ಚಿಕ್ಕೋಡಿ: ಟೊಮೆಟೋ (Tomato) ಕಳ್ಳತನ ಮಾಡುವಾಗ ವ್ಯಕ್ತಿಯೋರ್ವ ರೆಡ್ ಹ್ಯಾಂಡ್ ಆಗಿ ರೈತನ ಕೈಯಲ್ಲಿ ಸಿಕ್ಕಿಬಿದ್ದ ಘಟನೆ ಬೆಳಗಾವಿ (Belegavi) ಜಿಲ್ಲೆಯ ರಾಯಬಾಗ ತಾಲೂಕಿನ ಯಲ್ಪಾರಟ್ಟಿ ಗ್ರಾಮದಲ್ಲಿ ನಡೆದಿದೆ.
ಟೊಮೆಟೋ ಬೆಳೆದಿದ್ದ ರೈತ ಕುಮಾರ್ ಅಲಗೌಂಡ ಗೂಡೋಡಗಿ ಕೈಯಲ್ಲಿ ಟೊಮೆಟೋ ಕಳ್ಳತನ (Theft) ಮಾಡುವಾಗ ಕಳ್ಳ ಭುಜಪ್ಪ ಗಾಣೀಗೇರ ಸಿಕ್ಕಿಬಿದ್ದಿದ್ದಾನೆ. ಯಲ್ಪಾರಟ್ಟಿ ಗ್ರಾಮದಲ್ಲಿ ಅರ್ಧ ಎಕರೆ ಜಾಗದಲ್ಲಿ ರೈತ ಟೊಮೆಟೋ ಬೆಳೆದಿದ್ದ. ಕಳೆದ 2 ಬಾರಿ 25 ಕೆಜಿಯ 200 ಟ್ರೇ ಟೊಮೆಟೋ ಕಳ್ಳತನವಾಗಿದ್ದರಿಂದ ರೈತ ಎಚ್ಚೆತ್ತುಕೊಂಡಿದ್ದು, ಮಂಗಳವಾರ ಬೆಳ್ಳಂ ಬೆಳಗ್ಗೆ 5:30ರ ಸುಮಾರಿಗೆ ಕಳ್ಳತನ ಮಾಡುವಾಗ ಭುಜಪ್ಪ ಸಿಕ್ಕಿಬಿದ್ದಿದ್ದಾನೆ. ಇದನ್ನೂ ಓದಿ: ಹೆಣ್ಣಿನ ವ್ಯಾಮೋಹಕ್ಕೆ ಬಿದ್ದು 41 ಲಕ್ಷ ಕಳೆದುಕೊಂಡ ಯುವಕ
Advertisement
Advertisement
ಯಲ್ಪಾರಟ್ಟಿ ಗ್ರಾಮದ ಪಕ್ಕದ ಗ್ರಾಮ ಸಿದ್ದಾಪುರ ನಿವಾಸಿ ಭುಜಪ್ಪ ಗಾಣಿಗೇರ ಕಳೆದ ಹಲವು ದಿನಗಳಿಂದ ಟೊಮೆಟೋ ಕಳ್ಳತನ ಮಾಡುತ್ತಿದ್ದ ಎಂದು ರೈತ ಕುಮಾರ್ ಆರೋಪಿಸಿದ್ದಾರೆ. ಕಳ್ಳತನ ಮಾಡುವದನ್ನು ಗಮನಿಸಿ 112ಕ್ಕೆ ಕರೆ ಮಾಡಿದ್ದು, ಟೊಮೆಟೋ ಕಳ್ಳ ಭುಜಪ್ಪ ಗಾಣಿಗೇರನನ್ನು ಸ್ಥಳೀಯರ ಸಹಾಯದಿಂದ ಪೋಲಿಸರಿಗೆ ಒಪ್ಪಿಸಿದ್ದಾರೆ. ಘಟನೆ ಸಂಬಂಧ ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ತರಕಾರಿ ಬೆಲೆಯೂ ತುಟ್ಟಿ – ಗ್ರಾಹಕರಿಗೆ ತಟ್ಟಿದ ಬೆಲೆ ಏರಿಕೆ ಬಿಸಿ; ಯಾವ ತರಕಾರಿಗೆ ಎಷ್ಟು ದರ?
Advertisement
Web Stories