LatestMain PostNational

ಅಂಗಡಿ ದೋಚಿದ ಖುಷಿಯಲ್ಲಿ ಡ್ಯಾನ್ಸ್ ಮಾಡಿದ ಕಳ್ಳ – ವೀಡಿಯೋ ವೈರಲ್

ಲಕ್ನೋ: ಹಾರ್ಡ್‍ವೇರ್ ಅಂಗಡಿಯನ್ನು ದರೋಡೆ ಮಾಡಿದ ನಂತರ ಕಳ್ಳರು ಡ್ಯಾನ್ಸ್ ಮಾಡಿರುವ ವೀಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವೈರಲ್ ಆಗುತ್ತಿದೆ.

ಉತ್ತರ ಪ್ರದೇಶದ ಚಾ ಅಂಡೌಲಿ ಎಂಬಲ್ಲಿ ಪೊಲೀಸ್ ವರಿಷ್ಠಾಧಿಕಾರಿಯೊಬ್ಬರ ನಿವಾಸದ ಬಳಿ ಶನಿವಾರ ಈ ಘಟನೆ ನಡೆದಿದೆ. ಉತ್ತರ ಪ್ರದೇಶದ ಚಂದೌಲಿಯಲ್ಲಿ ಹಾರ್ಡ್‍ವೇರ್ ಅಂಗಡಿಯಲ್ಲಿ ಕಳ್ಳತನ ಮಾಡಿದ ನಂತರ ಕಳ್ಳ ಅಂಗಡಿಯೊಳಗೆ ಡ್ಯಾನ್ಸ್ ಮಾಡಲು ಪ್ರಾರಂಭಿಸಿದನು. ಕಳ್ಳ ಖುಷಿಯಲ್ಲಿ ತೇಲಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಬಂಡೀಪುರದಲ್ಲಿ ಅವಳಿ ಮರಿಗಳಿಗೆ ಜನ್ಮ ಕೊಟ್ಟ ಕಾಡಾನೆ

ಅಂಗಡಿಯೊಳಗೆ ಅಳವಡಿಸಲಾಗಿರುವ ಸಿಸಿಟಿವಿಯಲ್ಲಿ ಕಳೆದ ವಾರ ನಡೆದ ಸಂಪೂರ್ಣ ಘಟನೆ ಸೆರೆಯಾಗಿದೆ. ಮುಖವನ್ನು ಮುಚ್ಚಿಕೊಂಡು ಅಂಗಡಿಗೆ ಪ್ರವೇಶಿಸಿದ ಕಳ್ಳ, ತನಗೆ ಬೇಕಾದುದನ್ನು ಕದ್ದು, ಡ್ಯಾನ್ಸ್ ಮಾಡಿ ನಂತರ ಅಲ್ಲಿಂದ ನುಸುಳಿಕೊಂಡು ಹೋಗಿರುವ ದೃಶ್ಯಾವಳಿ ಸೆರೆಯಾಗಿದೆ.

ಕಳ್ಳ ಎಲ್ಲ ನಗದನ್ನು ಎತ್ತಿಕೊಂಡು ಸಾವಿರಾರು ರೂಪಾಯಿ ಮೌಲ್ಯದ ವಸ್ತುಗಳನ್ನು ಕದ್ದಿದ್ದಾನೆ ಎಂದು ಅಂಗಡಿ ಮಾಲೀಕ ಅಂಶು ಸಿಂಗ್ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿದೆ. ಷಟರ್ ಮುರಿದಿರುವುದನ್ನು ನೋಡಿದ ಸಿಂಗ್ ಅಂಗಡಿ ತೆರೆದು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಸಾಮಾನ್ಯವಾಗಿ ಸುರಕ್ಷತಾ ಕಾರಣಗಳಿಗಾಗಿ ಮತ್ತು ಕಳ್ಳರನ್ನು ಹೆದರಿಸಲು ಸಿಸಿಟಿವಿ ಕ್ಯಾಮೆರಾಗಳನ್ನು ಆಳವಡಿಸಲಾಗುತ್ತೆ. ಆದರೆ ಈ ಕಳ್ಳ ಯಾವುದನ್ನು ಲೆಕ್ಕಿಸಿಲ್ಲ. ಅಂಗಡಿಯೊಳಗಿದ್ದ ಸಿಸಿಟಿವಿ ಕ್ಯಾಮೆರಾ ಕಣ್ಣಿಗೆ ಬಿದ್ದ ತಕ್ಷಣ ಡ್ಯಾನ್ಸ್ ಮಾಡತೊಡಗಿದ್ದಾನೆ. ಇದನ್ನೂ ಓದಿ: ತಾಯಿಯಾಗುತ್ತಿದ್ದಾರೆ ಚಂದ್ರನ ರಾಣಿ ಶ್ರಿಯಾ ಸರನ್

ಅಕ್ಟೋಬರ್ 2018 ರಲ್ಲಿ ಅಹಮದಾಬಾದ್‍ನಲ್ಲಿ ಇದೇ ರೀತಿಯ ಘಟನೆ ಸಂಭವಿಸಿದೆ. ಐದು ಜನರ ಗ್ಯಾಂಗ್‍ನ ಕಳ್ಳರಲ್ಲಿ ಒಬ್ಬ ಎಲ್ಲವನ್ನು ದೋಚಿದ ನಂತರ ಸಿಸಿಟಿವಿ ಮುಂದೆ ಬಂದು ಡ್ಯಾನ್ಸ್ ಮಾಡಿದ್ದನು.

Leave a Reply

Your email address will not be published.

Back to top button