– ವಿರೋಧ ಪಕ್ಷಗಳ ಟೀಕೆಗೆ ದೆಹಲಿ ಸರ್ಕಾರದಿಂದ ಸ್ಪಷ್ಟನೆ
ನವದೆಹಲಿ: ಮಾನ್ಸೂನ್ ಅಂತ್ಯವಾದ ಬೆನ್ನಲ್ಲೇ ದೆಹಲಿಯಲ್ಲಿ ಮಾಲಿನ್ಯದ (Delhi Pollution) ಪ್ರಮಾಣ ಹೆಚ್ಚುತ್ತಿದ್ದು ವಾಯು ಮಾಲಿನ್ಯದ ಜೊತೆಗೆ ಜಲ ಮಾಲಿನ್ಯವೂ ಅಧಿಕವಾಗಿದೆ. ದೆಹಲಿಯಲ್ಲಿ ವಾಯು ಮಾಲಿನ್ಯ ಸೂಚ್ಯಂಕ AQI 300ರ ಗಡಿ ದಾಟಿದರೆ ಮತ್ತೊಂದು ಕಡೆ ಯಮುನಾ ನದಿಯಲ್ಲಿ (Yamuna River) ಭಾರಿ ಪ್ರಮಾಣದ ನೊರೆ (Foam) ಉತ್ಪತಿಯಾಗಿದೆ.
Advertisement
ಛತ್ ಪೂಜೆಗೂ ಮುನ್ನವೇ ಓಖಲಾ ಬ್ಯಾರೇಜ್ ಬಳಿ ಯಮುನಾ ನದಿ ನೀರು ದುಸ್ತರವಾಗಿದೆ. ಯಮುನಾ ನದಿಯಲ್ಲಿ ಮಾಲಿನ್ಯದ ಪ್ರಮಾಣ ಹೆಚ್ಚಾದ ಕಾರಣ ವಿಷಪೂರಿತ ನೊರೆ ನದಿಯಲ್ಲಿ ತೇಲುತ್ತಿರುವುದು ಕಂಡುಬಂದಿದೆ. ಹಿಂದಿನ ವರ್ಷಗಳಿಗಿಂತ ಹೆಚ್ಚು ಪ್ರಮಾಣದ ಮಾಲಿನ್ಯ ಈ ಬಾರಿ ಕಂಡು ಬರುತ್ತಿದೆ. ಇದನ್ನೂ ಓದಿ: ಇಸ್ರೇಲ್ ಅಧ್ಯಕ್ಷ ನೆತನ್ಯಾಹು ನಿವಾಸದ ಮೇಲೆ ಹಿಜ್ಬುಲ್ಲಾ ಡ್ರೋನ್ ದಾಳಿ
Advertisement
Advertisement
ಇನ್ನು ದೆಹಲಿಯ ನಗರದಲ್ಲಿ ದೀಪಾವಳಿಗೂ ಮುನ್ನ ಮಾಲಿನ್ಯ ಪ್ರಮಾಣದಲ್ಲಿ ಹೆಚ್ಚಳ ಕಂಡು ಬಂದಿದೆ. ದೆಹಲಿಯ ಪ್ರಮುಖ ಪ್ರದೇಶದಲ್ಲಿ AQI 300 ದಾಟಿದೆ. ಇಂಡಿಯಾ ಗೇಟ್ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಬೆಳಗ್ಗೆ ಉಸಿರುಗಟ್ಟುವ ವಾತಾವರಣ ನಿರ್ಮಿಸಿತ್ತು. ದೆಹಲಿ ಹೊರ ಭಾಗದಲ್ಲಿ ಗೌತಮ್ ಬುಧ್ ನಗರವು 11.4%, ಬುಲಂದ್‌ಶಹರ್ 7.8%, ಗಾಜಿಯಾಬಾದ್ 6.6% ಮತ್ತು ಫರಿದಾಬಾದ್ 4.8% ಮಾಲಿನ್ಯಕ್ಕೆ ಕೊಡುಗೆ ನೀಡಿವೆ. ಇದನ್ನೂ ಓದಿ: ಮುಡಾ ಫೈಲ್‌ಗಳನ್ನು ಸುಟ್ಟು ಹಾಕಿರುವ ಬೈರತಿ ಸುರೇಶ್‌ರನ್ನು ಕೂಡಲೇ ಬಂಧಿಸಿ – ಶೋಭಾ ಕರಂದ್ಲಾಜೆ
Advertisement
ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಮಾತನಾಡಿ, ಆಪ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಯಮುನಾ ನದಿಯ ನೀರು ವಿಷಪೂರಿತವಾಗಿದೆ. ಅರವಿಂದ್ ಕೇಜ್ರಿವಾಲ್ ಅವರು 2025ರ ವೇಳೆಗೆ ಯಮುನಾ ನದಿಯನ್ನು ಸ್ವಚ್ಛಗೊಳಿಸುವುದಾಗಿ ಹೇಳಿದ್ದರು. ಈವರೆಗೂ ಏನು ಮಾಡಿದ್ದಾರೆ? ಎಂದು ಹರಿಹಾಯ್ದರು. ಇದನ್ನೂ ಓದಿ: ನಾಗಸಂಧ್ರ to ಮಾದಾವರ ಮೆಟ್ರೋ ಉದ್ಘಾಟನೆ ಸಿದ್ಧತೆಗೆ ಬಿಬಿಎಂಪಿಗೆ ಪತ್ರ
ಜನರು ಯಮುನಾ ನದಿಯಲ್ಲಿ ಛತ್ ಪೂಜೆಯ ಹಬ್ಬವನ್ನು ಆಚರಿಸುತ್ತಾರೆ. ಅವರು ಯಾವ ರೋಗಗಳನ್ನು ಎದುರಿಸಬೇಕಾಗುತ್ತದೆ ಎಂದು ನೀವು ಊಹಿಸಬಲ್ಲಿರಾ? ಎಎಪಿ ನೇತೃತ್ವದ ದೆಹಲಿ ಸರ್ಕಾರವು ಯಮುನಾ ನದಿಯನ್ನು ಸ್ವಚ್ಛಗೊಳಿಸಲು ಪಡೆದ ಎಲ್ಲಾ ಹಣವನ್ನು ಜಾಹೀರಾತುಗಳಿಗಾಗಿ ಖರ್ಚು ಮಾಡಿತು. ಈ ಪರಿಸ್ಥಿತಿಗೆ ಉತ್ತರ ಪ್ರದೇಶ ಮತ್ತು ಹರಿಯಾಣವನ್ನು ದೂರುತ್ತಾರೆ. ದೆಹಲಿಯಲ್ಲಿ ವಿಷಪೂರಿತ ಗಾಳಿ ಮತ್ತು ನೀರಿಗೆ ವಿಷಕಾರಿ ರಾಜಕಾರಣವೇ ಕಾರಣ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮುಡಾ ಕೇಸ್‌ನಲ್ಲಿ ಆರೋಪಿಗಳ ಪಾಸ್‌ಪೋರ್ಟ್ ವಶಪಡಿಸಿಕೊಳ್ಳಿ: ಇ.ಡಿಗೆ ಅಶೋಕ್ ಮನವಿ
ದೆಹಲಿಯಲ್ಲಿ ಹದಗೆಡುತ್ತಿರುವ ಗಾಳಿಯ ಗುಣಮಟ್ಟ ಕುರಿತು ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ ಮಾತನಾಡಿ, ಎಎಪಿ ನೇತೃತ್ವದ ದೆಹಲಿ ಸರ್ಕಾರ ದೆಹಲಿಯಲ್ಲಿ ಮಾಲಿನ್ಯವನ್ನು ನಿಯಂತ್ರಿಸಲು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ. ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಕಳಪೆಯಾಗಿದೆ. ದೆಹಲಿಯ ಜನರ ಆರೋಗ್ಯದ ಜೊತೆ ಆಟವಾಡುವುದು ಎಎಪಿ ಸರ್ಕಾರದ ಉದ್ದೇಶವಾಗಿದೆ. ಎಎಪಿ ಸರ್ಕಾರಕ್ಕೆ ದೆಹಲಿ ಜನತೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಉತ್ತರ ಕುಮಾರ ಇದ್ದಂತೆ: ಈಶ್ವರಪ್ಪ ಲೇವಡಿ
ಇನ್ನು ವಿರೋಧ ಪಕ್ಷಗಳ ಟೀಕೆಗೆ ದೆಹಲಿ ಸರ್ಕಾರ ಸ್ಪಷ್ಟನೆ ನೀಡಿದೆ. ಅಕ್ಟೋಬರ್ 7 ರಿಂದ ಧೂಳಿನ ಮಾಲಿನ್ಯದ ವಿರುದ್ಧ ದೆಹಲಿ ಸರ್ಕಾರವು ಧೂಳು ವಿರೋಧಿ ಅಭಿಯಾನವನ್ನು ನಡೆಸುತ್ತಿದೆ. ಇದರ ಅಡಿಯಲ್ಲಿ ಇದುವರೆಗೆ 523 ತಂಡಗಳು 2764 ನಿರ್ಮಾಣ ಸ್ಥಳಗಳನ್ನು ಪರಿಶೀಲಿಸಿದೆ. 17.40 ಲಕ್ಷ ರೂಪಾಯಿ ದಂಡವನ್ನು ವಿಧಿಸಲಾಗಿದೆ. ಧೂಳು ವಿರೋಧಿ ಅಭಿಯಾನವನ್ನು ಗ್ರೀನ್ ವಾರ್ ರೂಮ್‌ನಿಂದ ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ಧೂಳು ತಡೆಗೆ ಸಂಬಂಧಿಸಿದ 14 ನಿಯಮಗಳನ್ನು ಜಾರಿಗೊಳಿಸುವುದು ಅಗತ್ಯ. ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪರಿಸರ ಸಚಿವ ಗೋಪಾಲ್ ರೈ ಕಚೇರಿ ಮಾಹಿತಿ ನೀಡಿದೆ. ಇದನ್ನೂ ಓದಿ: ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ನೂತನ ಅತಿಥಿಗಳ ಆಗಮನ