Connect with us

Dharwad

ಚಲಿಸುತ್ತಿದ್ದ ರೈಲಿನಿಂದ ಟಿಸಿಯನ್ನು ಹೊರದೂಡಿದ ಕಳ್ಳ

Published

on

ಹುಬ್ಬಳ್ಳಿ: ಕಳ್ಳನೊಬ್ಬ ಚಲಿಸುತ್ತಿದ್ದ ರೈಲಿನಿಂದ ಟಿಕೆಟ್ ಚೆಕ್ಕರ್‍ನನ್ನು ಹೊರ ತಳ್ಳಿ ಸಿನಿಮೀಯ ರೀತಿಯಲ್ಲಿ ಪರಾರಿಯಾಗಿದ್ದಾನೆ.

ರೈಲ್ವೆ ಟಿಕೆಟ್ ಪರಿಶೀಲಕ ಚಿನ್ನಪ್ಪ ಎಂಬವರೇ ರೈಲಿನಿಂದ ಹೊರಬಿದ್ದ ರೈಲ್ವೆ ಅಧಿಕಾರಿ. ಭಾನುವಾರ ಬೆಳಗಿನ ಜಾವ ನಿಜಾಮುದ್ದಿನ-ವಾಸ್ಕೋಡಿಗಾಮಾ ಎಕ್ಸಪ್ರೆಸ್ ರೈಲಿನಲ್ಲಿ ಕಳ್ಳನೊಬ್ಬ ಸುಮಾರು 18 ಸಾವಿರ ರೂ. ವೌಲ್ಯದ ಮೊಬೈಲ್ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದ. ಈ ವೇಳೆ ರೈಲಿನಲ್ಲಿದ್ದ ಟಿಸಿ ಚಿನ್ನಪ್ಪ ಆತನನ್ನು ವಶಕ್ಕೆ ಪಡೆದುಕೊಂಡಿದ್ದರು. ನಂತರ ಶೌಚಾಲಯಕ್ಕೆ ಹೋಗುವುದಾಗಿ ತೆರಳಿ 10 ನಿಮಿಷವಾದರೂ ಬಂದಿರಲಿಲ್ಲ.

ಅನುಮಾನಗೊಂಡ ಚಿನ್ನಪ್ಪ ಅವರು ಶೌಚಾಲಯಾದ ಬಳಿ ತೆರಳಿದ್ದಾರೆ. ತನ್ನನ್ನು ಹುಡುಕಲು ಬಂದ ಟಿಸಿಯನ್ನು ಕಳ್ಳ ಚಲಿಸುತ್ತಿದ್ದ ರೈಲಿನಿಂದ ತಳ್ಳಿದ್ದಾನೆ. ಈ ವೇಳೆ ರೈಲು ರಾಯಭಾಗ-ಘಟಪ್ರಭಾ ಮಾರ್ಗದಲ್ಲಿ 65-75 ಕಿಮೀ ವೇಗದಲ್ಲಿ ಚಲಿಸುತ್ತಿತ್ತು. ರೈಲಿನಿಂದ ಹೊರಬಿದ್ದ ಟಿಸಿಯನ್ನು ಸ್ಥಳೀಯರು ರಕ್ಷಣೆ ಮಾಡಿ, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಚಿನ್ನಪ್ಪ ಪ್ರಾಣಾಪಾಯದಿಂದ ಪಾರಾಗಿದ್ದು, ಹುಬ್ಬಳ್ಳಿ ರೈಲ್ವೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಳ್ಳನ ಬಗ್ಗೆ ಯವುದೇ ಮಾಹಿತಿಗಳು ಲಭ್ಯವಾಗಿಲ್ಲ. ಈ ಸಂಬಂಧ ಘಟಪ್ರಭ ರೆಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Click to comment

Leave a Reply

Your email address will not be published. Required fields are marked *

www.publictv.in