ನವದೆಹಲಿ: ಮೊಬೈಲ್ ಕಳೆದುಕೊಂಡ್ರೆ ಅದನ್ನ ಪತ್ತೆ ಮಾಡಲು ಅನೇಕ ತಂತ್ರಜ್ಞಾನವಿದೆ. ಅಷ್ಟಿದ್ದರೂ ಕೆಲವೊಮ್ಮೆ ಕಳೆದುಕೊಂಡ ಮೊಬೈಲ್ ಟ್ರೇಸ್ ಮಾಡಲು ಸಾಧ್ಯವಾಗುವುದಿಲ್ಲ. ಆದ್ರೆ ತಂತ್ರಜ್ಞಾನದ ಸಹಾಯದಿಂದಲೇ ಮಹಿಳೆಯೊಬ್ಬರು ಕಳೆದುಕೊಂಡಿದ್ದ ತನ್ನ ಮೊಬೈಲ್ ವಾಪಸ್ ಪಡೆದಿದ್ದಾರೆ.
Advertisement
ವ್ಯಕ್ತಿಯೊಬ್ಬ ಮೊಬೈಲ್ ಕಳ್ಳತನ ಮಾಡಿದ್ದು, ಅದರಲ್ಲಿ ಸೆಲ್ಫೀ ಕ್ಲಿಕ್ ಮಾಡಿ ಸಿಕ್ಕಿಬಿದ್ದಿದ್ದಾನೆಂದು ಮಂಗಳವಾರದಂದು ಪೊಲೀಸರು ಹೇಳಿದ್ದಾರೆ. ನವೆಂಬರ್ 2ರಂದು ಕೇಂದ್ರ ದೆಹಲಿಯ ದರ್ಯಾಗಂಜ್ ಪ್ರದೇಶದಲ್ಲಿ ಸಂಗೀತಾ ಅಗರ್ವಾಲ್ ಎಂಬವರು ಬಸ್‍ನಲ್ಲಿ ಪ್ರಯಾಣ ಮಾಡುವಾಗ ವ್ಯಕ್ತಿಯೊಬ್ಬ ಅವರ ಫೋನ್ ಕಳ್ಳತನ ಮಾಡಿದ್ದ. ನಸೀಮ್ ಮೊಹಮ್ಮದ್ ಎಂಬವನು ಕಳ್ಳತನ ಮಾಡಿದ್ದಾನೆಂದು ಪೊಲೀಸರು ಪತ್ತೆ ಮಾಡಿದ್ದಾರೆ. ಆತನ ಮನೆಯಿಂದ ಫೋನನ್ನು ವಶಪಡಿಸಿಕೊಳ್ಳಲಾಗಿದೆ. ಆದ್ರೆ ಆರೋಪಿ ತಲೆಮರೆಸಿಕೊಂಡಿದ್ದಾನೆ.
Advertisement
Advertisement
ಸಿಕ್ಕಿಬಿದ್ದಿದ್ದು ಹೇಗೆ?: ಮೊಬೈಲ್ ಕಳೆದುಕೊಂಡಿದ್ದ ಮಹಿಳೆಯ ಇ-ಮೇಲ್‍ಗೆ ಶುಕ್ರವಾರದಂದು ಅಪರಿಚಿತ ವ್ಯಕ್ತಿಯ ಫೋಟೋವೊಂದು ಬಂದಿತ್ತು. ಮೊಬೈಲ್‍ನಲ್ಲಿದ್ದ ವಿಶಿಷ್ಟ ಫೀಚರ್‍ನಿಂದಾಗಿ ಆ ಮೊಬೈಲ್‍ನಲ್ಲಿ ತೆಗೆದ ಎಲ್ಲಾ ಫೋಟೋಗಳೂ ಇ-ಮೇಲ್‍ಗೆ ಬರುವಂತೆ ಮಾಡಲಾಗಿತ್ತು. ಕಳ್ಳತನ ಮಾಡಿದ್ದ ವ್ಯಕ್ತಿ ಆ ಫೋನಿನಿಂದ ಸೆಲ್ಫೀ ಕ್ಲಿಕ್ಕಿಸಿದ್ದು, ಆತನ ಫೋಟೋ ಇ-ಮೇಲ್ ಮೂಲಕ ಮಹಿಳೆಗೆ ತಲುಪಿತ್ತು. ಇದನ್ನ ಇಟ್ಟುಕೊಂಡು ಮಹಿಳೆ ಶುಕ್ರವಾರದಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
Advertisement
ಫೋಟೋ ಆಧಾರದ ಮೇಲೆ ಆರೋಪಿಯನ್ನು ಪತ್ತೆಹಚ್ಚಿದೆವು ಎಂದು ಪೊಲೀಸರು ಹೇಳಿದ್ದಾರೆ.