ಹುಬ್ಬಳ್ಳಿ: ಟಾಯ್ಲೆಟ್ ಕಿಟಕಿ ಮುರಿದು 6 ಲಕ್ಷ ಮೌಲ್ಯದ 62 ಗ್ರಾಂ ಚಿನ್ನ ಕಳ್ಳತನ ಮಾಡಿದ್ದ ಖದೀಮನನ್ನು ಹುಬ್ಬಳ್ಳಿಯ (Hubballi) ಬೆಂಡಿಗೇರಿ ಪೊಲೀಸರು (Bendigeri Police) ಬಂಧಿಸಿದ್ದಾರೆ.
ನಗರದ ದೊಡ್ಡಮನಿ ಕಾಲೋನಿಯ ಜಾಫರ್ ಬೇಪಾರಿ(24) ಬಂಧಿತ ಕಳ್ಳ. ಇದನ್ನೂ ಓದಿ: ಕಲಬುರಗಿ ಗುತ್ತಿಗೆದಾರನಿಗೆ ಸರ್ಕಾರದ ವರ್ಕ್ ಆರ್ಡರ್ ಕೊಡಿಸುವುದಾಗಿ ಆಮಿಷ – 1.21 ಕೋಟಿ ವಂಚನೆ ಆರೋಪ
ಆರೋಪಿ ಜಾಫರ್, ಮನೆಯಲ್ಲಿ ಯಾರು ಇಲ್ಲದನ್ನು ಗಮನಿಸಿ, ಟಾಯ್ಲೆಟ್ ಕಿಟಕಿ ಮುರಿದು ಮನೆ ಕಳ್ಳತನ ಮಾಡುತ್ತಿದ್ದ. ಅದೇ ದುಡ್ಡಿನಲ್ಲಿ ಮೋಜು ಮಸ್ತಿ ಮಾಡುತ್ತಿದ್ದ. ಬೆಂಡಿಗೇರಿ ಪೊಲೀಸರು ಆರೋಪಿ ಜಾಫರ್‌ನನ್ನು ಬಂಧಿಸಿ, ಜೈಲಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಶಾಲಾ-ಕಾಲೇಜುಗಳಿಗೆ 2 ದಿನ ರಜೆ ಘೋಷಣೆ
ಕಳೆದ 1 ತಿಂಗಳ ಹಿಂದೆ ನಗರದಲ್ಲಿ ಮನೆಗಳಲ್ಲಿ ಸರಣಿ ಕಳ್ಳತನವಾಗಿತ್ತು. ಕೂಡಲೇ ಅಲರ್ಟ್ ಆದ ಇನ್ಸ್ಪೆಕ್ಟರ್ ಎಸ್.ಆರ್ ನಾಯಕ್ ನೇತೃತ್ವದ ತಂಡ, ಸಿಸಿ ಕ್ಯಾಮೆರಾಗಳಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಆರೋಪಿಯ ಜಾಡು ಹಿಡಿದು ಬಂಧಿಸಿದ್ದಾರೆ. ಇದನ್ನೂ ಓದಿ: ಭಯೋತ್ಪಾದನೆ ವಿರುದ್ಧ ಭಾರತದ ದಿಟ್ಟ ಹೋರಾಟಕ್ಕೆ ಬೆಂಬಲ – ಸ್ಲೊವೇನಿಯಾದಲ್ಲಿ ಸಂಸದ ಕ್ಯಾ. ಚೌಟ ಒಳಗೊಂಡ ಸರ್ವಪಕ್ಷ ನಿಯೋಗ
ಬಂಧಿತ ಆರೋಪಿಯಿಂದ 6 ಲಕ್ಷ ಮೌಲ್ಯದ 62 ಗ್ರಾಂ ತೂಕದ ಚಿನ್ನ ಹಾಗೂ 27 ಸಾವಿರ ಮೌಲ್ಯದ ಬೆಳ್ಳಿ ಸಾಮಗ್ರಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.