳಿಂದ ಗಿಡಕ್ಕೆ ಸಮಸ್ಯೆಯಾಗಬಾರದು ಎಂದು ಟ್ರೀ ಗಾರ್ಡ್ ಹಾಕಲಾಗಿತ್ತು. ಆದರೆ ತಡರಾತ್ರಿ ಕಳ್ಳನೊಬ್ಬ ಟ್ರೀ ಗಾರ್ಡ್ ಅನ್ನು ಕದ್ದು ಪರಾರಿಯಾಗಿದ್ದಾನೆ.
ಗಿಡದ ಹತ್ತಿರ ಬಂದ ಕಳ್ಳ ಯಾರೂ ಇಲ್ಲದ್ದನ್ನು ನೋಡಿ ಟ್ರೀ ಗಾರ್ಡ್ ಅನ್ನೇ ಕದ್ದಿದ್ದಾನೆ. ಕಳ್ಳ ಕದಿಯುತ್ತಿರುವ ದೃಶ್ಯ ಸಮೀಪದ ಸಿಸಿಟಿವಿಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.