ರಾಯಪುರ: ದೇಶದಲ್ಲಿ ನಿತ್ಯ ಒಂದಿಲ್ಲೊಂದು ಕಳ್ಳತನ ಪ್ರಕರಣಗಳನ್ನು ನೋಡುತ್ತಲೇ ಇದ್ದೇವೆ. ಕೆಲವು ಸಂದರ್ಭಗಳಲ್ಲಿ ಕಳ್ಳತನ ಮಾಡುವಾಗ ಕೊಲೆಗಳೂ (Murder) ನಡೆದಿವೆ. ಆದರೆ ಇಲ್ಲೊಬ್ಬ ಕಳ್ಳ, ಪೊಲೀಸರಿಗೆ (Police) ಸಿಕ್ಕಿಬಿದ್ದ ನಂತರ ಪ್ರಾಮಾಣಿಕವಾಗಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.
View this post on Instagram
Advertisement
ಛತ್ತೀಸ್‌ಗಢದ ದುರ್ಗ್‌ನ ಪೊಲೀಸ್ ಠಾಣೆಯೊಂದರಲ್ಲಿ (Chhattisgarh Police) ಕಳ್ಳನೊಬ್ಬ ತಪ್ಪೊಪ್ಪಿಗೆ ಹೇಳಿಕೆ ನೀಡಿರುವ ವೀಡಿಯೋ ಜಾಲತಾಣಗಳಲ್ಲಿ (Social Media) ಸದ್ದು ಮಾಡುತ್ತಿದೆ. ವೀಡಿಯೋನಲ್ಲಿ ಕಳ್ಳನ ಹೇಳಿಕೆ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. ನೆಟ್ಟಿಗರು ಆತನಿಗೆ `ಕ್ರಾಂತಿಕಾರಿ ಕಳ್ಳ’ ಎಂದು ಬಿರುದು ನೀಡಿದ್ದಾರೆ. ಇದನ್ನೂ ಓದಿ: ತನ್ನಿಂದಲೇ ವಂಶ ಬೆಳೆಯಲೆಂದು ಸೊಸೆಯ ಮೇಲೆ ಕಣ್ಣಿಟ್ಟ ಮಾವನ ಕೊಲೆ
Advertisement
Advertisement
ವಿಚಾರಣೆ (Police Enquiry) ವೇಳೆ ನಾನು ಕೇವಲ 10 ಸಾವಿರ ರೂ. ಕದ್ದಿದ್ದೇನೆ. ಕಳ್ಳತನ ಮಾಡಿದ್ದನ್ನು ದನಕರುಗಳ ಆಹಾರಕ್ಕಾಗಿ ಖರ್ಚು ಮಾಡುತ್ತಿದ್ದೆ, ಕದ್ದ ಹಣದಿಂದಲೇ ಬಡವರಿಗೆ ಕಂಬಳಿ ಹಂಚಿದ್ದೇನೆ. ನನಗೆ ಕಳ್ಳತನ ಮಾಡುವಾಗ ಚೆನ್ನಾಗಿಯೇ ಇತ್ತು. ಆದರೆ ಈಗ ವಿಷಾದಿಸುತ್ತೇನೆ. ನನಗೆ ನನ್ನ ತಪ್ಪಿನ ಅರಿವಾಗಿದೆ ಎಂದು ಹೇಳಿಕೊಂಡಿದ್ದಾನೆ. ಇದನ್ನೂ ಓದಿ: ಕಳ್ಳತನವನ್ನೇ ವೃತ್ತಿ ಮಾಡ್ಕೊಂಡಿದ್ದ ದಂಪತಿ ಅರೆಸ್ಟ್ – ಬಂಧಿತರಿಂದ 5 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನ ವಶಕ್ಕೆ
Advertisement
ಛತ್ತಿಸ್‌ಗಢದ ದುರ್ಗ್ ಎಸ್ಪಿ ಡಾ. ಅಭಿಷೇಕ್ ಪಲ್ಲವ ಕಳ್ಳನನ್ನು ವಿಚಾರಣೆ ನಡೆಸಿದ್ದಾರೆ.