ಚಿಕ್ಕಬಳ್ಳಾಪುರ: ಬೆಂಗಳೂರಿನಲ್ಲಿ ಬುಲೆಟ್ ಬೈಕ್‍ಗಳನ್ನು ಕದ್ದು ಆಂಧ್ರಪ್ರದೇಶಲ್ಲಿ ಮಾರಾಟ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗೊಂದನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪೊಲೀಸರು ಬಂಧಿಸಿ ಒಂದು ಕೋಟಿ ರೂ. ಮೌಲ್ಯದ ಬುಲೆಟ್ ಬೈಕ್‍ಗಳನ್ನು ಸೀಜ್ ಮಾಡಿಕೊಂಡು ಬಂದಿದ್ದಾರೆ.
Advertisement
ಹೌದು ಮೊನ್ನೆ ಮೊನ್ನೆ ತಾನೇ ಇಬ್ಬರು ಇಂಜಿನಿಯರಿಂಗ್ ಸ್ಟೂಡೆಂಟ್ಸ್‌ಗಳನ್ನು ಅರೆಸ್ಟ್ ಮಾಡಿ ಅವರಿಂದ 12 ಬುಲೆಟ್ ಬೈಕ್‍ಗಳನ್ನು ಸೀಜ್ ಮಾಡಿಕೊಂಡಿದ್ದ ಬಾಗೇಪಲ್ಲಿ ಪೊಲೀಸರು ಈಗ 06 ಮಂದಿ ಬೈಕ್ ಮೆಕ್ಯಾನಿಕ್‍ಗಳನ್ನು ಅರೆಸ್ಟ್ ಮಾಡಿ ಅವರಿಂದಲೂ 18 ರಾಯಲ್ ಎನ್‍ಫೀಲ್ಡ್ ಬುಲೆಟ್ ಬೈಕ್‍ಗಳು ಸೇರಿದಂತೆ 5 ಡಿಯೋ, 3 ಬಜಾಜ್ ಪಲ್ಸಾರ್, 1 ಕೆಟಿಎಂ ಡ್ಯೂಕ್, 1 ಯಮಹಾ ಆರ್ ಒನ್ ಫೈವ್, 1 ಅಕ್ಸೆಸ್, ಹಾಗೂ 1 ಪ್ಯಾಷನ್ ಪ್ರೋ ಬೈಕ್ ಸೇರಿ ಒಟ್ಟು 30 ಬೈಕ್‍ಗಳನ್ನು ಸೀಜ್ ಮಾಡಿದ್ದಾರೆ. ಇದರಲ್ಲಿ ಬಹುತೇಕ ಬೈಕ್‍ಗಳು ಬೆಂಗಳೂರು ನಗರದಲ್ಲೇ ಕದ್ದ ಬೈಕ್‍ಗಳಾಗಿದ್ದು ಕದ್ದ ಬೈಕ್‍ಗಳನ್ನು ಕಳ್ಳರು ಆಂಧ್ರದಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಿ ಮಜಾ ಮಾಡ್ತಿದ್ರು ಅಂತ ತಿಳಿದುಬಂದಿದೆ. ಎರಡು ಪ್ರಕರಣಗಳಲ್ಲಿ ಸರಿಸುಮಾರು 1 ಕೋಟಿ ರೂ. ಮೌಲ್ಯದ 46ಕ್ಕೂ ಹೆಚ್ಚು ಬೈಕ್‍ಗಳನ್ನು ಬಾಗೇಪಲ್ಲಿ ಪೊಲೀಸರು ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಮದುವೆಯಾಗೋ ನೆಪದಲ್ಲಿ ಕಾರ್ಯಕರ್ತೆ ಮೇಲೆ ತೆಲಂಗಾಣದ ಕಾಂಗ್ರೆಸ್ ಮುಖಂಡನಿಂದ ಅತ್ಯಾಚಾರ
Advertisement
Advertisement
ಬಂಧಿತ ಕಳ್ಳರು ಯಾರು?
ಅಂದಹಾಗೆ ಆಂಧ್ರಪ್ರದೇಶದ ಮೂಲದ ಕಾಳಸಮುದ್ರಂ ಗ್ರಾಮದ ಷೇಕ್‍ಮೌಲಾ, ಇಮ್ರಾನ್ ಪಠಾಣ್, ಖಾದರ್ ಭಾಷಾ, ಷಾಹಿದ್, ಹಾಗೂ ಮಹಮದ್ ಆಲಿ, ವೆಂಗಮುನಿ ಬಂಧಿತರಾಗಿದ್ದು, ಬಂಧಿತರು ಬೈಕ್ ಮೆಕ್ಯಾನಿಕ್‍ಗಳಾಗಿದ್ದಾರೆ. ಬುಲೆಟ್ ಬೈಕ್‍ಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡ್ತಿದ್ರು. ಅದ್ರಲ್ಲೂ ಬೆಂಗಳೂರಲ್ಲಿ ಕದ್ದು ಆಂಧ್ರದಲ್ಲಿ ಮಾರಾಟ ಮಾಡಿದ್ರೆ ಯಾವ ಪೊಲೀಸರು ಹಿಡಿಯಲ್ಲ ಅಂತ ಅಂದುಕೊಂಡು ಕದ್ದ ಬೈಕ್‍ಗಳನ್ನೆಲ್ಲಾ ಆಂಧ್ರಪ್ರದೇಶದಲ್ಲಿ ಮಾರಾಟ ಮಾಡುತ್ತಿದ್ದರು. ಇದೀಗ ಈ ಬೈಕ್ ಕಳ್ಳರು ಪೊಲೀಸರ ಅತಿಥಿಯಾಗಿದ್ದಾರೆ.
Advertisement
ಇತ್ತ ತಮ್ಮ ಬೈಕ್ ತಮಗೆ ಸಿಗುತ್ತೆ ಅಂತ ಅಂದುಕೊಂಡೇ ಇರಲಿಲ್ಲ. ಬೆಂಗಳೂರಲ್ಲಿ ಕಂಪ್ಲೇಂಟ್ ಕೊಟ್ರೂ ಪೊಲೀಸರು ಬೈಕ್ ಕಳ್ಳರನ್ನ ಹಿಡಿಯಲಿಲ್ಲ. ನಮ್ಮ ಅಪ್ಪ ನನಗೆ ಕೊಡಿಸಿದ್ದ ಬೈಕ್ ಕಳೆದು ಹೋಗಿ ಬೇಜಾರಾಗಿತ್ತು ಈಗ ಸಿಕ್ಕಿರೋದು ಖುಷಿ ಆಗ್ತಿದೆ. ಬಾಗೇಪಲ್ಲಿ ಪೊಲೀಸರು ಕಾರ್ಯಾಚರಣೆ ಮಾಡಿ ನಮ್ಮ ಬೈಕ್ ನಮಗೆ ಮರಳಿ ಸಿಗುವಂತೆ ಮಾಡಿದ್ದು ಸಂತಸ ತರಿಸಿದೆ ಎಂದು ಬೈಕ್ ಮಾಲೀಕರಾದ ಸಾಯಿಕುಮಾರ್ ಹಾಗೂ ಶಿವಕುಮಾರ್ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮದುವೆ ನಂತ್ರ ದಪ್ಪ ಆಗಿದ್ದಕ್ಕೆ ಪತ್ನಿಗೆ ವಿಚ್ಛೇದನ ನೀಡಲು ಮುಂದಾದ ಪತಿ
ರಾಯಲ್ ಎನ್‍ಫೀಲ್ಡ್ ಬೈಕ್ ಬಹುತೇಕರ ಪಾಲಿಗೆ ಡ್ರೀಮ್ ಬೈಕ್. ಇಂತಹ ಕನಸಿನ ಬೈಕ್ ಕಳ್ಳರ ಪಾಲಾಗಿ ಇನ್ನೂ ನಮಗೂ ಬುಲೆಟ್ ಬೈಕ್ ಕನಸೇ ಅಂದುಕೊಂಡವರ ಪಾಲಿಗೆ ಬಾಗೇಪಲ್ಲಿ ಪೊಲೀಸರು ಕಳುವಾಗಿದ್ದ ಬೈಕ್‍ಗಳನ್ನು ಮರಳಿ ಕೊಡುವ ಮೂಲಕ ಕನಸು ಮರಳಿ ನನಸಾಗುವಂತೆ ಮಾಡಿರುವುದು ಬಹುತೇಕರಿಗೆ ಸಂತಸ ತರಿಸಿದೆ.