ಚಾಮರಾಜನಗರ: ದೇವರಿಗೆ ಕೈ ಮುಗಿದು ಚಿನ್ನದ ತಾಳಿ ಕದ್ದ ಖದೀಮನೋರ್ವ ಅದನ್ನು ಅಡವಿಡಲು ಹೋಗುವಾಗ ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ನಡೆದಿದೆ.
ಹನೂರು ತಾಲೂಕಿನ ರಾಮಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆಂಗದಾರಹಳ್ಳಿಯ ಗ್ರಾಮದೇವತೆ ರೋಡ್ ಮಾರಮ್ಮ ದೇವಸ್ಥಾನದಲ್ಲಿ ಕಳ್ಳತನ ಮಾಡಿದ್ದ ಪಳನಿ ಮೇಡು ಗ್ರಾಮದ ನಿವಾಸಿ ಮುರುಗೇಶ್(42) ಬಂಧಿತ ಆರೋಪಿ. ಇದನ್ನೂ ಓದಿ: ಪ್ರೀತಿಸಿದವನೊಂದಿಗೆ ಮನೆಬಿಟ್ಟು ಹೋದ ಮಗಳು – ಮನನೊಂದು ಒಂದೇ ಕುಟುಂಬದ ಮೂವರು ಆತ್ಮಹತ್ಯೆ
ಹನೂರು ತಾಲೂಕಿನ ರಾಮಪುರ ಪೊಲೀಸ್ ಠಾಣ ವ್ಯಾಪ್ತಿಯ ಚೆಂಗದಾರಹಳ್ಳಿ ಗ್ರಾಮದ ರೋಡ್ ಮಾರಿಯಮ್ಮ ದೇವಸ್ಥಾನದಲ್ಲಿ ಮೇ 19ರಂದು ದೇವರ ಕೊರಳಿಗೆ ಹಾಕಿದ್ದ 10 ಗ್ರಾಂ ಚಿನ್ನದ ತಾಳಿಯನ್ನು ಈತ ಕಳ್ಳತನ ಮಾಡಿದ್ದ. ಈ ಸಂಬಂಧ ಅರ್ಚಕ ರಾಮಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಕಳ್ಳನ ಪತ್ತೆಗೆ ಬಲೆ ಬೀಸಿ ಸಿಸಿಟಿವಿಗಳಲ್ಲಿ ಸೆರೆಯಾಗಿದ್ದ ಕಳ್ಳನ ಬೆನ್ನುಬಿದ್ದಿದ್ದರು.
ಕೌದಳ್ಳಿಯ ಗಿರವಿ ಅಂಗಡಿಯಲ್ಲಿ ದೇವಸ್ಥಾನದ ಚಿನ್ನದ ತಾಳಿ ಮಾರಾಟ ಮಾಡಲು ನಿಂತಿದ್ದ ವೇಳೆ ಪೊಲೀಸರು ಆತನನ್ನು ವಶಕ್ಕೆ ಪಡೆದು ಹಿರಿಯ ಅಧಿಕಾರಿಗಳ ಮುಂದೆ ಹಾಜರುಪಡಿಸಿದ್ದಾರೆ. ಹೆಚ್ಚಿನ ವಿಚಾರಣೆಯ ನಂತರ ದೇವಸ್ಥಾನದ ಗರ್ಭಗುಡಿಯ ದೇವರ ಮೇಲಿದ್ದ 10 ಗ್ರಾಂ ಚಿನ್ನದ ತಾಳಿಯನ್ನು ಕದ್ದಿರುವುದಾಗಿ ತಪ್ಪು ಒಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ಅಡ್ರೆಸ್ ತಪ್ಪಾಗಿದ್ದಕ್ಕೆ ಗಲಾಟೆ – ಗ್ರಾಹಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಡೆಲಿವರಿ ಬಾಯ್!