ದಿಸ್ಪುರ್: ಮನೆಯೊಂದರಲ್ಲಿ ದರೋಡೆ ನಡೆಸಲು ಹೋಗಿದ್ದ ಕಳ್ಳನಿಗೆ ಹಸಿವೆಯಾಗಿದ್ದ ಕಾರಣ ಅಡುಗೆ ಮನೆಯಲ್ಲಿ ಕಿಚಡಿ ಬೇಯಿಸಲು ಹೋಗಿ ಸಿಕ್ಕಿ ಬಿದ್ದಿರುವ ಹಾಸ್ಯಕರ ಘಟನೆ ಗುವಾಹಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ವರದಿಗಳ ಪ್ರಕಾರ ಕಳ್ಳ ರಾತ್ರಿ ಹೊತ್ತು ಮನೆಯೊಂದಕ್ಕೆ ನುಗ್ಗಿದ್ದಾನೆ. ಈ ಸಂದರ್ಭದಲ್ಲಿ ಹಸಿದಿದ್ದ ಆತ ಮನೆಯ ಅಡುಗೆ ಮನೆಗೆ ಹೋಗಿ ಕಿಚಡಿ ಬೇಯಿಸಲು ಪ್ರಾರಂಭಿಸಿದ್ದಾನೆ. ಅಡುಗೆ ಮನೆಯಿಂದ ಬರುತ್ತಿದ್ದ ಶಬ್ಧವನ್ನು ಆಲಿಸಿದ ಮನೆಯವರು ತಕ್ಷಣ ಎಚ್ಚೆತ್ತುಕೊಂಡು ಆತನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಇದನ್ನೂ ಓದಿ: ವಿಶ್ವದಲ್ಲೇ ಎತ್ತರದ ಆದಿಗುರು ಶಂಕರಚಾರ್ಯರ ಪ್ರತಿಮೆ ಸ್ಥಾಪನೆ!
Advertisement
Advertisement
ಸ್ಥಳೀಯರು ಪೊಲೀಸರಿಗೆ ಇದರ ಬಗ್ಗೆ ಮಾಹಿತಿ ನೀಡಿದ್ದು, ಆತನನ್ನು ಬಂಧಿಸಲಾಗಿದೆ. ಈ ಹಾಸ್ಯಕರ ದರೋಡೆಯ ಘಟನೆಯನ್ನು ಅಸ್ಸಾಂ ಪೊಲೀಸರು ಟ್ಟಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Advertisement
The curious case of a cereal burglar!
Despite its many health benefits, turns out, cooking Khichdi during a burglary attempt can be injurious to your well being.
The burglar has been arrested and @GuwahatiPol is serving him some hot meals. pic.twitter.com/ehLKIgqcZr
— Assam Police (@assampolice) January 11, 2022
Advertisement
ಆಹಾರ ಕಳ್ಳನ ಕುತೂಹಲಕಾರಿ ಪ್ರಕರಣ! ಆಹಾರ ನಿಮ್ಮ ಆರೋಗ್ಯಕ್ಕೆ ಪ್ರಯೋಜನ ಉಂಟುಮಾಡುತ್ತದೆಯಾದರೂ ಕಳ್ಳತನದ ಸಮಯದಲ್ಲಿ ಕಿಚಡಿ ಬೇಯಿಸುವುದು ನಿಮ್ಮ ಯೋಗಕ್ಷೇಮಕ್ಕೆ ಹಾನಿಯುಂಟುಮಾಡುತ್ತದೆ. ಕಳ್ಳನನ್ನು ಬಂಧಿಸಲಾಗಿದೆ. ಹಾಗೂ ಗುವಾಹಟಿ ಪೊಲೀಸರು ಅವನಿಗೆ ಬಿಸಿ ಊಟವನ್ನು ನೀಡುತ್ತಿದ್ದಾರೆ ಎಂದು ವ್ಯಂಗ್ಯವಾಗಿ ಟ್ಟಿಟ್ಟರ್ನಲ್ಲಿ ಬರೆದಿದ್ದಾರೆ. ಇದನ್ನೂ ಓದಿ: ಪ್ರತಿಯೊಬ್ಬರಿಗೂ ಓಮಿಕ್ರಾನ್ ಹರಡುತ್ತೆ, ಬೂಸ್ಟರ್ನಿಂದಲೂ ಅದನ್ನು ತಡೆಯಲು ಸಾಧ್ಯವಿಲ್ಲ: ICMR ವೈದ್ಯ