ವಿಜಯಪುರ: ವ್ಯಾಪಾರಿಯ ಗಮನವನ್ನು ಬೇರೆ ಕಡೆ ಸೆಳೆದ ಕಳ್ಳರು 15 ಲಕ್ಷ ರೂ. ದೋಚಿ ಪರಾರಿಯಾದ ಘಟನೆ ವಿಜಯಪುರ ನಗರದ ಕೆನರಾ ಬ್ಯಾಂಕ್ ಬಳಿ ನಡೆದಿದೆ.
ನಗರದ ನಿವಾಸಿ ಕುಣಾಲ ಪೋರವಾಲ ಹಣ ಕಳೆದುಕೊಂಡ ವ್ಯಾಪಾರಿ. ಕುಣಾಲ ಅವರು ಆಗ ತಾನೇ ಕೆನರಾ ಬ್ಯಾಂಕ್ನಿಂದ ಹಣ ಡ್ರಾ ಮಾಡಿ ಹೊರ ಬಂದಿದ್ದರು. ಇದನ್ನು ನೋಡಿ ಕುಣಾಲ ಅವರ ಬಳಿಗೆ ಬಂದ ಕಳ್ಳರು, ಸ್ಕೂಟರ್ ಕೆಳಗೆ ಹಣ ಬಿದ್ದಿದೆ ಎಂದು ಹೇಳಿದ್ದಾರೆ. ಕುಣಾಲ ಪೋರವಾಲ ಅವರು ಕೆಳಗೆ ನೋಡುತ್ತಿದ್ದಂತೆಯೇ ಕಳ್ಳರು ಹಣದ ಬ್ಯಾಗ್ ಎಗರಿಸಿ ಕ್ಷಣಾರ್ಧದಲ್ಲಿ ಪರಾರಿಯಾಗಿದ್ದಾರೆ.
Advertisement
Advertisement
ಕುಣಾಲ ಪೋರವಾಲ ಅವರು ಬೇಳೆಕಾಳು ವ್ಯಾಪಾರಿಯಾಗಿದ್ದು, ತಮ್ಮ ವ್ಯವಹಾರಕ್ಕಾಗಿ 15 ಲಕ್ಷ ರೂ. ವನ್ನು ಬ್ಯಾಂಕ್ನಿಂದ ಪಡೆದಿದ್ದರು. ಆದರೆ ಇದೀಗ ಆ ಹಣವನ್ನು ಕಳ್ಳರು ದೋಚಿ ಪರಾರಿಯಾಗಿದ್ದಾರೆ.
Advertisement
ವಿಜಯಪುರ ನಗರದ ಗಾಂಧಿಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.